’ನಾವು ಎಲ್ಲರಿಗೂ ಸಹಾಯ ಮಾಡೋಕೆ ಆಗೊಲ್ಲ, ಆದರೆ ಕೆಲವರಿಗಂತೂ ಹೆಲ್ಪ್ ಮಾಡಬಹುದು’ ವೀರೂ ಹೀಗಂದಿದ್ದೇಕೆ..?

 |  First Published Jun 7, 2018, 10:11 AM IST

ವಿರೇಂದ್ರ ಸೆಹ್ವಾಗ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಮೆಂಟರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.


ನವದೆಹಲಿ[ಜೂ.07]: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸದಾ ಒಂದೊಲ್ಲೊಂದು ಟ್ವೀಟ್ ಮೂಲಕ ಸುದ್ದಿಯಾಗುತ್ತಲೇ ಇರುವುದು ಸರ್ವೇ ಸಾಮಾನ್ಯ. ಇದೀಗ ಅಪರೂಪದ ಸಂದೇಶವನ್ನು ಸೆಹ್ವಾಗ್ ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಅಂಧ ವ್ಯಕ್ತಿಯೋರ್ವರನ್ನು ಮಂಗವೊಂದು ರಸ್ತೆ ದಾಟಿಸುತ್ತಿರುವ ವಿಡಿಯೋವನ್ನು ಟ್ವಿಟರ್’ನಲ್ಲಿ ಹಂಚಿಕೊಂಡಿರುವ ಸೆಹ್ವಾಗ್ ’ನಾವು ಎಲ್ಲರಿಗೂ ಸಹಾಯ ಮಾಡೋಕೆ ಆಗೊಲ್ಲ, ಆದರೆ ಕೆಲವರಿಗಂತೂ ಹೆಲ್ಪ್ ಮಾಡಬಹುದು’ ಎಂಬ ಸಂದೇಶವನ್ನು ರವಾನಿಸಿದ್ದಾರೆ.

We can't help everyone, but everyone can help someone. pic.twitter.com/txTMl47ONn

— Virender Sehwag (@virendersehwag)

ವಿರೇಂದ್ರ ಸೆಹ್ವಾಗ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಮೆಂಟರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

Tap to resize

Latest Videos

 

click me!