
ಮಂಗಳೂರು (ಆ.30): ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶುಕ್ರವಾರ ಅಂತಾರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆಯಾದ ಕಂಬಳದ ಫೋಟೋವನ್ನು ಹಂಚಿಕೊಂಡಿದ್ದಾರೆ.
ಕಂಬಳದ ಚಿತ್ರ ಮಾತ್ರವಲ್ಲದೆ ಪೈಲ್ವಾನ ಜೊತೆಗೆ ಬಾಲಕನೊಬ್ಬನ ಕುಸ್ತಿ, ಬಾಲಕಿಯರು ಹಾಕಿ ಆಡುತ್ತಿರುವ, ವೃದ್ಧೆಯೊಬ್ಬರು ಶೂಟಿಂಗ್‌ನಲ್ಲಿ ನಿರತರಾಗಿರುವ ಚಿತ್ರಗಳನ್ನೂ ಹಾಕಿದ್ದಾರೆ.
ಕ್ರೀಡಾ ಸಾಧಕರಿಗೆ ಸಿಹಿ ಸುದ್ದಿ: ಪ್ರಶಸ್ತಿಗಳ ನಗದು ಮೊತ್ತ ಗಣನೀಯ ಹೆಚ್ಚಳ!...
ಜೊತೆಗೆ ‘ಕೊರೋನಾದಿಂದ ಕ್ರೀಡೆಗೂ ತೊಂದರೆಯಾಗಿದೆ. ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಸೋಂಕು ಎದುರಿಸಲು ಸಾಧ್ಯ. ಆದ್ದರಿಂದ ನಿಯಮಿತವಾಗಿ ಯೋಗ, ವ್ಯಾಯಾಮ ಮಾಡಿ ‘ಫಿಟ್ ಇಂಡಿಯಾ’ವನ್ನು ಸಾಮೂಹಿಕ ಆಂದೋಲನವಾಗಿಸಿ ಎಂದು ಹಿಂದಿ ಭಾಷೆಯಲ್ಲಿ ಕರೆ ನೀಡಿದ್ದಾರೆ.
ಕೊರೋನಾ ಮಹಾಮಾರಿ ಕ್ರೀಡಾ ಕ್ಷೇತ್ರದಲ್ಲಷ್ಟೇ ಅಲ್ಲದೇ ಜನಜೀವನದ ಮೇಲೂ ಸಾಕಷ್ಟು ಪರಿಣಾಮ ಉಂಟು ಮಾಡಿದ್ದು, ಎಲ್ಲವನ್ನೂ ಕೆಲ ತಿಂಗಳು ಬುಡ ಮೇಲು ಮಾಡಿತ್ತು. ಸಂಪೂರ್ಣ ಜನಜೀವನವೇ ಅಸ್ತವ್ಯಸ್ತವಾಗಿತ್ತು. ಬರು ಬರುತ್ತಾ ಬದುಕು ಹೊಂದಾಣಿಕೆಯಲ್ಲಿ ಸಾಗಿದ್ದು, ಕ್ರೀಡಾ ಕ್ಷೇತ್ರವೂ ಸಾಕಷ್ಟು ಪರಿಣಾಮ ಎದುರಿಸುವಂತಾಯ್ತು. ಅಲ್ಲದೇ ಹಲವು ಕ್ರೀಡಾ ಕೂಟಗಳು ರದ್ದು ಮಾಡಲಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.