ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಡೇಂಜರ್’ನಲ್ಲಿ ಕೊಹ್ಲಿ ನಂ.1 ಸ್ಥಾನ..!

Published : Dec 11, 2018, 03:36 PM IST
ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಡೇಂಜರ್’ನಲ್ಲಿ ಕೊಹ್ಲಿ ನಂ.1 ಸ್ಥಾನ..!

ಸಾರಾಂಶ

ವಿರಾಟ್ ಕೊಹ್ಲಿ 920 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೂ, ಕೇನ್ ವಿಲಿಯಮ್ಸನ್ ಕೇವಲ 7 ಅಂಕಗಳಿಂದ ಕೊಹ್ಲಿಗಿಂತ ಹಿಂದಿದ್ದಾರೆ. ಅಡಿಲೇಡ್ ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಚೇತೇಶ್ವರ್ ಪೂಜಾರ 2 ಸ್ಥಾನ ಏರಿಕೆ ಕಂಡು 4ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ದುಬೈ[ಡಿ.11]: ಭಾರತ-ಆಸ್ಟ್ರೇಲಿಯಾ ನಡುವಿನ ಅಡಿಲೇಡ್ ಟೆಸ್ಟ್ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನು ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಕೇನ್ ವಿಲಿಯಮ್ಸನ್ 913 ರೇಟಿಂಗ್ ಅಂಕಗಳೊಂದಿಗೆ ವೃತ್ತಿಜೀವನದ ಶ್ರೇಷ್ಠ ಸಾಧನೆಯೊಂದಿಗೆ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 

ವಿರಾಟ್ ಕೊಹ್ಲಿ 920 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೂ, ಕೇನ್ ವಿಲಿಯಮ್ಸನ್ ಕೇವಲ 7 ಅಂಕಗಳಿಂದ ಕೊಹ್ಲಿಗಿಂತ ಹಿಂದಿದ್ದಾರೆ. ಅಡಿಲೇಡ್ ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಚೇತೇಶ್ವರ್ ಪೂಜಾರ 2 ಸ್ಥಾನ ಏರಿಕೆ ಕಂಡು 4ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಸ್ಟೀವ್ ಸ್ಮಿತ್ ಹಾಗೂ ಜೋ ರೂಟ್ ತಲಾ ಒಂದು ಸ್ಥಾನ ಕುಸಿದು ಕ್ರಮವಾಗಿ 3 ಮತ್ತು 5ನೇ ಸ್ಥಾನಕ್ಕಿಳಿದಿದ್ದಾರೆ.  

ಇನ್ನು ಬೌಲರ್’ಗಳ ಶ್ರೇಯಾಂಕದಲ್ಲಿ ಕಗಿಸೋ ರಬಾಡ ಮತ್ತು ಜೇಮ್ಸ್ ಆ್ಯಂಡರ್’ಸನ್ ಮೊದಲೆರಡು ಸ್ಥಾನಗಳನ್ನು ಉಳಿಸಿಕೊಂಡಿದ್ದು, ವೆರ್ನಾನ್ ಫಿಲಾಂಡರ್ ಒಂದು ಸ್ಥಾನ ಏರಿಕೆ ಕಂಡು ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಪಾಕಿಸ್ತಾನ ಮೊಹಮ್ಮದ್ ಅಬ್ಬಾಸ್ ಒಂದು ಸ್ಥಾನ ಕುಸಿತದೊಂದಿಗೆ 4ನೇ ಸ್ಥಾನದಲ್ಲಿದ್ದರೆ, ರವೀಂದ್ರ ಜಡೇಜಾ 5ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನು ಅಶ್ವಿನ್ ಆರನೇ ಸ್ಥಾನಕ್ಕೇರುವಲ್ಲಿ ಸಫಲವಾಗಿದ್ದಾರೆ.

ಟಾಪ್ 10 ಬ್ಯಾಟ್ಸ್’ಮನ್’ಗಳ ಶ್ರೇಯಾಂಕ ಪಟ್ಟಿ:

ಸ್ಥಾನಬ್ಯಾಟ್ಸ್’ಮನ್ದೇಶ
1ವಿರಾಟ್ ಕೊಹ್ಲಿIND
2ಕೇನ್ ವಿಲಿಯಮ್ಸನ್NZ
3ಸ್ಟೀವ್ ಸ್ಮಿತ್AUS
4ಚೇತೇಶ್ವರ್ ಪೂಜಾರIND
5ಜೋ ರೂಟ್ENG
6ಡೇವಿಡ್ ವಾರ್ನರ್AUS
7ದೀಮೂತ್ ಕರುಣರತ್ನೆSL
8ಡೀನ್ ಏಲ್ಗರ್SA
9ಹೆನ್ರಿ ನಿಕೋಲಸ್NZ
10ಅಜರ್ ಅಲಿPAK

ಟಾಪ್ 10 ಬೌಲರ್’ಗಳ ಶ್ರೇಯಾಂಕಪಟ್ಟಿ

ಸ್ಥಾನಬೌಲರ್’ಗಳುದೇಶ
1ಕಗಿಸೋ ರಬಾಡSA
2ಜೇಮ್ಸ್ ಆ್ಯಂಡರ್’ಸನ್ENG
3ವೆರ್ನಾನ್ ಫಿಲಾಂಡರ್SA
4ಮೊಹಮ್ಮದ್ ಅಬ್ಬಾಸ್PAK
5ರವೀಂದ್ರ ಜಡೇಜಾIND
6ರವಿಚಂದ್ರನ್ ಅಶ್ವಿನ್IND
7ಪ್ಯಾಟ್ ಕಮ್ಮಿನ್ಸ್AUS
8ಟ್ರೆಂಟ್ ಬೌಲ್ಟ್NZ
9ಯಾಸಿರ್ ಶಾPAK
10ಜೇಸನ್ ಹೋಲ್ಡರ್WI

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚೇರ್ ಮೇಲೆ ಕೂತು ಹೋಮ ಹವನ ಮಾಡಿದ ಶ್ರೇಯಸ್ ಅಯ್ಯರ್, ಸನಾತನಿಯೋ, ಅಲ್ವೋ ಚರ್ಚೆ!
ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?