ಯುಎಸ್‌ ಓಪನ್‌ ಟೆನಿಸ್‌ನಲ್ಲಿ ಹಲವು ಮಹತ್ವದ ಬದಲಾವಣೆ!

Published : Feb 12, 2025, 10:30 AM IST
ಯುಎಸ್‌ ಓಪನ್‌ ಟೆನಿಸ್‌ನಲ್ಲಿ ಹಲವು ಮಹತ್ವದ ಬದಲಾವಣೆ!

ಸಾರಾಂಶ

ಯುಎಸ್ ಓಪನ್‌ನಲ್ಲಿ ಮಿಶ್ರ ಡಬಲ್ಸ್ ಆಗಸ್ಟ್ 19ರಿಂದ ಎರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. 4 ಗೇಮ್‌ಗಳ ಸೆಟ್‌ಗಳು, 10 ಅಂಕಗಳ ಟೈಬ್ರೇಕರ್‌ ಮತ್ತು 16 ತಂಡಗಳು ಮಾತ್ರ ಸ್ಪರ್ಧಿಸಲಿವೆ. ವಿಜೇತರಿಗೆ 8.6 ಕೋಟಿ ರೂ. ಬಹುಮಾನ ಘೋಷಿಸಲಾಗಿದೆ. ಫೈನಲ್‌ನಲ್ಲಿ ಮಾತ್ರ 6 ಗೇಮ್‌ಗಳ 3 ಸೆಟ್‌ಗಳ ಸಾಂಪ್ರದಾಯಿಕ ಸ್ವರೂಪ ಮುಂದುವರಿಯಲಿದೆ.

ನ್ಯೂಯಾರ್ಕ್: ಈ ಬಾರಿ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಹಲವು ಮಹತ್ವದ ಬದಲಾವಣೆಗಳು ಕಂಡುಬರಲಿವೆ. ಟೂರ್ನಿ ಆ.24ರಿಂದ ಆರಂಭಗೊಳ್ಳಲಿದ್ದರೂ, ಮಿಶ್ರ ಡಬಲ್ಸ್‌ ಸ್ಪರ್ಧೆಗಳು ಒಂದು ವಾರ ಮೊದಲೇ ಅಂದರೆ ಆ.19ಕ್ಕೆ ಶುರುವಾಗಲಿದೆ. ಆಸಕ್ತಿದಾಯಕ ವಿಚಾರ ಏನೆಂದರೆ ಕೇವಲ 2 ದಿನ(ಆ.19, 20)ಗಳಲ್ಲೇ ಮಿಶ್ರ ಡಬಲ್ಸ್ ಸ್ಪರ್ಧೆ ಮುಕ್ತಾಯಗೊಳ್ಳಲಿದೆ.

ಇನ್ನು, ಗೇಮ್ಸ್‌ನ ಅಂಕದಲ್ಲೂ ಬದಲಾವಣೆ ಇರಲಿದೆ. ಸಾಮಾನ್ಯವಾಗಿ 6 ಗೇಮ್‌ಗಳ 3 ಸೆಟ್‌ ಆಡಿಸಲಾಗುತ್ತಿದ್ದರೂ, ಈ ಬಾರಿ 4 ಗೇಮ್‌ಗಳ ಪಂದ್ಯ ನಡೆಸಲು ನಿರ್ಧರಿಸಲಾಗಿದೆ. 2 ಸೆಟ್‌ಗಳ ಬಳಿಕ ಟೈ ಆದರೆ 10 ಅಂಕಗಳ ಟೈ ಬ್ರೇಕರ್‌ ಆಡಿಸಲಾಗುತ್ತದೆ. ಆದರೆ ಫೈನಲ್‌ ಪಂದ್ಯದಲ್ಲಿ 6 ಗೇಮ್‌ಗಳ 3 ಸೆಟ್‌ ಇರಲಿವೆ. ಕಳೆದ ಬಾರಿ 32 ತಂಡಗಳು ಆಡಿದ್ದರೆ, ಈ ಬಾರಿ ಕೇವಲ 16 ತಂಡಗಳು ಸ್ಪರ್ಧಿಸಲಿವೆ.

ಟೂರ್ನಿಯ ನಗದು ಬಹುಮಾನದಲ್ಲೂ ಹೆಚ್ಚಳ ಮಾಡಲಾಗಿದೆ. ಈ ಬಾರಿ ಮಿಶ್ರ ಡಬಲ್ಸ್‌ ವಿಜೇತರಿಗೆ 1 ಮಿಲಿಯನ್‌ ಯುಎಸ್‌ ಡಾಲರ್‌(8.6 ಕೋಟಿ ರು.) ಸಿಗಲಿದೆ. ಕಳೆದ ಬಾರಿ ₹1.73 ಕೋಟಿ ನೀಡಲಾಗಿತ್ತು.

ಖೋ ಖೋ: ಪ್ರೋತ್ಸಾಹ ಧನ ಹೆಚ್ಚಿಸಲು ಸರ್ಕಾರಕ್ಕೆ ಮನವಿ

ಬೆಂಗಳೂರು: ಖೋ ಖೋ ವಿಶ್ವಕಪ್‌ ವಿಜೇತ ಭಾರತ ತಂಡದಲ್ಲಿದ್ದ ಕರ್ನಾಟಕದ ಇಬ್ಬರಿಗೆ ರಾಜ್ಯ ಸರ್ಕಾರ ಘೋಷಿಸಿದ ಬಹುಮಾನ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಭಾನುವಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಬೆಂಗಳೂರು ನಗರ ಖೋ-ಖೋ ಸಂಸ್ಥೆ ಮನವಿ ಸಲ್ಲಿಸಿದೆ. ಅಂತಾರಾಷ್ಟ್ರೀಯ ಕೂಟಗಳಲ್ಲಿ ಪದಕ ಗೆಲ್ಲುವ ಸ್ಪರ್ಧಿಗಳಿಗೆ ಬೇರೆ ರಾಜ್ಯಗಳಲ್ಲಿ ನೀಡುತ್ತಿರುವಂತೆ ನಮ್ಮ ರಾಜ್ಯದಲ್ಲೂ ‘ಎ’, ‘ಬಿ’ ದರ್ಜೆ ಹುದ್ದೆ ನೀಡಿ, ಕನಿಷ್ಠ ₹50 ಲಕ್ಷ ನಗದು ಬಹುಮಾನ ನೀಡಬೇಕು ಎಂದು ಸಂಸ್ಥೆ ಆಗ್ರಹಿಸಿದೆ. ಈ ವೇಳೆ ಸಂಸ್ಥೆ ಕಾರ್ಯದರ್ಶಿ ಜೋಸೆಫ್‌ ವೇದ ಕುಮಾರ್‌ ಸೇರಿ ಹಲವರು ಉಪಸ್ಥಿತರಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅದೊಂದು ಕಾರಣಕ್ಕಾಗಿ 6 ತಿಂಗಳಿನಿಂದ ಕುಡಿಯೋದು ಪೂರ್ತಿ ಬಿಟ್ಟು ಹೊಸ ಶಪಥ ಮಾಡಿದ ಯುಜುವೇಂದ್ರ ಚಹಲ್!
ರೆಡ್ ಬುಲ್ ಎಫ್1 ಕಾರಿಗೆ ನಿಂಬೆ ಮೆಣಸಿನಕಾಯಿ ಕಟ್ಟಿ ತೆಂಗಿನಕಾಯಿ ಒಡೆದು ಪೂಜೆ ಮಾಡಿದ ವಿದೇಶಿ ಮಹಿಳೆ: ವೀಡಿಯೋ