ವಿರಾಟ್ ನಾಳೆ ನಿವೃತ್ತಿ..? ಇದು ಸೆಹ್ವಾಗ್ ಸಿಡಿಸಿದ ಬಾಂಬ್...!

Published : Mar 06, 2017, 09:55 AM ISTUpdated : Apr 11, 2018, 12:49 PM IST
ವಿರಾಟ್ ನಾಳೆ ನಿವೃತ್ತಿ..? ಇದು ಸೆಹ್ವಾಗ್ ಸಿಡಿಸಿದ ಬಾಂಬ್...!

ಸಾರಾಂಶ

ಭಾನುವಾರ ಸಂಜೆ ಸೆಹ್ವಾಗ್ ಮಾಡಿರುವ ಟ್ವೀಟ್ ಅಂತೂ ವಿರಾಟ್ ಕೊಹ್ಲಿ ಅಭಿಮಾನಿಗಳ ಹೃದಯ ಬಡಿತವನ್ನೇ ನಿಲ್ಲುವಂತೆ ಮಾಡಿಬಿಟ್ಟಿತ್ತು.

ನವದೆಹಲಿ(ಮಾ.06): ಭಾರತ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮಾಡುವ ಟ್ವೀಟ್'ಗಳು ಒಂದಕ್ಕಿಂತ ಒಂದು ವಿಚಿತ್ರವಾಗಿರುತ್ತವೆ. ಅದರಲ್ಲೂ ಭಾನುವಾರ ಸಂಜೆ ಸೆಹ್ವಾಗ್ ಮಾಡಿರುವ ಟ್ವೀಟ್ ಅಂತೂ ವಿರಾಟ್ ಕೊಹ್ಲಿ ಅಭಿಮಾನಿಗಳ ಹೃದಯ ಬಡಿತವನ್ನೇ ನಿಲ್ಲುವಂತೆ ಮಾಡಿಬಿಟ್ಟಿತ್ತು.

ಸೆಹ್ವಾಗ್ ಟ್ವೀಟ್ ನೋಡಿ ಸಾಕಷ್ಟು ಮಂದಿ, ಆಸ್ಟ್ರೇಲಿಯಾ ವಿರುದ್ಧ ಮೊದಲೆರಡು ಟೆಸ್ಟ್'ನಲ್ಲಿ ತೀವ್ರ ನಿರಾಸೆ ಮೂಡಿಸಿರುವ ವಿರಾಟ್ ನಾಯಕತ್ವದಿಂದ ಕೆಳಗಿಳಿದು ಬಿಡುತ್ತಾರೆ ಅಂದುಕೊಂಡು ಬಿಟ್ಟರು.

ಆದರೆ ಸೆಹ್ವಾಗ್ ಮಾಡಿದ ಟ್ವೀಟ್ ವಿಷಯವೇನಪ್ಪಾ ಅಂದ್ರೆ, 'ವಿರಾಟ್ ನಿವೃತ್ತಿಯಾಗಲಿದೆ. ಹಳೆಯ ಹಡಗು ಯಾವತ್ತೂ ಸಾಯುವುದಿಲ್ಲ. ಅದರ ಸ್ಪೋರ್ತಿ ಯಾವಾಗಲೂ ಇರಲಿದೆ. ಭಾರತ ಜಲ ಸೇನೆಗೆ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದ #INS Viraat ಸೋಮವಾರದಂದು ಸೇವೆಯನ್ನು ಸ್ಥಗಿತಗೊಳಿಸಿದೆ. ಎಂದಿದ್ದರು.

 

ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಂಚಲನವನ್ನೇ ಮೂಡಿಸಿಬಿಟ್ಟಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

U19 Asia Cup: ಪಾಕಿಸ್ತಾನ ಎದುರು ಮುಗ್ಗರಿಸಿದ 14 ವರ್ಷದ ವೈಭವ್ ಸೂರ್ಯವಂಶಿ; ಸ್ಪರ್ಧಾತ್ಮಕ ಮೊತ್ತದತ್ತ ಯುವ ಪಡೆ ದಾಪುಗಾಲು
ಸಂಜು ಇನ್, ಗಿಲ್ ಔಟ್: ಮೂರನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ; ಯಾರಿಗೆಲ್ಲಾ ಸಿಗಲಿದೆ ಚಾನ್ಸ್?