ಕೊಹ್ಲಿ ಪರ ಹೇಡನ್ ಬ್ಯಾಟಿಂಗ್

Published : Mar 14, 2017, 10:10 AM ISTUpdated : Apr 11, 2018, 01:05 PM IST
ಕೊಹ್ಲಿ ಪರ ಹೇಡನ್ ಬ್ಯಾಟಿಂಗ್

ಸಾರಾಂಶ

‘ವಿರಾಟ್‌ ನನ್ನಂತೆಯೇ ಸದಾ ಆಕ್ರಮಣಕಾರಿಯಾಗಿ ವರ್ತಿಸಲು ಇಚ್ಛಿಸುತ್ತಾರೆ. ಆಟದಂಗಳದಲ್ಲಿ ಇದು ಅಗತ್ಯವಾಗಿದೆ. ಶಿಸ್ತು ಮತ್ತು ಆಕ್ರಮಣಕಾರಿ ವರ್ತನೆ ಇವೆಲ್ಲವೂ ಆಟಕ್ಕೆ ಬಹಳ ಮುಖ್ಯವಾಗಿವೆ. - ಮ್ಯಾಥ್ಯೂ ಹೇಡನ್‌

ನವದೆಹಲಿ(ಮಾ.14): ಡಿಆರ್‌'ಎಸ್‌ ವಿವಾದದಲ್ಲಿ ವಿರಾಟ್‌ ಕೊಹ್ಲಿ ವರ್ತನೆ ಕಂಡು ಅವರ ಮೇಲಿರುವ ಗೌರವ ಕಡಿಮೆಯಾಗುತ್ತಿದೆ ಎಂದು ಆಸ್ಪ್ರೇಲಿಯಾ ಮಾಜಿ ಆಟಗಾರ ಇಯಾನ್‌ ಹೀಲಿ ನೀಡಿದ್ದ ಹೇಳಿಕೆ ಚರ್ಚೆಗೆ ಗ್ರಾಸ ಒದಗಿಸಿದೆ.

ಹೀಲಿ ಹೇಳಿಕೆಗೆ ಪ್ರತ್ಯುತ್ತರವಾಗಿ ವಿರಾಟ್‌, ನಮ್ಮ ದೇಶದಲ್ಲಿ 120 ಕೋಟಿ ಜನರಿದ್ದಾರೆ. ಒಬ್ಬ ಮನುಷ್ಯ ನನ್ನನ್ನು ಇಷ್ಟಪಡದಿದ್ದರೆ ಅದರಿಂದ ಏನು ನಷ್ಟವಿಲ್ಲ ಎಂದು ತಿರುಗೇಟು ನೀಡಿದ್ದರು.

ಈ ವಿವಾದದ ಕುರಿತಂತೆ ಆಸೀಸ್‌ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್‌ ಕೊಹ್ಲಿಯ ಪರ ಬ್ಯಾಟಿಂಗ್‌ ಮಾಡಿದ್ದಾರೆ.  ‘ವಿರಾಟ್‌ ನನ್ನಂತೆಯೇ ಸದಾ ಆಕ್ರಮಣಕಾರಿಯಾಗಿ ವರ್ತಿಸಲು ಇಚ್ಛಿಸುತ್ತಾರೆ. ಆಟದಂಗಳದಲ್ಲಿ ಇದು ಅಗತ್ಯವಾಗಿದೆ. ಶಿಸ್ತು ಮತ್ತು ಆಕ್ರಮಣಕಾರಿ ವರ್ತನೆ ಇವೆಲ್ಲವೂ ಆಟಕ್ಕೆ ಬಹಳ ಮುಖ್ಯವಾಗಿವೆ ಎಂದು ಹೇಡನ್‌ ಹೇಳಿದ್ದಾರೆ. 

ಭಾರತೀಯ ಕ್ರಿಕೆಟಿಗರು ಸ್ಥಳೀಯ ಅಭಿಮಾನಿಗಳಿಂದ ಸಾಕಷ್ಟು ಪ್ರೀತಿ ಹಾಗೂ ಗೌರವವನ್ನು ಪಡೆಯುತ್ತಾರೆ ಎಂದು ಮಾಜಿ ಎಡಗೈ ಬ್ಯಾಟ್ಸ್'ಮನ್ ಅಭಿಪ್ರಾಯಪಟ್ಟಿದ್ದಾರೆ.

ಹೇಡನ್'ಗಿಂತ ಮೊದಲು ಆಸೀಸ್ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಕೂಡ ಕೊಹ್ಲಿ ಪರ ಬ್ಯಾಟಿಂಗ್ ಮಾಡಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?