ಚೊಚ್ಚಲ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಆಡಿದ ಅಮೆರಿಕ

By Web DeskFirst Published Mar 16, 2019, 11:40 AM IST
Highlights

ವಿಶ್ವದ ದೊಡ್ಡಣ್ಣ ಎಂದೇ ಹೆಸರಾದ ಅಮೆರಿಕ ಇದೀಗ ಕ್ರಿಕೆಟ್ ರಂಗಕ್ಕೂ ಕಾಲಿಟ್ಟಿದೆ. ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಜಯಭೇರಿ ಬಾರಿಸುವ ನಿರೀಕ್ಷೆಯಲ್ಲಿದ್ದ ಅಮೆರಿಕಾಗೆ ವರುಣ ಅಡ್ಡಿ ಪಡಿಸುವ ಮೂಲಕ ಚೊಚ್ಚಲ ಜಯದ ಕನಸು ಭಗ್ನವಾಯಿತು. 

ದುಬೈ: ಕೆಲ ವರ್ಷಗಳ ಹಿಂದೆ ಕ್ರಿಕೆಟ್ ಎಂದರೆ ಅಲರ್ಜಿ ಎಂಬಂತಿದ್ದ ಅಮೆರಿಕ ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಾನ್ಯತೆಯ ಚುಟುಕು ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದೆ. 

ಐಸಿಸಿಯ 105ನೇ ಸದಸ್ಯ ರಾಷ್ಟ್ರವಾದ ಅಮೆರಿಕ, ಟಿ20 ಕ್ರಿಕೆಟ್ ಪಂದ್ಯವಾಡುತ್ತಿರುವ ವಿಶ್ವದ 28ನೇ ದೇಶವಾಗಿದೆ. ಟಾಸ್ ಗೆದ್ದ ಯುಎಇ ಕ್ಷೇತ್ರ ರಕ್ಷಣೆ ಆಯ್ದುಕೊಂಡಿತು.

ಮಳೆಯ ಕಾರಣ ಪಂದ್ಯವನ್ನು 15 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ಅಮೆರಿಕ 7 ವಿಕೆಟ್ ನಷ್ಟಕ್ಕೆ 152 ರನ್ ಪೇರಿಸಿತು. ಬಳಿಕ ಯುಎಇ ಬ್ಯಾಟಿಂಗ್ ನಡೆಸುತ್ತಿದ್ದಾಗ 3.3ನೇ ಓವರ್ ವೇಳೆ ಆರಂಭಗೊಂಡ ಮಳೆ ನಿಲ್ಲದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು.

ಸ್ಕೋರ್: 
ಅಮೆರಿಕ 152/7 
ಯುಎಇ 29/2

click me!