ಕೆಕೆಆರ್’ಗೆ ಸವಾಲಿನ ಗುರಿ ನೀಡಿದ ಆರ್’ಸಿಬಿ; ವಿರಾಟ್ ಒನ್ ಮ್ಯಾನ್ ಶೋ

First Published Apr 29, 2018, 10:10 PM IST
Highlights

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್’ಸಿಬಿ ಉತ್ತಮ ಆರಂಭವನ್ನೇ ಪಡೆಯಿತು. ಎಬಿ ಡಿವಿಲಿಯರ್ಸ್ ಅನುಪಸ್ಥಿತಿಯಲ್ಲಿ ಸ್ಥಾನ ಪಡೆದ ಬ್ರೆಂಡನ್ ಮೆಕ್ಲಮ್, ಡಿಕಾಕ್ ಜೊತೆಗೆ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್’ಗೆ 67 ರನ್’ಗಳ ಜತೆಯಾಟವಾಡಿದ ಈ ಜೋಡಿಯನ್ನು ಕುಲ್ದೀಪ್ ಬೇರ್ಪಡಿಸಿದರು. ಡಿಕಾಕ್ 29 ರನ್ ಬಾರಿಸಿ ಕುಲ್ದೀಪ್’ಗೆ ವಿಕೆಟ್ ಒಪ್ಪಿಸಿದರು. ಮೆಕ್ಲಮ್ 38 ರನ್ ಸಿಡಿಸಿ ರಸೆಲ್ ಎಸೆತದಲ್ಲಿ ಕೀಪರ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಮರು ಎಸೆತದಲ್ಲೇ ಮನನ್ ವೋಹ್ರಾ ಕೂಡ ಪೆವಿಲಿಯನ್ ಸೇರಿಕೊಂಡರು. ಮೊದಲ 10 ಓವರ್ ಮುಕ್ತಾಯಕ್ಕೆ ಆರ್’ಸಿಬಿ 75 ರನ್ ಕಲೆ ಹಾಕಿತ್ತು.

ಬೆಂಗಳೂರು[ಏ.29]: ನಾಯಕ ವಿರಾಟ್ ಕೊಹ್ಲಿಯ ಆಕರ್ಷಕ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು 175 ರನ್’ಗಳ ಸವಾಲಿನ ಮೊತ್ತ ಕಲೆಹಾಕಿದ್ದು, ಕೆಕೆಆರ್’ಗೆ ಸ್ಪರ್ಧಾತ್ಮಕ ಗುರಿ ನೀಡಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್’ಸಿಬಿ ಉತ್ತಮ ಆರಂಭವನ್ನೇ ಪಡೆಯಿತು. ಎಬಿ ಡಿವಿಲಿಯರ್ಸ್ ಅನುಪಸ್ಥಿತಿಯಲ್ಲಿ ಸ್ಥಾನ ಪಡೆದ ಬ್ರೆಂಡನ್ ಮೆಕ್ಲಮ್, ಡಿಕಾಕ್ ಜೊತೆಗೆ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್’ಗೆ 67 ರನ್’ಗಳ ಜತೆಯಾಟವಾಡಿದ ಈ ಜೋಡಿಯನ್ನು ಕುಲ್ದೀಪ್ ಬೇರ್ಪಡಿಸಿದರು. ಡಿಕಾಕ್ 29 ರನ್ ಬಾರಿಸಿ ಕುಲ್ದೀಪ್’ಗೆ ವಿಕೆಟ್ ಒಪ್ಪಿಸಿದರು. ಮೆಕ್ಲಮ್ 38 ರನ್ ಸಿಡಿಸಿ ರಸೆಲ್ ಎಸೆತದಲ್ಲಿ ಕೀಪರ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಮರು ಎಸೆತದಲ್ಲೇ ಮನನ್ ವೋಹ್ರಾ ಕೂಡ ಪೆವಿಲಿಯನ್ ಸೇರಿಕೊಂಡರು. ಮೊದಲ 10 ಓವರ್ ಮುಕ್ತಾಯಕ್ಕೆ ಆರ್’ಸಿಬಿ 75 ರನ್ ಕಲೆ ಹಾಕಿತ್ತು.

ನಾಲ್ಕನೇ ವಿಕೆಟ್’ಗೆ ಜತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಮನ್ದೀಪ್ ಜೋಡಿ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 140ರ ಗಡಿ ಮುಟ್ಟಿಸಿದರು. ಮನ್ದೀಪ್ 19 ರನ್ ಬಾರಿಸಿ ರಸೆಲ್’ಗೆ ಮೂರನೇ ಬಲಿಯಾದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ನಾಯಕನ ಆಟವಾಡಿದ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ ಅಜೇಯ 68 ರನ್ ಸಿಡಿಸುವ ಮೂಲಕ ತಂಡವನ್ನು ಸವಾಲಿನ ಮೊತ್ತದತ್ತ ಕೊಂಡ್ಯೊಯ್ದರು.
ಸಂಕ್ಷಿಪ್ತ ಸ್ಕೋರ್:
RCB: 175
ವಿರಾಟ್ ಕೊಹ್ಲಿ: 68
ಆ್ಯಂಡ್ರೆ ರಸೆಲ್: 31/3 
(*ವಿವರ ಅಪೂರ್ಣ]

click me!