
ನವದೆಹಲಿ(ಜು.10): ಟೀಂ ಇಂಡಿಯಾ ನಾಯಕ ಹೆಚ್ಚು ಮದ್ಯಪಾನ ಮಾಡಿದ್ದು, ಸಿಗರೇಟ್ ಸೇದಿದ್ದರಿಂದಲೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್'ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಸೋಲಿಗೆ ಕಾರಣವೆಂದು ಬಾಲಿವುಡ್ ನಟಿ ರಾಖಿ ಸಾವಂತ್ ಬಾಂಬ್ ಸಿಡಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಫೈನಲ್'ನ ಹಿಂದಿನ ರಾತ್ರಿ ಅತಿಯಾದ ಆತ್ಮವಿಶ್ವಾಸದಿಂದ ಪಾರ್ಟಿ ಮಾಡಿದ್ದರಿಂದಲೇ ಪಾಕಿಸ್ತಾನದ ಎದುರು 180 ರನ್'ಗಳ ಹೀನಾಯ ಸೋಲು ಕಂಡಿತು. ಹೀಗಾಗಿಯೇ ಟೀಂ ಇಂಡಿಯಾದಿಂದ ಹಾಲಿ ಚಾಂಪಿಯನ್ ಪಟ್ಟವು ಕೈತಪ್ಪಿತು ಎಂದು ರಾಖಿ ಅಭಿಪ್ರಾಯಪಟ್ಟಿದ್ದಾರೆ.
ರಾತ್ರಿಯಿಡಿ ಮೋಜು ಮಸ್ತಿ ಮಾಡಿ, ಬೆಳಗ್ಗೆ ನಾಲಿಗೆ ತೊದಲುತ್ತಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅವರು ಉತ್ತಮ ರನ್ ಬಾರಿಸಲಿ ಎಂದು ನಿರೀಕ್ಷಿಸುವುದು ಎಷ್ಟು ಸರಿ? ವಿರಾಟ್ ಮೊದಲು ನೀವು ಸಿಗರೇಟ್ ಸೇದುವುದು, ಕುಡಿಯುವುದನ್ನು ಕಡಿಮೆ ಮಾಡಿ, ಅದು ಸಾಧ್ಯವಾಗಿಲ್ಲ ಅಂದ್ರೆ ನನ್ನನ್ನು ಕ್ಯಾಪ್ಟನ್ ಮಾಡಿ. ಆಗ ನಿಮ್ಮ ಕಣ್ಣು ಬೇರೆಕಡೆ ಹೋಗದಂತೆ ನೋಡಿಕೊಳ್ಳುತ್ತೇನೆ. ಆಗ ಮಾತ್ರ ನೀವು ಒಳ್ಳೆ ಕ್ರಿಕೆಟ್ ಆಡುತ್ತೀರಾ ಎಂದು ಸಲಹೆ ಬಾಲಿವುಡ್ ಬಿಚ್ಚಮ್ಮ ರಾಖಿ ಸಾವಂತ್ ಕೊಹ್ಲಿಗೆ ಸಲಹೆ ನೀಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.