ಕ್ರಿಕೆಟಿಗರ ಹೃದಯ ಗೆದ್ದ ವಿರುಷ್ಕಾ ಜೋಡಿಯ ತ್ಯಾಗ!

By Web Desk  |  First Published Dec 11, 2018, 5:32 PM IST

ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಜೋಡಿಯ ಮದುವೆ ವರ್ಷಾಚರಣೆ ದಿನವೇ ಎಲ್ಲರ ಮನಗೆದ್ದಿದ್ದಾರೆ. ವಿರುಷ್ಕಾ ಜೋಡಿಯ ತ್ಯಾಗಕ್ಕೆ ಇದೀಗ ವಿಶ್ವದೆಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟಕ್ಕೂ ಕೊಹ್ಲಿ-ಅನುಷ್ಕಾ ಜೋಡಿಯ ತ್ಯಾಗ ಏನು? ಇಲ್ಲಿದೆ ವಿವರ.


ಪರ್ತ್(ಡಿ.11): ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಗೆಲುವಿಗೆ ಬಳಿಕ ಇದೀಗ ಟೀಂ ಇಂಡಿಯಾ 2ನೇ ಟೆಸ್ಟ್ ಪಂದ್ಯಕ್ಕಾಗಿ ಪರ್ತ್‌ಗೆ ಆಗಮಿಸಿದೆ. ಈ ವೇಳೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಜೋಡಿ ಟೀಂ ಇಂಡಿಯಾ ವೇಗಿಗಳಿಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.

ಆಡಿಲೇಡ್‌ನಿಂದ ಪರ್ತ್‌ಗೆ ತೆರಳು ಟೀಂ ಇಂಡಿಯಾ ಕ್ರಿಕೆಟಿಗರಿಗೆ ವಿಮಾನ ಟಿಕೆಟ್ ಬುಕ್ ಮಾಡಲಾಗಿತ್ತು. ಎಲ್ಲಾ ಬ್ಯೂಸಿನೆಸ್ ಕ್ಲಾಸ್ ಸೀಟ್ ಸಿಕ್ಕಿರಲಿಲ್ಲ. ಈ ವೇಳೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ತಮ್ಮ ಬ್ಯುಸಿನೆಸ್ ಕ್ಲಾಸ್ ಸೀಟನ್ನ ಟೀಂ ಇಂಡಿಯಾ ವೇಗಿಗಳಿಗೆ ಬಿಟ್ಟುಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Tap to resize

Latest Videos

ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಬೌಲರ್‌ಗಳು 20 ವಿಕೆಟ್ ಕಬಳಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಬೌಲರ್‌ಗಳ ಸಾಧನೆಯನ್ನ ಕೊಹ್ಲಿ ಕೊಂಡಾಡಿದ್ದರು. ಇದೀಗ 2ನೇ ಟೆಸ್ಟ್ ಪಂದ್ಯಕ್ಕೆ ವೇಗಿಗಳು ಪ್ರಯಾಣದಿಂದ ಆಯಾಸವಾಗದಿರಲು ಕೊಹ್ಲಿ ಹಾಗೂ ಅನುಷ್ಕಾ ತಮ್ಮ ಬ್ಯುಸಿನೆಸ್ ಕ್ಲಾಸ್ ಸೀಟ್ ಬಿಟ್ಟುಕೊಟ್ಟಿದ್ದಾರೆ. 

click me!