ಟ್ವಿಟ್ಟರ್`ನಲ್ಲಿ ಸೆಹ್ವಾಗ್, ಅಶ್ವಿನ್`ಗೆ ಟಾಂಗ್ ನೀಡಿದ ಪತ್ನಿಯರು

Published : Oct 13, 2016, 11:16 AM ISTUpdated : Apr 11, 2018, 12:38 PM IST
ಟ್ವಿಟ್ಟರ್`ನಲ್ಲಿ ಸೆಹ್ವಾಗ್, ಅಶ್ವಿನ್`ಗೆ ಟಾಂಗ್ ನೀಡಿದ ಪತ್ನಿಯರು

ಸಾರಾಂಶ

ಟ್ವಿಟ್ಟರ್`ನಲ್ಲಿ ಅಶ್ವಿನ್ ಅವರನ್ನ ಚುಡಾಯಿಸಿದ ಸೆಹ್ವಾಗ್

ನವದೆಹಲಿ(ಅ.13): ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ಸಾಧಿಸಿದ ಅಮೋಘ ಜಯದ ರೂವಾರಿಯೆನಿಸಿದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ಟ್ವಿಟರ್‌ನಲ್ಲಿ ಜಗತ್ತಿನ ಮೂಲೆ ಮೂಲೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಇದೇ ನೆಪದಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಅವರ ಪತ್ನಿ ಆರ್ತಿ ಸೆಹ್ವಾಗ್, ರವಿಚಂದ್ರನ್ ಅಶ್ವಿನ್ ಹಾಗೂ ಅವರ ಪತ್ನಿ ಪ್ರೀತಿ ಅಶ್ವಿನ್ ನಡುವಿನ ಮಾತುಕತೆ ಟ್ವಿಟರ್‌ನಲ್ಲಿ ಸದ್ದು ಮಾಡಿದೆ.

ಐದು ದಿನಗಳ ಕಾಲ ನಡೆಯಬೇಕಿದ್ದ ತೃತೀಯ ಟೆಸ್ಟ್ ಪಂದ್ಯದಲ್ಲಿ ಜಾದೂ ಮಾಡಿದ ಅಶ್ವಿನ್ ಒಟ್ಟಾರೆ 13 ವಿಕೆಟ್ ಕಬಳಿಸಿ ನಾಲ್ಕನೇ ದಿನಕ್ಕೇ ಪಂದ್ಯ ಮುಕ್ತಾಯವಾಗುವಂತೆ ಮಾಡಿದ್ದರು. ಇದನ್ನು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದ ಸೆಹ್ವಾಗ್, ‘ಪ್ರಿಯ ಅಶ್ವಿನ್, ಅದ್ಭುತ ಪ್ರದರ್ಶನಕ್ಕಾಗಿ ಅಭಿನಂದನೆಗಳು. ಮದುವೆಯಾದ ಯುವಕನಿಗೆ ಮಾತ್ರ ಹೀಗೆ ಮನೆಗೆ ಬೇಗ ಹೋಗಲು ಅನುಕೂಲವಾಗುವಂಥ ಕೆಲಸ ಮಾಡುತ್ತಾನೆ’ ಎಂದು ಚುಡಾಯಿಸಿದ್ದರು. ಇದಕ್ಕೆ ತಣ್ಣನೆಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದ ಅಶ್ವಿನ್, ‘ಥ್ಯಾಂಕ್ಸ್ ವೀರೂ ಪಾ’ ಎಂದಂದು ಸುಮ್ಮನಾಗಿಸಿದ್ದರು.

ಈ ಸಂಭಾಷಣೆಗೆ ಆನಂತರ ಇಬ್ಬರ ಪತ್ನಿಯರೂ ಪಾಲುದಾರರಾದರು. ಮೊದಲು ಸೆಹ್ವಾಗ್ ಟ್ವೀಟ್‌ಗೆ ಮರುಟ್ವೀಟ್ ಮಾಡಿದ ಪ್ರೀತಿ ಅಶ್ವಿನ್, ‘ನಾನೇನೂ ಅವರಿಗೆ ಮನೆಗೆ ಬೇಗ ಬಾ ಎಂದು ತಾಕೀತು ಮಾಡುವುದಿಲ್ಲ’ ಎಂದರು. ಈ ಟ್ವೀಟ್‌ಗೆ ಉತ್ತರಿಸಿದ್ದು ಸೆಹ್ವಾಗ್ ಪತ್ನಿ ಆರ್ತಿ. ಪ್ರೀತಿ ಅಶ್ವಿನ್ ಅವರನ್ನುದ್ದೇಶಿಸಿ ಟ್ವೀಟ್ ಮಾಡಿದ ಆರ್ತಿ, ‘ನಾನೂ ಅಷ್ಟೇ. ಮನೆಗೆ ಬೇಗ ಬನ್ನಿ ಎಂದೇನೂ ಹೇಳುವುದಿಲ್ಲ. ಆದರೆ, ಈ ಇಬ್ಬರೇ ಗಡಿಬಿಡಿ ಮಾಡುವಂಥವರು’ ಎಂದು ಸೆಹ್ವಾಗ್, ಅಶ್ವಿನ್ ಇಬ್ಬರ ಕಾಲೆಳೆದರು.

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿರಾಟ್ ಕೊಹ್ಲಿ ಫ್ಯಾನ್ಸ್‌ಗೆ ಬಿಗ್ ಶಾಕ್; ಚಿನ್ನಸ್ವಾಮಿ ಸ್ಟೇಡಿಯಂನಿಂದ ಇಲ್ಲಿಗೆ ಮ್ಯಾಚ್ ಶಿಫ್ಟ್!
'ಈ ಕ್ರಿಕೆಟಿಗನ ವೃತ್ತಿ ಬದುಕು ಹಾಳು ಮಾಡಿದ್ರಾ ಧೋನಿ?' ನಿವೃತ್ತಿ ಬೆನ್ನಲ್ಲೇ ತುಟಿಬಿಚ್ಚಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!