ಸುರೇಶ್ ರೈನಾ ಕುಟುಂಬಕ್ಕೆ ಆಘಾತ| ರೈನಾ ಐಪಿಎಲ್ ಟೂರ್ನಿಯಿಂದ ಹೊರ ಬರಲು ಕಾರಣವಾದ ಶಾಕಿಂಗ್ ಘಟನೆ| ರೈನಾ ಮಾವನ ಹತ್ಯೆ, ಅತ್ತೆ ಸ್ಥಿತಿ ಗಂಭೀರ!
ಪಠಾಣ್‌ಕೋಟ್(ಆ.30): ಚೆನ್ನೈ ಸೂಪರ್ ಕಿಂಗ್ಸ್‌ನ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್ ಸುರೇಶ್ ರೈನಾ 13ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಂದಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ವೈಯುಕ್ತಿಕ ಕಾರಣದಿಂದಾಗಿ ದುಬೈನಿಂದ ತವರಿಗೆ ಮರಳಲು ತೀರ್ಮಾನಿಸಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಆದರೀಗ ಅವರು ತವರು ನಾಡಿಗೆ ಮರಳು ಕಾರಣವಾದ ಅಂಶವೂ ಬಯಲಾಗಿದೆ.
ಪಂಜಾಬಿನ ಪಠಾಣ್ ಕೋಟ್ ಜಿಲ್ಲೆಯ ಹಳ್ಳಿಯಲ್ಲಿ ರಾತ್ರಿ ವೇಳೆ ದರೋಡೆಕೋರರು ನಡೆಸಿದ ದಾಳಿಯಲ್ಲಿ ಸುರೇಶ್ ರೈನಾರ 58 ವರ್ಷದ ಮಾವ(ಅಂಕಲ್) ಮೃತಪಟ್ಟಿದ್ದಾರೆ. ಅಲ್ಲದೇ ಅತ್ತೆ ಸೇರಿದಂತೆ ಕುಟುಂಬದ ನಾಲ್ವರು ಸದಸ್ಯರಿಗೆ ಗಂಭೀರ ಗಾಯಗಳಾಗಿವೆ. ಮೃತರನ್ನು ಸರ್ಕಾರಿ ಗುತ್ತಿಗೆದಾರ ಅಶೋಕ್ ಕುಮಾರ್ ಎಂದು ಗುರುತಿಸಲಾಗಿದೆ.
CSK ಗೆ ಬಿಗ್ ಶಾಕ್: IPL 2020 ಸಂಪೂರ್ಣ ಟೂರ್ನಿಯಿಂದ ಸುರೇಶ್ ರೈನಾ ಔಟ್..!
ಆಗಸ್ಟ್ 19ರಂದು ರಾತ್ರಿ ಈ ಘನೆ ನಡೆದಿದ್ದು, ಕುಟುಂಬ ಸದಸ್ಯರು ಛಾವಣಿಯ ಮೇಲೆ ನಿದ್ರಿಸುತ್ತಿದ್ದರು. ಈ ವೇಳೆ ದರೋಡೆಕೋರರು ದಾಳಿ ನಡೆಸಿ ಮಾರಣಾಂತಿಕಮ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಆದರೆ ಈವರೆಗೂ ದುಷ್ಕರ್ಮಿಗಳು ಯಾರೆಂದು ಪತ್ತೆಯಾಗಿಲ್ಲ.
ಈ ಸಂಬಂಧ ಜಾಗ್ರಾನ್ ಡಾಟ್ ಕಾಂ ವರದಿ ಮಾಡಿದ್ದು, ಕುಟುಂಬ ಸದಸ್ಯರು ನಿದ್ರೆಯಲ್ಲಿದ್ದಾಗ ದಾಳಿಕೋರರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ ಎಂದು ಉಲ್ಲೇಖಿಸಿದೆ.
ಪ್ರಧಾನಿ ಮೋದಿ ಮನವಿ ಮಾಡಿಕೊಂಡರೆ ಧೋನಿ ಟಿ20 ವಿಶ್ವಕಪ್ ಆಡಬಹುದು ಎಂದ ಪಾಕ್ ಮಾಜಿ ವೇಗಿ..!
ತಲೆಗೆ ತೀವ್ರ ಪೆಟ್ಟಾಗಿ ಅಶೋಕ್ ಕುಮಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, 80 ವರ್ಷದ ಅವರ ತಾಯಿ ಸತ್ಯಾದೇವಿ, ಪತ್ನಿ ಅಶಾ ದೇವಿ, ಮಕ್ಕಳಾದ ಅಪಿನ್ ಮತ್ತು ಕೌಶಾಲ್ ತೀವ್ರ ರೀತಿಯಲ್ಲಿ ಗಾಯಗೊಂಡಿರುವುದಾಗಿ ತಿಳಿಸಿರುವ ಪೊಲೀಸರು, ಈ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.