INDvWI 2ನೇ ಏಕದಿನ: ಸೆಂಚುರಿ ಸಿಡಿಸಿ ಪಾಂಟಿಂಗ್ ದಾಖಲೆ ಮುರಿದ ಕೊಹ್ಲಿ!

By Web Desk  |  First Published Aug 11, 2019, 10:12 PM IST

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್ ದಾಖಲೆ ಸೇರಿದಂತೆ ಹಲವು ಮೈಲಿಗಲ್ಲು ನಿರ್ಮಿಸಿದ್ದಾರೆ. ಕೊಹ್ಲಿ ಸೆಂಚುರಿ ಸಾಧನೆ ವಿವರ ಇಲ್ಲಿದೆ.


ಟ್ರಿನಿಡಾಡ್(ಆ.11): ವೆಸ್ಟ್ ಇಂಡೀಸ್ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. 112 ಎಸೆತದಲ್ಲಿ ಕೊಹ್ಲಿ ಶತಕ ಪೂರೈಸಿದರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 42 ಶತಕ ದಾಖಲಿಸಿದರು. ವಿಂಡೀಸ್ ವಿರುದ್ದ 8 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆನ್ನು ಮುರಿದಿದ್ದಾರೆ. 

ಇದನ್ನೂ ಓದಿ: ಪಾಕಿಸ್ತಾನ ದಿಗ್ಗಜ ಕ್ರಿಕೆಟಿಗನ ದಾಖಲೆ ಮುರಿದ ವಿರಾಟ್ ಕೊಹ್ಲಿ!

Tap to resize

Latest Videos

undefined

ನಾಯಕನಾಗಿ ಒಂದು ತಂಡ ವಿರುದ್ಧ ಗರಿಷ್ಠ ಸೆಂಚುರಿ ಸಿಡಿಸಿದ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ದಾಖಲೆನ್ನು ಮುರಿದ ಕೊಹ್ಲಿ ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ನಾಯಕನಾಗಿ ವೆಸ್ಟ್ ಇಂಡೀಸ್ ವಿರುದ್ದ ಕೊಹ್ಲಿ 6 ಶತಕ ಸಿಡಿಸಿದ್ದಾರೆ. ರಿಕಿ ಪಾಂಟಿಂಗ್ ನಾಯಕನಾಗಿ ನ್ಯೂಜಿಲೆಂಡ್ ವಿರುದ್ದ 5 ಶತಕ ಬಾರಿಸಿದ್ದಾರೆ. 

ಇದನ್ನೂ ಓದಿ: ಭಾರತದಲ್ಲಿ ಜನಿಸಿ ವಿದೇಶದಲ್ಲಿ ಸಕ್ಸಸ್ ಆದ ಟಾಪ್ 5 ಕ್ರಿಕೆಟಿಗರಿವರು

ನಾಯಕನಾಗಿ ಒಂದು ತಂಡದ ವಿರುದ್ಧ ಗರಿಷ್ಠ ಶತಕ ಸಾಧನೆ
6 ಶತಕ - ಕೊಹ್ಲಿ vs ವೆಸ್ಟ್ ಇಂಡೀಸ್
5 ಶತಕ - ಪಾಂಟಿಂಗ್  vs ನ್ಯೂಜಿಲೆಂಡ್
4 ಶತಕ-  ಪಾಂಟಿಂಗ್ vs ಇಂಗ್ಲೆಂಡ್
4 ಶತಕ  ಪಾಟಿಂಗ್ vs ಭಾರತ
4 ಶತಕ - ಡಿವಿಲಿಯರ್ಸ್  vs ಭಾರತ

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಶತಕ ಹಲವು ಸಾಧನೆಗೆ ಮುನ್ನುಡಿ ಬರೆದಿದೆ.

ಒಂದು ತಂಡದ ವಿರುದ್ಧ  ಗರಿಷ್ಠ ಸೆಂಚುರಿ ಸಾಧನೆ
9 ಶತಕ - ಸಚಿನ್ ತೆಂಡುಲ್ಕರ್ vs ಆಸ್ಟ್ರೇಲಿಯಾ
8 ಶತಕ - ಸಚಿನ್ ತೆಂಡುಲ್ಕರ್ vs ಶ್ರೀಲಂಕಾ
8 ಶತಕ- ವಿರಾಟ್ ಕೊಹ್ಲಿ vs ಶ್ರೀಲಂಕಾ
8 ಶತಕ- ವಿರಾಟ್ ಕೊಹ್ಲಿ vs ಆಸ್ಟ್ರೇಲಿಯಾ
8 ಶತಕ- ವಿರಾಟ್ ಕೊಹ್ಲಿ vs ವೆಸ್ಟ್  ಇಂಡೀಸ್

ಕೊಹ್ಲಿ ಶತಕ(ಇತರರ ನಾಯಕತ್ವದಡಿಯಲ್ಲಿ) 
ತನ್ನ(ಕೊಹ್ಲಿ) ನಾಯಕತ್ವದಡಿಯಲ್ಲಿ- 20 ಶತಕ
ಧೋನಿ ನಾಯಕತ್ವದಡಿಯಲ್ಲಿ - 19 ಶತಕ 
ಸೆಹ್ವಾಗ್ ನಾಯಕತ್ವದಡಿಯಲ್ಲಿ - 02 ಶತಕ 
ಗಂಭೀರ್ ನಾಯಕತ್ವದಡಿಯಲ್ಲಿ - 01 ಶತಕ 

click me!