
ಬೆಂಗಳೂರು(ಮೇ.18): ಐಪಿಎಲ್ 10ನೇ ಆವೃತ್ತಿ ರೋಚಕ ಘಟ್ಟತಲುಪಿದ್ದು, ಇನ್ನೇನಿದ್ದೂ ಚಾಂಪಿಯನ್ ಆಗುವ ತಂಡ ಯಾವುದು ಅನ್ನುವ ಲೆಕ್ಕಾಚಾರ ಮಾತ್ರ.
ಕಿಂಗ್ಸ್ ಇಲೆವೆನ್ ತಂಡ ಲೀಗ್‌ನಿಂದಲೇ ಹೊರಬಿದ್ದ ಕಾರಣ ತಂಡ ಕ್ರಿಕೆಟ್ ನಿರ್ದೇಶಕರಾಗಿದ್ದ ವೀರೇಂದ್ರ ಸೆಹ್ವಾಗ್‌ಗೀಗ ಬಿಡುವಿನ ಸಮಯ. ಈ ಸಮಯದಲ್ಲಿ ಪತ್ನಿ ಜತೆ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ತೆರಳಿದ್ದ ವೀರೂ, ಅಲ್ಲೂ ಸಹ ಕ್ರಿಕೆಟ್ ವೀಕ್ಷಣೆ ಮಾಡಿ ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗಿದ್ದಾರೆ.
ಮೊಬೈಲ್‌ನಲ್ಲಿ ಮುಂಬೈ- ಪುಣೆ ನಡುವಿನ ಮೊದಲ ಕ್ವಾಲಿಫೈಯರ್ ಪಂದ್ಯ ವೀಕ್ಷಿಸುತ್ತಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಹಾಕಿ, ‘‘ಪತ್ನಿ ಸಂತಸವಾಗಿದ್ದರೆ ಜೀವನ ಸುಖವಾಗಿರುತ್ತದೆ. ಥಿಯೇಟರ್‌ನಲ್ಲಿ ಪತ್ನಿ ಸಿನಿಮಾ ನೋಡುತ್ತಿದ್ದರೆ, ನಾನು ಕ್ರಿಕೆಟ್ ನೋಡುತ್ತಿದ್ದೇನೆ. ಅವಳಿಗೂ ಖುಷಿ, ನನಗೂ ಖುಷಿ'' ಎಂದು ಬರೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.