
ಬೆಂಗಳೂರು(ಜ.04): ಗಂಡ ಮನೆಯಿಂದಾಚೆ ಹುಲಿಯಾಗಿದ್ರೂ ಮಡದಿ ಎದರು ಇಲಿ ಅನ್ನೋದು ಕೊಹ್ಲಿ ವಿಚಾರದಲ್ಲೂ ನಿಜವಾದಂತಿದೆ. ಮೈದಾನದಲ್ಲಿ ಅಗ್ರೆಸ್ಸಿವ್ ಆಗಿರೋ ನಮ್ಮ ಟೀಂ ಇಂಡಿಯಾ ನಾಯಕ ಹೆಂಡತಿ ಅನುಷ್ಕಾ ಶರ್ಮ ಎದುರು ನಿಂತ್ರೆ ಗಪ್ ಚುಪ್ ಆಗಿಬಿಡ್ತಾರೆ. ಅಯ್ಯೋ ಯಾಕೆ ಹೀಗೆಲ್ಲಾ ಅಂತ ಹೇಳ್ತಿದ್ದೀವಿ ಗೊತ್ತಾ ಈ ಸ್ಟೋರಿ ನೋಡಿ...
ವಿರಾಟ್ ಕೊಹ್ಲಿ ಎಂದಾಕ್ಷಣ ನಮ್ಮ ಕಣ್ಣು ಮುಂದೆ ಬರೋದು ಅಗ್ರೆಸ್ಸಿವ್, ಚೀರಾಟ-ಹೋರಾಟದ ಮನೋಭಾವ ನೋಡಿದ್ದೇವೆ. ಆದರೆ ಮದುವೆಯಾದ ಮೇಲೆ ಕೊಹ್ಲಿ ಬದಲಾದ್ರಾ ಅನ್ನೋ ಡೌಟ್ ಬರೋಕೆ ಶುರುವಾಗಿದೆ. ಸದ್ಯ ಜಸ್ಟ್ ಮ್ಯಾರೀಡ್ ಆಗಿರೋ ಕೊಹ್ಲಿ, ಅನುಷ್ಕಾಳನ್ನೂ ದಕ್ಷಿಣ ಆಫ್ರಿಕಾಗೆ ತಮ್ಮ ಜೊತೆಗೆ ಕರೆದೊಯ್ದಿದ್ದಾರೆ. ಅಲ್ಲಿನ ರಮಣೀಯ ತಾಣಗಳನ್ನ ಆಕೆಗೆ ತೋರಿಸುತ್ತಿದ್ದಾರೆ. ಇನ್ನೊಂದು ಇಂಟರೆಸ್ಟಿಂಗ್ ವಿಷ್ಯ ಏನ್ ಗೊತ್ತಾ..? ಇವರು ಎಲ್ಲೇ ಹೋದ್ರೂ ಅನುಷ್ಕಾಳ ಲಗೇಜ್ ಜವಾಬ್ದಾರಿ ಮಾತ್ರ ಕೊಹ್ಲಿಯದ್ದೇ. ಇದು ಮೊನ್ನೆ ಕೇಪ್'ಟೌನ್'ನ ಶಾಪಿಂಗ್ ಮಾಲ್'ನಲ್ಲಿ ಕೂಡಾ ಪ್ರೂವ್ ಆಗಿತ್ತು.
ಎಂಗೇಜ್'ಮೆಂಟ್ ರಿಂಗ್ ತಗಿಬೇಡ ಅಂದಿದ್ದಕ್ಕೆ ಕೊಹ್ಲಿ ಏನ್ ಮಾಡಿದ್ರು ಗೊತ್ತಾ..?
ಇನ್ನೂ ನಮ್ಮ ಕೊಹ್ಲಿ ಅನುಷ್ಕಾಳಿಗೆ ಎಷ್ಟು ವಿಧೇಯನಾಗಿದ್ದಾರೆ ಅನ್ನೋದನ್ನ ಮತ್ತೆ ಪ್ರೂವ್ ಮಾಡಿದ್ದು ಮೊನ್ನೆ ಕೊಹ್ಲಿ ಮದುವೆಯ ನಂತರ ಫಸ್ಟ್ ಟೈಮ್ ಪ್ರಾಕ್ಟೀಸ್'ಗೆ ಬಂದಾಗ. ಹೌದು, ಅನುಷ್ಕಾ ಏಂಗೇಜ್'ಮೆಂಟ್ ದಿನ ಕೊಹ್ಲಿಗೆ ರಿಂಗ್ ತೊಡಿಸುವಾಗ ಯಾವುದೇ ಕಾರಣಕ್ಕೂ ಆ ರಿಂಗ್ ಅವನ ಬೆರಳಿನಿಂದ ಹೊರಗೆ ಬರಬಾರದು ಎಂದು ತಾಕೀತು ಮಾಡಿದ್ರಂತೆ. ಹೀಗಾಗಿ ಪ್ರಾಕ್ಟೀಸ್ ವೇಳೆ ಕೊಹ್ಲಿ ಆ ರಿಂಗ್ ಅನ್ನ ಚೇನ್'ಗೆ ಹಾಕಿ ಪ್ರಾಕ್ಟೀಸ್ ಮಾಡಿದ್ರು. ಇದು ಅಭಿಮಾನಿಯ ಜೊತೆ ಫೋಟೋ ಕ್ಲಿಕ್ಕಿಸಿದಾಗ ಬಯಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.