ಶೂನ್ಯದಲ್ಲೂ ಹೊಸ ದಾಖಲೆಗಳನ್ನು ಬರೆದ ವಿರಾಟ್ ಕೊಹ್ಲಿ

By Suvarna Web DeskFirst Published Feb 24, 2017, 10:59 AM IST
Highlights

2011ರ ವೆಸ್ಟ್ ಇಂಡೀಸ್'ನ ಬ್ರಿಡ್ಜ್'ಟೌನ್,ಮೆಲ್ಬೋರ್ನ್(2011), ಇಂಗ್ಲೆಂಡ್'ನ ಮ್ಯಾಂಚಿಸ್ಟ್'ರ್'ನಲ್ಲಿ (2014)ರಲ್ಲಿ ಮಾತ್ರ '0'ಗಳಿಸಿ ಔಟಾಗಿದ್ದರು.

ಪುಣೆ(ಫೆ.24): ಭಾರತ ಕ್ರಿಕೆಟ್'ನಲ್ಲಿ ದಾಖಲೆ ಬರೆಯಲೆಂದೆ ವಿರಾಟ್ ಕೊಹ್ಲಿ ಜನ್ಮವೆತ್ತಂತಿದೆ. ಶತಕ ಗಳಿಸಿದರು ದಾಖಲೆ, ಸಿಕ್ಸರ್, ಬೌಂಡರಿ ಹೊಡೆದರು ವಿಶ್ವ ಗರಿಮೆ, ಪಂದ್ಯಗಳನ್ನು ಗೆಲ್ಲಿಸಿದರೂ ವಿಶ್ವ ದಾಖಲೆ.

ಇಂಡಿಯನ್ ಕ್ರಿಕೆಟ್ ತಂಡದ ನಾಯಕ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಅದು ಶೂನ್ಯದ ಮೂಲಕ ಇಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್'ನ ಎರಡನೇ ದಿನದಾಟದಲ್ಲಿ ಸ್ಟಾರ್ಕ್ ಬೌಲಿಂಗ್'ನಲ್ಲಿ ಶೂನ್ಯಕ್ಕೆ ಔಟಾದರು. ಇದು ಕೂಡ ಹೊಸ ದಾಖಲೆಯೇ. ಕೊಹ್ಲಿ ಒಟ್ಟು 54 ಟೆಸ್ಟ್'ಗಳನ್ನು ಆಡಿದ್ದು,ಭಾರತದಲ್ಲಿ ಮಾತ್ರ ಇಲ್ಲಿಯವರೆಗೂ ಶೂನ್ಯಕ್ಕೆ ಔಟಾಗಿರಲಿಲ್ಲ.3 ಬಾರಿ ವಿದೇಶದಲ್ಲಿ ಸೊನ್ನೆ ಗಳಿಸಿದ್ದರು. ಪುಣೆಯಲ್ಲಿ ಔಟಾಗಿರುವುದು 4ನೇ ಬಾರಿ.

ಅಲ್ಲದೆ ಕಳೆದ ಮೂರು ವರ್ಷಗಳಲ್ಲಿ ಟೆಸ್ಟ್ ಹಾಗೂ ಏಕದಿನ, ಟಿ20 ಪಂದ್ಯಗಳಲ್ಲಿ ಕೂಡ ಸೊನ್ನೆಗೆ ಪೆವಿಲಿಯನ್'ಗೆ ತೆರಳಿರಲಿಲ್ಲ. ಇದು ಕೂಡ ಹೊಸ ವಿಕ್ರಮವೆ. 2011ರ ವೆಸ್ಟ್ ಇಂಡೀಸ್'ನ ಬ್ರಿಡ್ಜ್'ಟೌನ್,ಮೆಲ್ಬೋರ್ನ್(2011), ಇಂಗ್ಲೆಂಡ್'ನ ಮ್ಯಾಂಚಿಸ್ಟ್'ರ್'ನಲ್ಲಿ (2014)ರಲ್ಲಿ ಮಾತ್ರ '0'ಗಳಿಸಿ ಔಟಾಗಿದ್ದರು.

 

click me!