
ಬೆಂಗಳೂರು(ಮಾ.29): ಐಪಿಎಲ್ 12ನೇ ಆವೃತ್ತಿಯ ಆರಂಭಿಕ 2 ಪಂದ್ಯ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿರಾಸೆ ಅನುಭವಿಸಿದೆ. ಅದರಲ್ಲೂ ತವರಿನಲ್ಲಿ ಮುಂಬೈ ವಿರುದ್ದ ವಿರೋಚಿತ ಸೋಲು ನುಂಗಲಾರದ ತುತ್ತಾಗಿ ಪರಿಣಿಮಿಸಿದೆ. RCB ಸೋಲಿಗೆ ಲಸಿತ್ ಮಲಿಂಗ ಅಂತಿಮ ಎಸೆತ ನೋ ಬಾಲ್ ಆಗಿದ್ದರೂ ಅಂಪೈರ್ ಗಮನಿಸಿದೇ ಭಾರಿ ಎಡವಟ್ಟು ಮಾಡಿದ್ದಾರೆ.
ಇದನ್ನೂ ಓದಿ: ಕೊನೆ ಎಸೆತ ನೋ ಬಾಲ್: ಅಂಪೈರ್ ಮೇಲೆ ಕ್ರಿಕೆಟಿಗರು ಸಿಡಿಮಿಡಿ
ಅಂತಿಮ ಎಸೆತದಲ್ಲಿ ಬೆಂಗಳೂರು ಗೆಲುವಿಗೆ 7 ರನ್ ಅವಶ್ಯಕತೆ ಇತ್ತು. ಫ್ರಂಟ್ ಫೂಟ್ ನೋ ಬಾಲ್ ಆಗಿದ್ದರೂ ಅಂಪೈರ್ ಗಮನಿಸಲಿಲ್ಲ. ಹೀಗಾಗಿ RCB ಫ್ರೀ ಹಿಟ್ ಅವಕಾಶ ಕಳೆದುಕೊಂಡಿತು. ಇಷ್ಟೇ ಅಲ್ಲ 6 ರನ್ ವಿರೋಚಿತ ಸೋಲು ಕಂಡಿತು ಸೋಲಿನ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ನೋ ಬಾಲ್ ಎಸೆತಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: IPL 2019:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೈಂ ಟೇಬಲ್!
ನಾವು ಐಪಿಎಲ್ ಲೆವೆನ್ ಕ್ರಿಕೆಟ್ ಆಡುತ್ತಿದ್ದೇವೆ. ಯಾವುದೇ ಕ್ಲಬ್ ಮ್ಯಾಚ್ ಅಲ್ಲ. ಹೀಗಾಗಿ ಅಂಪೈರ್‌ಗಳು ಹೆಚ್ಚಿನ ಗಮನವಹಿಸಬೇಕು. ಆದರೆ ಅಂಪೈರ್ ನಿರ್ಧಾರ ಮಾತ್ರ ಹಾಸ್ಯಸ್ಪದವಾಗಿತ್ತು. ಪಂದ್ಯದ ಫಲಿತಾಂಶ ನಿರ್ಧಾರ ಕ್ಷಣ ಅಥವಾ ಅಂತಿಮ ಘಟ್ಟದಲ್ಲಿ ಅಂಪೈರ್‌ಗಳು ಹೆಚ್ಚು ಎಚ್ಚರದಿಂದ ಇರಬೇಕು. ಎಬಿ ಡಿವಿಲಿಯರ್ಸ್ ಹಾಗೇ ಇತರ ಬ್ಯಾಟ್ಸ್‌ಮನ್‌ಗಳೂ ರನ್ ಕಾಣಿಕೆ ನೀಡಬೇಕಿತ್ತು. ಮುಂಬೈ 145 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತು. ಆದರೆ ನಮ್ಮ ಡೆತ್ ಓವರ್‌ಗಳು ದುಬಾರಿಯಾಯ್ತು. ನಮ್ಮ ಬೌಲಿಂಗ್ ವಿಭಾಗ ಈ ಪಂದ್ಯದಿಂದ ಕಲಿಯಬೇಕಿದೆ. ತಂಡದ ಪ್ರತಿಯೊಬ್ಬರಿಗೂ ಈ ಪಂದ್ಯ ಪಾಠ. ಪಂದ್ಯದ ನಿರ್ಣಾಯಕ ಸಂದರ್ಭದಲ್ಲಿ ನಾನು ಔಟಾದೆ. ಶಿವಂ ಅತ್ಯುತ್ತಮ ಆಟಗಾರ. ಆದರೆ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಎದುರು ರನ್ ಗಳಿಸುವುದು ಕಷ್ಟ. ಬುಮ್ರಾ ತಂಡದಲ್ಲಿರುವುದು ಮುಂಬೈ ಅದೃಷ್ಟ. ಜೊತೆ ಲಸಿತ್ ಮಲಿಂಗ ಅನುಭವ ಕೂಡ ತಂಡಕ್ಕೆ ನೆರವಾಗುತ್ತಿದೆ. ಬುಮ್ರಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇದು ಟೀಂ ಇಂಡಿಯಾಗೆ ಉತ್ತಮ ಎಂದು ಕೊಹ್ಲಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.