ವಿಂಡೀಸ್ ವಿರುದ್ಧ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈಗಾಗಲೇ 7 ಸೆಂಚುರಿ ಸಿಡಿಸಿರುವ ಕೊಹ್ಲಿ, 2ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟಿಗ ಜಾವೇದ್ ಮಿಯಾಂದ್ ದಾಖಲೆಯನ್ನೂ ಪುಡಿ ಮಾಡಿದ್ದಾರೆ.
ಟ್ರಿನಿಡಾಡ್(ಆ.11): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸಿಡಿಸಿದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಕೊಹ್ಲಿ 19 ರನ್ ಪೂರೈಸುತ್ತಿದ್ದಂತೆ, ಪಾಕಿಸ್ತಾನ ದಿಗ್ಗಜ ಬ್ಯಾಟ್ಸ್‌ಮನ್ ಜಾವೇದ್ ಮಿಯಾಂದಾದ್ ದಾಖಲೆ ಮುರಿದಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಜನಿಸಿ ವಿದೇಶದಲ್ಲಿ ಸಕ್ಸಸ್ ಆದ ಟಾಪ್ 5 ಕ್ರಿಕೆಟಿಗರಿವರು
undefined
ವಿಯಾಂದಾದ್ 64 ಇನ್ನಿಂಗ್ಸ್‌ಗಳಲ್ಲಿ 1930 ರನ್ ಸಿಡಿಸಿದ್ದಾರೆ.ಇದೀಗ ಕೊಹ್ಲಿ 34 ಇನ್ನಿಂಗ್ಸ್‌ಗಲ್ಲಿ ಮಿಯಾಂದಾದ್ ದಾಖಲೆ ಮುರಿದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ದ ಗರಿಷ್ಠ ರನ್ ಸಿಡಿಸಿದರ ಪಟ್ಟಿಯಲ್ಲಿ ಕೊಹ್ಲಿ ಮೊದಲ ಸ್ಥಾನಕ್ಕೇರಿದರೆ, ಮಿಯಾಂದಾದ್ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಇನ್ನು 3ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಮಾರ್ಕ್ ವ್ಹಾ, 47 ಇನ್ನಿಂಗ್ಸ್‌ಗಳಲ್ಲಿ 1708 ರನ್ ಸಿಡಿಸಿದ್ದಾರೆ.
ಇದನ್ನೂ ಓದಿ: ಟೆಸ್ಟ್ ಸರಣಿಗೆ ವಿಂಡೀಸ್ ತಂಡ ಪ್ರಕಟ: ಗೇಲ್ ಕನಸು ಭಗ್ನ..!
ವೆಸ್ಟ್ ಇಂಡೀಸ್ ವಿರುದ್ದ ಕೊಹ್ಲಿ 7 ಶತಕ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ, 2009ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಪಂದ್ಯ ಆಡಿದ್ದರು. 2011ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಮೊದಲ ಶತಕ ಸಾಧನೆ ಮಾಡಿದರು. ಜುಲೈ 2017 ರಿಂದ ಆಕ್ಟೋಬರ್ 2018ರ ವರೆಗೆ ವಿಂಡೀಸ್ ವಿರುದ್ದ ಸತತ 4 ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.