IPL ಕ್ರಿಕೆಟ್‌ನಲ್ಲಿ ದಾಖಲೆ ಬರೆದ RCB ನಾಯಕ ವಿರಾಟ್ ಕೊಹ್ಲಿ!

By Web Desk  |  First Published Mar 28, 2019, 11:20 PM IST

ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಬರದೆ ದಾಖಲೆ ಏನು? ಇಲ್ಲಿದೆ ವಿವರ.


ಬೆಂಗಳೂರು(ಮಾ.28): ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ 46 ರನ್ ಪೂರೈಸುತ್ತಿದ್ದಂತೆ ವಿರಾಟ್ ಕೊಹ್ಲಿ , ಐಪಿಎಲ್ ಕ್ರಿಕೆಟ್‌ನಲ್ಲಿ 5000 ರನ್ ಪೂರೈಸಿದ ಸಾಧನೆ ಮಾಡಿದರು. 

ಇದನ್ನೂ ಓದಿ: IPL 2019: ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಯುವರಾಜ್ ಸಿಂಗ್!

Tap to resize

Latest Videos

undefined

ಐಪಿಎಲ್ ಕ್ರಿಕೆಟ್‌ನಲ್ಲಿ 5000 ರನ್ ಪೂರೈಸಿದಲ 2ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾದರು. ಇದಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ 5000 ರನ್ ಗಡಿ ದಾಡಿದ್ದಾರೆ. ತವರಿನ ಅಭಿಮಾನಿಗಳ ಮುಂದೆ 5000 ರನ್ ಪೂರೈಸಿರುವುದು ಮತ್ತಷ್ಟು ವಿಶೇಷವಾಗಿದೆ.

ಇದನ್ನೂ ಓದಿ: ಚುನಾವಣಾ ತಯಾರಿ ನಡುವೆ RCB ಪಂದ್ಯಕ್ಕೆ ಹಾಜರಾದ ಸಿದ್ದರಾಮಯ್ಯ!

ವಿರಾಟ್ ಕೊಹ್ಲಿ 5000 ರನ್ ಪೂರೈಸಿದ ಬೆನ್ನಲ್ಲೇ ವಿಕೆಟ್ ಕೈಚೆಲ್ಲಿದ್ದಾರೆ. ಬಿರುಸಿನ ಹೊಡೆತಕ್ಕೆ ಮುಂದಾದ ಕೊಹ್ಲಿ, ವೇಗಿ ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಔಟಾದರು. ಕೊಹ್ಲಿ 36 ಎಸೆತದಲ್ಲಿ 6 ಬೌಂಡರಿ ನೆರವಿನಿಂದ 46 ರನ್ ಸಿಡಿಸಿದರು.

click me!