ಅಂಧರ ವಿಶ್ವಕಪ್: ಅಜೇಯವಾಗಿ ಸೆಮೀಸ್'ಗೆ ಲಗ್ಗೆಯಿಟ್ಟ ಭಾರತ

By Suvarna Web DeskFirst Published Jan 14, 2018, 8:45 PM IST
Highlights

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನೇಪಾಳದ ಲೆಕ್ಕಾಚಾರವನ್ನು ಭಾರತದ ಬೌಲರ್‌'ಗಳು ಉಲ್ಟಾ ಮಾಡಿದರು. ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ನೇಪಾಳ ಕೇವಲ 156 ರನ್‌'ಗಳಿಗೆ ಸರ್ವಪತನಗೊಂಡಿತು.

ದುಬೈ(ಜ.14): 5ನೇ ಅಂಧರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದ ಅಜೇಯ ಓಟ ಮುಂದುವರಿದ್ದು, ಸೆಮಿಫೈನಲ್‌'ಗೆ ಪ್ರವೇಶ ಗಿಟ್ಟಿಸಿದೆ. ಆರಂಭಿಕ ಬ್ಯಾಟ್ಸ್‌ಮನ್ ಅನಿಲ್ ಗಾರಿಯಾ ದಾಖಲಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ನೇಪಾಳ ವಿರುದ್ಧ 8 ವಿಕೆಟ್‌'ಗಳ ಜಯ ಸಾಧಿಸುವ ಮೂಲಕ ಭಾರತ ಅಂತಿಮ 4ರ ಘಟ್ಟ ಪ್ರವೇಶಿಸಿತು. ಭಾರತ ಜ.17ರಂದು ಸೆಮೀಸ್‌'ನಲ್ಲಿ ಬಾಂಗ್ಲಾದೇಶದ ಸವಾಲು ಎದುರಿಸಲಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನೇಪಾಳದ ಲೆಕ್ಕಾಚಾರವನ್ನು ಭಾರತದ ಬೌಲರ್‌'ಗಳು ಉಲ್ಟಾ ಮಾಡಿದರು. ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ನೇಪಾಳ ಕೇವಲ 156 ರನ್‌'ಗಳಿಗೆ ಸರ್ವಪತನಗೊಂಡಿತು. 22 ರನ್ ನೀಡಿ 2 ವಿಕೆಟ್ ಕಬಳಿಸಿದ ಪ್ರಕಾಶ್ ನೇಪಾಳದ ಓಟಕ್ಕೆ ಬ್ರೇಕ್ ಹಾಕಿದರು. ನಾಯಕ ಅಜಯ್ ರೆಡ್ಡಿ, ರಾಮ್‌ಬೀರ್, ಪ್ರೇಮ್‌ಕುಮಾರ್ ಹಾಗೂ ಜಾಫರ್ ಇಕ್ಬಾಲ್ ತಲಾ 1 ವಿಕೆಟ್ ಕಬಳಿಸಿ ನೇಪಾಳದ ಕುಸಿತಕ್ಕೆ ಕಾರಣರಾದರು.

ಗೆಲುವಿನ ವಿಶ್ವಾಸದೊಂದಿಗೆ ಬ್ಯಾಟಿಂಗ್‌ಗೆ ಇಳಿದ ಭಾರತ ಆರಂಭದಲ್ಲೇ ದುರ್ಗಾ ರಾವ್ (12 ರನ್) ವಿಕೆಟ್ ಕಳೆದುಕೊಂಡಿತಾದರೂ, ಮತ್ತೋರ್ವ ಆರಂಭಿಕ ಅನಿಲ್ 29 ಎಸೆತಗಳಲ್ಲಿ 54 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಮಹೇಂದರ್ (40) ಹಾಗೂ ರಾಮ್‌'ಬೀರ್ (38) ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್

ನೇಪಾಳ : 156/9

ಭರತ್: 35, ಪದಮ್: 23, ಪ್ರಕಾಶ್ 22/2

ಭಾರತ : 160/2

ಅನಿಲ್: 54, ಮಹೇಂದರ್: 40, ಭರತ್: 25/2

click me!