
IPL 10ನೇ ಆವೃತ್ತಿಯಿಂದ ಕಿಕ್'ಔಟ್, ಅದಕ್ಕೆ ಫ್ರಾಂಚೈಸಿಗಳು ಕೊಟ್ಟ ಕಾರಣ, ಅಭಿಮಾನಿಗಳ ಬೇಸರ ಇವೆಲ್ಲದರಿಂದ ಡಿಪ್ರೆಷನ್'ಗೆ ಒಳಗಾದ ಪಠಾಣ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬದಲಿಗೆ ತನ್ನ ಅಭಿಮಾನಿಗಳನ್ನ ಸಂತೈಸುವ ಜೊತೆಗೆ ತಮ್ಮಷ್ಟಕ್ಕೆ ತಮ್ಮನ್ನು ಸಂತೈಸಿಕೊಂಡಿದ್ದಾರೆ.
‘2010 ರಲ್ಲಿ ನಾನು 5 ಬೆನ್ನು ಮೂಳೆಗಳನ್ನ ಮುರಿದುಕೊಂಡಿದ್ದೆ ಆಗ ನನ್ನ ವೈದ್ಯರು ನಾನೆಂದೂ ಕ್ರಿಕೆಟ್ ಆಡಲು ಸಾಧ್ಯವಿಲ್ಲ ನಿನ್ನ ಕನಸನನು ಮರೆತುಬಿಡು ಎಂದಿದ್ದರು. ಎಷ್ಟೇ ಮೂಳೆಗಳು ಮುರಿದರೂ ನಾನು ಭಾರತಕ್ಕಾಗಿ ಕ್ರಿಕೆಟ್ ಅನ್ನು ಆಡುವುದು ಬಿಡುವುದಿಲ್ಲ ಎಂದು ಆವತ್ತು ಹೇಳಿದ್ದೆ. ನಂತರ ನಾನು ಕಠಿಣ ಅಭ್ಯಾಸ ಮಾಡಿ ಮತ್ತೆ ಟೀಂ ಇಂಡಿಯಾಗೆ ಕಮ್'ಬ್ಯಾಕ್ ಮಾಡಿದ್ದೆ. ನಾನು ನನ್ನ ಜೀವನದಲ್ಲಿ ಹಲವು ಬಾರಿ ತೊಡಕುಗಳು ಬಂದಿವೆ ಆದ್ರೆ ನಾನು ಎಲ್ಲವನ್ನೂ ಎದುರಿಸಿ ಜಯಸಿದ್ದೇನೆ. ಈಗಲು ನನಗೆ ಕೆಲವು ತೊಡಕುಗಳು ಬಂದಿವೆ. ಆದರೆ ನಾನು ಸೋಲುವುದಿಲ್ಲ. ಖಂಡಿತ ನಾನು ಮತ್ತೆ ಮಟ್ಟಿ ನಿಲ್ಲುತ್ತೇನೆ.
ನನ್ನೆಲ್ಲಾ ಅಭಿಮಾನಿಗಳಿಗೆ
-ಇರ್ಫಾನ್ ಪಠಾಣ್, ಟೀಂ ಇಂಡಿಯಾ ಆಟಗಾರ.
ಈ ಮಾತುಗಳು ಅವರ ಅಭಿಮಾನಿಗಳನಗ್ನಷ್ಟೇ ಅಲ್ಲ, ಅವರ ಬೌಲಿಂಗ್ ಅನ್ನು ಆಸ್ವಾಧಿಸಿದ ಪ್ರತೀ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನ ತಟ್ಟಿದಂತೂ ಸುಳ್ಳಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.