ಭಾರತದ ಗೆಲುವಿಗೆ 7 ಮೆಟ್ಟಿಲುಗಳಷ್ಟೆ ಬಾಕಿ : ಮತ್ತೆ ಮಿಂಚಿದ ಕೊಹ್ಲಿ, ಜಡೇಜ

Published : Dec 05, 2017, 07:23 PM ISTUpdated : Apr 11, 2018, 12:47 PM IST
ಭಾರತದ ಗೆಲುವಿಗೆ 7 ಮೆಟ್ಟಿಲುಗಳಷ್ಟೆ ಬಾಕಿ : ಮತ್ತೆ ಮಿಂಚಿದ ಕೊಹ್ಲಿ, ಜಡೇಜ

ಸಾರಾಂಶ

ಕೊನೆಯ ದಿನವಾದ ನಾಳೆ ಭಾರತ ಗೆಲ್ಲಲು 7 ವಿಕೇಟ್'ಗಳು ಉರುಳಿಸಬೇಕಿದ್ದು ಶ್ರೀಲಂಕಾ ಕೂಡ ತನ್ನ ಗುರಿ ಮುಟ್ಟಲು 379 ರನ್'ಗಳು ಬೇಕಾಗಿದೆ.

ನವದೆಹಲಿ(ಡಿ.05): ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಗೆಲುವಿಗೆ ಭಾರತಕ್ಕೆ  7 ಮೆಟ್ಟಿಲುಗಳಷ್ಟೆ ಬಾಕಿಯಿದೆ. ನಾಲ್ಕನೆ ದಿನದಾಟದಲ್ಲಿ ಭಾರತದ ಆಟಗಾರರು ಮೇಲುಗೈ ಸಾಧಿಸಿದರು.

2ನೇ ಇನ್ನಿಂಗ್ಸ್'ನಲ್ಲಿ 246/5 ಡಿಕ್ಲೇರ್ಡ್ ಮಾಡಿಕೊಂಡ ಟೀಂ ಇಂಡಿಯಾ ಶ್ರೀಲಂಕಾ ಗೆಲುವಿಗೆ 410 ರನ್ ಗುರಿ ನೀಡಿದೆ. ದಿನದಾಟದ ಅಂತ್ಯದ ಹೊತ್ತಿಗೆ 2ನೇ ಇನ್ನಿಂಗ್ಸ್' ಆರಂಭಿಸಿದ ಸಂಹಳಿ ಪಡೆ 16 ಓವರ್'ಗಳ 31 ರನ್'ಗಳಿಗೆ 3 ವಿಕೇಟ್ ಕಳೆದುಕೊಂದು ಸೋಲಿನ ಸುಳಿಯತ್ತಾ ಸಾಗಿದೆ.

ಕೊನೆಯ ದಿನವಾದ ನಾಳೆ ಭಾರತ ಗೆಲ್ಲಲು 7 ವಿಕೇಟ್'ಗಳು ಉರುಳಿಸಬೇಕಿದ್ದು ಶ್ರೀಲಂಕಾ ಕೂಡ ತನ್ನ ಗುರಿ ಮುಟ್ಟಲು 379 ರನ್'ಗಳು ಬೇಕಾಗಿದೆ. ಸ್ಪಿನ್ನರ್ ಅಶ್ವಿನ್ ಇಬ್ಬರು ಪ್ರಮುಖ ಆಟಗಾರರ 2 ವಿಕೇಟ್ ಕಬಳಿಸಿದ್ದು, ಆರಂಭಿಕ ಬ್ಯಾಟ್ಸ್'ಮೆನ್ ಸಮರವಿಕ್ರಮ ಶಮಿ ಬೌಲಿಂಗ್'ಗೆ ಔಟಾಗಿದ್ದಾರೆ.

ಮತ್ತೆ ಮಿಂಚಿದ ಕೊಹ್ಲಿ, ರೋಹಿತ್, ಧವನ್     

2ನೇ ಇನ್ನಿಂಗ್ಸ್'ನಲ್ಲಿ ಶಿಖರ್ ಧವನ್(67),ಕೊಹ್ಲಿ(50), ರೋಹಿತ್ ಶರ್ಮಾ(50 ಅಜೇಯ) ಹಾಗೂ ಚೇತೇಶ್ವರ ಪೂಜಾರ (49) ರನ್ ಗಳಿಸಿ 246/5 ಡಿಕ್ಲೇರ್ಡ್ ಮಾಡಿಕೊಂಡು 410 ರನ್ ಗುರಿ ನೀಡಿದರು. ಟೀಂ ಇಂಡಿಯಾ ಕೊನೆಯ ದಿನದಲ್ಲಿ ಮಧ್ಯಾಹ್ನವೇ ಆಟ ಮುಗಿಸಿ ಸರಣಿಯನ್ನು 2-0 ಗೆಲ್ಲುವ ವಿಶ್ವಾಸದಲ್ಲಿದೆ.

ಸ್ಕೋರ್

ಶ್ರೀಲಂಕಾ ಮೊದಲ ಇನ್ನಿಂಗ್ಸ್ 373/10

(ಚಾಂಡಿಮಲ್ 164,ಶಮಿ 85/2, ಇಶಾಂತ್ 98/3, ಜಡೇಜಾ 86/2, ಅಶ್ವಿನ್ 80/3)

ಭಾರತ ದ್ವಿತೀಯ ಇನ್ನಿಂಗ್ಸ್ 246/5 ಡಿಕ್ಲೇರ್

(ಶಿಖರ್ ಧವನ್ 67,ಪೂಜಾರ 49, ಕೊಹ್ಲಿ 50,ರೋಹಿತ್ ಶರ್ಮಾ 50)

ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್ 31/3 (4ನೇ ದಿನದಂತ್ಯಕ್ಕೆ)

 (ರವೀಂದ್ರ ಜಡೇಜಾ 5/2)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು, ಇಸ್ಲಾಮಾಬಾದ್‌ನಲ್ಲಿ ಕೋಲಾಹಲ
ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!