ಜನವರಿಯಲ್ಲಿ ವಿರಾಟ್ ಕೊಹ್ಲಿ ಐಸಿಸಿ ವರ್ಷದ ಕ್ರಿಕೆಟಿಗ, ಶ್ರೇಷ್ಠ ಟೆಸ್ಟ್ ಮತ್ತು ಏಕದಿನ ಬ್ಯಾಟ್ಸ್’ಮನ್ ಆಗಿ ಹೊರಹೊಮ್ಮಿದ್ದರು. ಇದೀಗ ಸ್ಮೃತಿ ಮಂಧನಾ ಹಾಗೂ ವಿರಾಟ್ ಕೊಹ್ಲಿ ಮತ್ತೊಂದು ಗೌರವಕ್ಕೆ ಭಾಜನರಾಗಿದ್ದಾರೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಹಿಳಾ ತಂಡದ ಸದಸ್ಯೆ ಸ್ಮೃತಿ ಮಂಧನಾ ಪ್ರಸಕ್ತ ಸಾಲಿನ ವಿಸ್ಡನ್ ಕ್ರಿಕೆಟರ್ಸ್ ನೀಡುವ ವರ್ಷದ ಅಗ್ರಮಾನ್ಯ ಕ್ರಿಕೆಟಿಗರು ಗೌರವಕ್ಕೆ ಪಾತ್ರರಾಗಿದ್ದಾರೆ.
'The way Virat finishes matches, I would like to take a leaf out of it' – wants to put a price on her wicket and stay at the crease longer, like .
READ ⏬https://t.co/RJkrDEqcQj pic.twitter.com/6JG49cEUTA
ಟೆಸ್ಟ್ ಕ್ರಿಕೆಟ್ ರ‍್ಯಾಂಕಿಂಗ್’ನಲ್ಲಿ ಅಗ್ರ ಸ್ಥಾನ ಕಾಪಾಡಿಕೊಂಡಿದ್ದ ವಿರಾಟ್ ಕೊಹ್ಲಿ ಕಳೆದ ಸಾಲಿನಲ್ಲಿ ಪ್ರತಿಷ್ಠಿತ ಐಸಿಸಿ ವರ್ಷದ ಪ್ರಶಸ್ತಿಯನ್ನೂ ಗೆದ್ದಿದ್ದರು. ಮಂಧನಾ ಅವರೂ ವರ್ಷದ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದರು. ಈಗ ಮೂರನೇ ಬಾರಿಗೆ ವಿಸ್ಡನ್ ವಾರ್ಷಿಕ ಕ್ರಿಕೆಟಿಗ ಪ್ರಶಸ್ತಿಗೆ ಕೊಹ್ಲಿ ಭಾಜನರಾಗಿದ್ದಾರೆ.
undefined
ಮೂರು ಮತ್ತು ಮೂರಕ್ಕಿಂತ ಹೆಚ್ಚು ಬಾರಿ ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದವರಲ್ಲಿ ಕೊಹ್ಲಿ 3ನೇ ಕ್ರಿಕೆಟಿಗರಾಗಿದ್ದಾರೆ. ಜನವರಿಯಲ್ಲಿ ವಿರಾಟ್ ಕೊಹ್ಲಿ ಐಸಿಸಿ ವರ್ಷದ ಕ್ರಿಕೆಟಿಗ, ಶ್ರೇಷ್ಠ ಟೆಸ್ಟ್ ಮತ್ತು ಏಕದಿನ ಬ್ಯಾಟ್ಸ್’ಮನ್ ಆಗಿ ಹೊರಹೊಮ್ಮಿದ್ದರು.
Congratulations to the Wisden Five Cricketers of the Year 2019. https://t.co/UbTUV0WYKX pic.twitter.com/ZuDaYnuOvo
— Wisden Almanack (@WisdenAlmanack)2018ರಲ್ಲಿ ಇಂಗ್ಲೆಂಡ್ ನೆಲದಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಟಾಪ್ 5 ಕ್ರಿಕೆಟಿಗರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಸ್ಯಾಮ್ ಕರ್ರಾನ್, ಜೋಸ್ ಬಟ್ಲರ್, ರೋರಿ ಬರ್ನ್ಸ್ ಮತ್ತು ಟಾಮಿ ಬಿಯಾಮೌಂಟ್ ಸ್ಥಾನ ಪಡೆದಿದ್ದಾರೆ.