
ಮುಂಬೈ(ಡಿ.28): ಜ.13ರಿಂದ ಆರಂಭಗೊಳ್ಳಲಿರುವ ಅಂಡರ್-19 ವಿಶ್ವಕಪ್'ನಲ್ಲಿ ಪಾಲ್ಗೊಳ್ಳಲು ಭಾರತ ತಂಡ ಗುರುವಾರ ನ್ಯೂಜಿಲೆಂಡ್'ಗೆ ತೆರಳಲಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ‘ನ್ಯೂಜಿಲೆಂಡ್ ರೀತಿಯ ಪಿಚ್'ಗಳನ್ನು ನಿರ್ಮಿಸಿ ಅಭ್ಯಾಸ ನಡೆಸಿದ್ದೇವೆ. ಆದರೆ ನಮಗೆ ಎದುರಾಗಬಲ್ಲ ಸವಾಲಿನ ಬಗ್ಗೆ ಅರಿವಿದೆ. ತಂಡ ಪ್ರತಿ ಸವಾಲಿಗೆ ಸಿದ್ಧವಿದೆ’ ಎಂದರು. ‘ತಂಡದ ಕೋಚ್ ಆಗಿ ಸಾಕಷ್ಟು ಕಲಿತಿದ್ದೇನೆ. ಈ ಪೀಳಿಗೆಯ ಆಟಗಾರರು ಬಹಳ ಬೇಗ ವಿವಿಧ ವಾತಾವರಣಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ನಿರೀಕ್ಷೆಗೂ ಮುನ್ನ ಭಾರತ ತಂಡದಲ್ಲಿ ಅವಕಾಶ ಪಡೆದರೂ ಅಚ್ಚರಿ ಪಡಬೇಕಿಲ್ಲ’ ಎಂದರು.
ನಾಯಕ ಪೃಥ್ವಿ ಶಾ ‘ಟೂರ್ನಿಗೂ ಮುನ್ನ ನಾವು ಕೆಲ ಅಭ್ಯಾಸ ಪಂದ್ಯಗಳನ್ನು ಆಡಲಿದ್ದೇವೆ. ಅದು ನಮಗೆ ನೆರವಾಗಲಿದೆ. ವಿಶ್ವಕಪ್'ಗೂ ಮುನ್ನ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿದ್ದು ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ. ವಿಶ್ವಕಪ್ ಗೆಲ್ಲುವುದು ನಮ್ಮ ಗುರಿ’ ಎಂದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.