ಮದುವೆಗಾಗಿ ಹೆಸರು ಬದಲಿಸಿಕೊಂಡಿದ್ದ ಕೊಹ್ಲಿ!

Published : Mar 05, 2019, 12:00 PM IST
ಮದುವೆಗಾಗಿ ಹೆಸರು ಬದಲಿಸಿಕೊಂಡಿದ್ದ ಕೊಹ್ಲಿ!

ಸಾರಾಂಶ

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೋಡಿ 2017ರ ಡಿಸೆಂಬರ್’ನಲ್ಲಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ತಮ್ಮ ವಿವಾಹದ ಸುದ್ದಿಯನ್ನು ಗೌಪ್ಯವಾಗಿಡುವ ಸಲುವಾಗಿ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಹೆಸರು ಬದಲಿಸಿಕೊಂಡಿದ್ದರು ಎನ್ನುವ ಸುದ್ದಿ ಬಹಿರಂಗಗೊಂಡಿದೆ. 

ನವದೆಹಲಿ[ಮಾ.05]: ತಮ್ಮ ವಿವಾಹದ ಸುದ್ದಿಯನ್ನು ಗೌಪ್ಯವಾಗಿಡುವ ಸಲುವಾಗಿ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಹೆಸರು ಬದಲಿಸಿಕೊಂಡಿದ್ದರು ಎನ್ನುವ ಸುದ್ದಿ ಬಹಿರಂಗಗೊಂಡಿದೆ. 

ಮದುವೆಯಾಗ್ಬೇಡಿ' ಒಂದೇ ವರ್ಷಕ್ಕೆ ವಿರುಷ್ಕಾ ಸುಸ್ತು!

ಪ್ರತಿಷ್ಠಿತ ನಿಯತಕಾಲಿಕವೊಂದಕ್ಕೆ ಫೋಟೋಶೂಟ್‌ ನಡೆಸಿ, ಸಂದರ್ಶನ ನೀಡಿರುವ ಅನುಷ್ಕಾ, ತಮ್ಮಿಬ್ಬರ ವಿವಾಹಕ್ಕಾಗಿ ಬಾಣಸಿಗರೊಂದಿಗೆ ಮಾತನಾಡುವ ವೇಳೆ ಕೊಹ್ಲಿಯ ಹೆಸರನ್ನು ‘ರಾಹುಲ್‌’ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. ಇದೇ ರೀತಿ ಪ್ರತಿಯೊಂದು ವಿಚಾರದಲ್ಲೂ ಬಹಳ ಎಚ್ಚರಿಕೆ ವಹಿಸಿದ್ದಾಗಿ ಹೇಳಿರುವ ಬಾಲಿವುಡ್‌ ನಟಿ, ತಮ್ಮ ವಿವಾಹ ಸಮಾರಂಭದಲ್ಲಿ ಕೇವಲ 42 ಮಂದಿ ಪಾಲ್ಗೊಂಡಿದ್ದರು ಎನ್ನುವ ಕುತೂಹಲಕಾರಿ ವಿಚಾರವನ್ನೂ ಬಹಿರಂಗಗೊಳಿಸಿದ್ದಾರೆ. 

ವೆಡ್ಡಿಂಗ್ ಆ್ಯನಿವರ್ಸರಿ ದಿನ ಅನುಷ್ಕಾ ವಾಲ್‌ನಲ್ಲಿ ರಣವೀರ್ ಫೋಟೋ!

‘ನಮ್ಮಿಬ್ಬರ ಮದುವೆ ಮನೆಯಲ್ಲಿ ನಡೆಯಿತು ಎನ್ನುವ ಭಾವನೆ ಬರಬೇಕು ಎಂದು ನಮಗೆ ಆಸೆಯಿತ್ತು. ಅದಕ್ಕಾಗಿ ಕುಟುಂಬ ಸದಸ್ಯರು ಹಾಗೂ ಆಪ್ತ ಸ್ನೇಹಿತರನ್ನಷ್ಟೇ ಆಹ್ವಾನಿಸಲಾಗಿತ್ತು’ ಎಂದು ಅನುಷ್ಕಾ ಹೇಳಿದ್ದಾರೆ. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೋಡಿ 2017ರ ಡಿಸೆಂಬರ್’ನಲ್ಲಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?