ಲಾರ್ಡ್ಸ್ ಪಟ್ಟಿಯಲ್ಲಿ ಕೊಹ್ಲಿ ನಂ.1

Published : Dec 27, 2016, 11:20 AM ISTUpdated : Apr 11, 2018, 01:11 PM IST
ಲಾರ್ಡ್ಸ್ ಪಟ್ಟಿಯಲ್ಲಿ ಕೊಹ್ಲಿ ನಂ.1

ಸಾರಾಂಶ

2016ರಲ್ಲಿ ಕೊಹ್ಲಿ ಎಲ್ಲಾ ಕ್ರಿಕೆಟ್‌'ನ ಮೂರೂ ಮಾದರಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಟೆಸ್ಟ್ ಕ್ರಿಕೆಟ್‌'ನಲ್ಲಿ 3 ದ್ವಿಶತಕಗಳ ಸಹಿತ 1,215 ರನ್ ಗಳಿಸಿ ಬ್ಯಾಟಿಂಗ್‌'ನಲ್ಲಿ ಮಿಂಚಿದ್ದಾರೆ.

ಮುಂಬೈ(ಡಿ.27): ವಿಶ್ವ ಕ್ರಿಕೆಟ್‌'ನ ಕಾಶಿ ಎಂದೇ ಕರೆಯಲ್ಪಡುವ ಇಂಗ್ಲೆಂಡ್‌'ನ ಲಾರ್ಡ್ಸ್ ಕ್ರೀಡಾಂಗಣದ ವ್ಯವಸ್ಥಾಪಕ ಮಂಡಳಿಯು ಲಾರ್ಡ್ಸ್ ಅಗ್ರ 20 ಕ್ರಿಕೆಟಿಗರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಅದರಲ್ಲಿ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಂಬರ್‌ಒನ್ ಸ್ಥಾನ ಪಡೆದಿದ್ದಾರೆ.

ಇತ್ತೀಚೆಗಷ್ಟೇ, ಐಸಿಸಿ ವತಿಯಿಂದ ವರ್ಷದ ಕ್ರಿಕೆಟಿಗ ಹಾಗೂ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದ ಸ್ಪಿನ್ನರ್ ಅಶ್ವಿನ್ ಅವರೂ ಲಾರ್ಡ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದರ ಜೊತೆಗಡ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿರುವ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ಕೂಡಾ ಲಾರ್ಡ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

2016ರಲ್ಲಿ ಕೊಹ್ಲಿ ಎಲ್ಲಾ ಕ್ರಿಕೆಟ್‌'ನ ಮೂರೂ ಮಾದರಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಟೆಸ್ಟ್ ಕ್ರಿಕೆಟ್‌'ನಲ್ಲಿ 3 ದ್ವಿಶತಕಗಳ ಸಹಿತ 1,215 ರನ್ ಗಳಿಸಿ ಬ್ಯಾಟಿಂಗ್‌'ನಲ್ಲಿ ಮಿಂಚಿದ್ದಾರೆ.

ಲಾರ್ಡ್ಸ್ 20 ಆಟಗಾರರ ಪಟ್ಟಿ ಇಂತಿದೆ:

  1. ವಿರಾಟ್ ಕೊಹ್ಲಿ
  2. ಜಾನಿ ಬ್ರೈಸ್ಟೋ
  3. ರವಿಚಂದ್ರನ್ ಆಶ್ವಿನ್
  4. ರಂಗನಾ ಹೆರಾತ್
  5. ಕ್ರಿಸ್ ವೋಕ್ಸ್
  6. ಕಗೀಸೋ ರಬಾಡ
  7. ಜೋ ರೂಟ್
  8. ಕ್ವಿಂಟಾನ್ ಡಿ ಕಾಕ್
  9. ಮಿಶಲ್ ಸ್ಟಾರ್ಕ್
  10. ಬೆನ್ ಸ್ಟೋಕ್ಸ್
  11. ಮಿಸ್ಬಾ ಉಲ್-ಹಕ್
  12. ಡೇವಿಡ್ ವಾರ್ನರ್
  13. ಅಜಿಂಕ್ಯಾ ರಹಾನೆ
  14. ಸ್ಟೀವ್ ಸ್ಮಿತ್
  15. ಯಾಸೀರ್ ಷಾ
  16. ಮರ್ಲಾನ್ ಸ್ಯಾಮ್ಯುಯಲ್ಸ್
  17. ಕುಸಾಲ್ ಮೆಂಡೀಸ್
  18. ಚೇತೇಶ್ವರ ಪೂಜಾರ
  19. ಇಮ್ರಾನ್ ತಾಹಿರ್
  20. ಶಕೀಬ್ ಅಲ್ ಹಸನ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇದೇ ನನ್ನ ಮೊದಲ ಬ್ಯಾಟ್‌, ತೆಂಗಿನ ಹೆಡೆಯನ್ನು ವೇದಿಕೆಗೆ ತಂದು ತೋರಿಸಿದ ಟೀಮ್‌ ಇಂಡಿಯಾ ಬ್ಯಾಟರ್‌!
CSK ಫ್ರಾಂಚೈಸಿಗೆ ಬಲವಾದ ಹೊಡೆತ; ಗಾಯದಿಂದಾಗಿ ತಂಡದ ಕ್ಯಾಪ್ಟನ್‌ ಟೂರ್ನಿಯಿಂದಲೇ ಔಟ್!