ಸೆಹ್ವಾಗ್ ಪಾಕಿಸ್ತಾನದ ಈ ಬೌಲರ್ ಎದುರಿಸಲು ಹೆದರುತ್ತಿದ್ದರಂತೆ..!

By Web DeskFirst Published Oct 1, 2018, 4:15 PM IST
Highlights

ಎದುರಾಳಿ ಯಾರೇ ಇದ್ದರೂ ಮನಬಂದಂತೆ ದಂಡಿಸುತ್ತಿದ್ದ ಈ ಇಬ್ಬರು ಬ್ಯಾಟ್ಸ್’ಮನ್’ಗಳು ತಮ್ಮ ವೀಕ್ನೆಸ್ ಬಿಚ್ಚಿಟ್ಟಿದ್ದಾರೆ. ಯುಸಿ ಬ್ರೌಸರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ವಿಂಟ್ ವೆಬ್’ಪೋರ್ಟಲ್’ಗೆ ನೀಡಿದ ಸಂದರ್ಶನದಲ್ಲಿ ಅಪರೂಪದ ಮಾಹಿತಿ ಹೊರಹಾಕಿದ್ದಾರೆ. ಹೌದು, ಖಾಸಗಿ ವೆಬ್’ಸೈಟ್’ವೊಂದರಲ್ಲಿ ಈ ಇಬ್ಬರು ಮುಕ್ತವಾಗಿ ಮಾತನಾಡಿದ್ದು, ತಾವೆದುರಿಸಿದ ಕ್ಲಿಷ್ಟಕರ ಆಟಗಾರರು ಯಾರು ಎನ್ನುವ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಬೆಂಗಳೂರು[ಅ.01]: ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಎದುರಾಳಿ ಬೌಲರ್’ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹಾಗೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ತಮ್ಮ ಕಠಿಣ ಎದುರಾಳಿಗಳು ಯಾರು ಎನ್ನುವ ಕೂತೂಹಲಕ್ಕೆ ತೆರೆ ಎಳೆದಿದ್ದಾರೆ.

ಎದುರಾಳಿ ಯಾರೇ ಇದ್ದರೂ ಮನಬಂದಂತೆ ದಂಡಿಸುತ್ತಿದ್ದ ಈ ಇಬ್ಬರು ಬ್ಯಾಟ್ಸ್’ಮನ್’ಗಳು ತಮ್ಮ ವೀಕ್ನೆಸ್ ಬಿಚ್ಚಿಟ್ಟಿದ್ದಾರೆ. ಯುಸಿ ಬ್ರೌಸರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ವಿಂಟ್ ವೆಬ್’ಪೋರ್ಟಲ್’ಗೆ ನೀಡಿದ ಸಂದರ್ಶನದಲ್ಲಿ ಅಪರೂಪದ ಮಾಹಿತಿ ಹೊರಹಾಕಿದ್ದಾರೆ. ಹೌದು, ಖಾಸಗಿ ವೆಬ್’ಸೈಟ್’ವೊಂದರಲ್ಲಿ ಈ ಇಬ್ಬರು ಮುಕ್ತವಾಗಿ ಮಾತನಾಡಿದ್ದು ತಾವೆದುರಿಸಿದ ಕ್ಲಿಷ್ಟಕರ ಆಟಗಾರರು ಯಾರು ಎನ್ನುವ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ನಾನು ಶೋಯೆಬ್ ಅಖ್ತರ್ ಬೌಲಿಂಗ್ ಎದುರಿಸಲು ಹೆದರುತ್ತಿದ್ದೆ ಎಂದು ಸೆಹ್ವಾಗ್ ಹೇಳಿದ್ದಾರೆ. ಯಾವ ಎಸೆತ ಕಾಲಿಗೆ ಬೀಳುತ್ತೆ, ಯಾವ ಎಸೆತ ತಲೆಗೆ ಹೊಡೆಯುತ್ತೆ, ಮತ್ತೇ ಯಾವ ಎಸೆತ ಬೌನ್ಸರ್ ಬರುತ್ತೆ ಎಂದು ಅರ್ಥವಾಗುತ್ತಿರಲಿಲ್ಲ. ಆದರೂ ಅವರ ಬೌಲಿಂಗ್’ನಲ್ಲಿ ಬೌಂಡರಿ ಬಾರಿಸುವುದನ್ನು ಎಂಜಾಯ್ ಮಾಡುತ್ತಿದ್ದೆ ಎಂದು ಸೆಹ್ವಾಗ್ ಹೇಳಿದ್ದಾರೆ.

ಇನ್ನು ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸ್’ಮನ್ ನಿರ್ದಿಷ್ಟವಾಗಿ ತಾವು ಯಾವೊಬ್ಬ ಬೌಲರ್’ನನ್ನು ಎದುರಿಸಲು ಭಯ ಪಡುತ್ತಿರಲಿಲ್ಲವಂತೆ. ಆದರೆ ತಾವು ಸೆಹ್ವಾಗ್ ಅವರಿಗೆ ಬೌಲಿಂಗ್ ಮಾಡುವಾಗ ಹೆದರುತ್ತಿದ್ದೆ ಎಂದು ಹೇಳಿದ್ದಾರೆ.  

2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆದ್ದ ಕ್ಷಣಗಳು ತಮ್ಮ ಪಾಲಿಗೆ ಅವಿಸ್ಮರಣೀಯ ಎಂದು ಸೆಹ್ವಾಗ್ ಮೆಲುಕು ಹಾಕಿದರೆ, 2009ರ ಟಿ20 ವಿಶ್ವಕಪ್ ಗೆದ್ದಿದ್ದು ತಮ್ಮಿಷ್ಟದ ಕ್ಷಣವೆಂದು ಅಫ್ರಿದಿ ಹೇಳಿದ್ದಾರೆ. 
 

click me!