
ನವದೆಹಲಿ(ಅ.19): ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಸತತ 80 ವಾರಗಳ ಕಾಲ ಮಹಿಳಾ ಡಬಲ್ಸ್‌ನ ವಿಶ್ವ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದ ಸಾಧನೆ ಮಾಡಿದ್ದಾರೆ.
ಈ ಸಂತಸವನ್ನು ಸಾನಿಯಾ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದರು. ಮಂಜ್ರೇಕರ್ ನಂ.1 ಡಬಲ್ಸ್ ಆಟಗಾರ್ತಿ ಎಂದು ಮೂದಲಿಸುವ ಹಾಗೆ ಅಭಿನಂದನೆ ಸಲ್ಲಿಸಿದ್ದರು. ಮಾಜಿ ಕ್ರಿಕೆಟಿಗನ ಪ್ರತಿಕ್ರಿಯೆಗೆ ಗರಂ ಆದ ಸಾನಿಯಾ, ನಾನು ಸಿಂಗಲ್ಸ್ ವಿಭಾಗದಲ್ಲಿ ಆಡುವುದಿಲ್ಲ. ಸಾಮಾನ್ಯ ಜ್ಞಾನ ಇಟ್ಟುಕೊಂಡು ಮಾತಾಡಿ, ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಮಂಜ್ರೇಕರ್ ಮರು ಟ್ವೀಟ್‌ನಲ್ಲಿ ನೀವು ನನ್ನ ಬಗೆಗಿನ ಮಹತ್ವದ ವಿಷಯವನ್ನು ಯಾರಾದರ ಬಳಿ ಕೇಳಿ ಪಡೆಯಿರಿ. ಯಾರು ಸಾಮಾನ್ಯ ಜ್ಞಾನದ ಕೊರತೆ ಹೊಂದಿರುವವರು ಎಂದು ಕೇಳಿದ್ದಾರೆ.
ಇದಕ್ಕೆ ಸಾನಿಯಾ ಮಹತ್ವದ ವಿಷಯಗಳು ಈ ಲೇಖನದಲ್ಲಿ ಅಡಕವಾಗಿವೆ ನೋಡಿ ಎಂದು ಲಿಂಕ್ ಒಂದನ್ನು ಸೇರಿಸಿದ್ದರು. ಈ ಲೇಖನ ಕೂಡ ನೀವು ವಿಶ್ವದ ನಂ.1 ಡಬಲ್ಸ್ ಆಟಗಾರ್ತಿ ಎಂದು ಹೇಳುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.