ಪಾರದರ್ಶಕ ಆಯ್ಕೆಯಿಂದಾಗಿ ಕ್ರೀಡಾ ಯಶಸ್ಸಿಗೆ ಕಾರಣ: ಪ್ರಧಾನಿ ನರೇಂದ್ರ ಮೋದಿ

By Naveen Kodase  |  First Published Aug 16, 2022, 10:33 AM IST

ಭಾರತದ ಕ್ರೀಡಾಕ್ಷೇತ್ರದ ಯಶಸ್ಸು ಬಿಚ್ಚಿಟ್ಟ ಪ್ರಧಾನಿ ನರೇಂದ್ರ ಮೋದಿ
ಸ್ವಜನಪಕ್ಷಪಾತ ಕೇವಲ ರಾಜಕೀಯದಲ್ಲಿ ಮಾತ್ರವಲ್ಲ ಕ್ರೀಡೆಯಲ್ಲೂ ಇತ್ತು
ಈಗ ಪಾರದರ್ಶಕವಾಗಿ ಅರ್ಹರಿಗೆ ಅವಕಾಶ ಸಿಗುತ್ತಿದೆ


ನವದೆಹಲಿ(ಆ.16): ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗೆ ಹೆಚ್ಚಿನ ಮಹತ್ವ ನೀಡುತ್ತಿರುವುದೇ ಜಾಗತಿಕ ಮಟ್ಟದ ಕ್ರೀಡಾಕೂಟಗಳಲ್ಲಿ ಭಾರತ ಯಶಸ್ಸು ಸಾಧಿಸಲು ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸ್ವಜನಪಕ್ಷಪಾತ ಕೇವಲ ರಾಜಕೀಯದಲ್ಲಿ ಮಾತ್ರವಲ್ಲ ಕ್ರೀಡೆಯಲ್ಲೂ ಇತ್ತು. ಇದರಿಂದಾಗಿ ನಮ್ಮಲ್ಲಿರುವ ಪ್ರತಿಭೆ ವ್ಯರ್ಥವಾಗುತ್ತಿತ್ತು. ಆದರೆ ಈಗ ಪಾರದರ್ಶಕವಾಗಿ ಅರ್ಹರಿಗೆ ಅವಕಾಶ ಸಿಗುತ್ತಿದ್ದು, ಉತ್ತಮ ಫಲಿತಾಂಶ ದೊರೆಯುತ್ತಿದೆ’ ಎಂದು ಮೋದಿ ಸ್ವಾತಂತ್ರ್ಯೋತ್ಸವದ ಭಾಷಣದ ವೇಳೆ ಹೇಳಿದರು.

ಇತ್ತೀಚೆಗಷ್ಟೇ ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಔತಣ ಕೂಟದಲ್ಲಿ ಕಾಮನ್‌ವೆಲ್ತ್‌ ಸಾಧಕರ ಜೊತೆ ಸಮಾಲೋಚನೆ ನಡೆಸಿದ ಅವರು, ಅಥ್ಲೀಟ್‌ಗಳ ಸಾಧನೆಯನ್ನು ಮುಕ್ತ ಕಂಠದಿಂದ ಕೊಂಡಾಡಿದ್ದಲ್ಲದೇ ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡುವಂತೆ ಹುರಿದುಂಬಿಸಿದರು. ‘ಅಥ್ಲೀಟ್‌ಗಳ ಸಾಧನೆಯನ್ನು ಕೇವಲ ಪದಕಗಳ ಸಂಖ್ಯೆಯಿಂದ ಅಳೆಯಲಾಗದು. ಪದಕ 1 ಸೆಕೆಂಡ್‌ ಅಥವಾ 1 ಸೆಂಟಿ ಮೀಟರ್‌ನಿಂದ ತಪ್ಪಿರಬಹುದು. ಆದರೆ ನೀವು ಕೊನೆವರೆಗೂ ಹೋರಾಟ ಪ್ರದರ್ಶಿಸಿದ್ದೀರಿ. ಇದು ಬರೀ ಆರಂಭ ಮಾತ್ರ. ಇದು ಇಲ್ಲಿಗೇ ಕೊನೆಯಾಗಬಾರದು. ಭಾರತವನ್ನು ವಿಶ್ವದಲ್ಲೇ ಶ್ರೇಷ್ಠ ಕ್ರೀಡಾ ವ್ಯವಸ್ಥೆಯಾಗಿ ರೂಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ’ ಎಂದು ಹೇಳಿದ್ದರು.

Tap to resize

Latest Videos

22ನೇ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ 22 ಚಿನ್ನ, 16 ಬೆಳ್ಳಿ, 23 ಕಂಚು ಸೇರಿ ಒಟ್ಟು 61 ಪದಕಗಳೊಂದಿಗೆ ಪಟ್ಟಿಯಲ್ಲಿ 4ನೇ ಸ್ಥಾನಿಯಾಯಿತು. ಶೂಟಿಂಗ್‌, ಆರ್ಚರಿ ಇಲ್ಲದಿದ್ದರೂ ಭಾರತ ಉಳಿದ ಕ್ರೀಡೆಗಳಲ್ಲಿ ಪದಕ ಬೇಟೆಯಾಡಿತು. ಮುಂಬರುವ ಏಷ್ಯನ್‌ ಗೇಮ್ಸ್‌, ಒಲಿಂಪಿಕ್ಸ್‌ ದೃಷ್ಟಿಯಿಂದ ನೋಡಿದಾಗ ಬರ್ಮಿಂಗ್‌ಹ್ಯಾಮ್‌ ಗೇಮ್ಸ್‌ ಭಾರತದ ಭರವಸೆ ಹೆಚ್ಚಿಸಿದೆ.

2 ವರ್ಷಗಳ ಬಳಿಕ ಅಜ್ಲಾನ್‌ ಶಾ ಹಾಕಿ ಟೂರ್ನಿ

ನವದೆಹಲಿ: ಕೋವಿಡ್‌ನಿಂದಾಗಿ ಕಳೆದ 2 ವರ್ಷ ರದ್ದುಗೊಂಡಿದ್ದ ಅಜ್ಲಾನ್‌ ಶಾ ಹಾಕಿ ಟೂರ್ನಿ ಈ ವರ್ಷ ನವೆಂಬರ್‌ನಲ್ಲಿ ನಡೆಯಲಿದೆ. ಮಲೇಷ್ಯಾದಲ್ಲಿ ನಡೆಯಲಿರುವ ಪುರುಷರ ಅಂತಾರಾಷ್ಟ್ರೀಯ ಆಹ್ವಾನಿತ ಟೂರ್ನಿಯು 2019ರಲ್ಲಿ ಕೊನೆ ಬಾರಿಗೆ ನಡೆದಿತ್ತು. 

ಸಚಿನ್, ರೋಹಿತ್ ಶರ್ಮಾ ಸೇರಿ ಟೀಂ ಇಂಡಿಯಾ ಕ್ರಿಕೆಟಿಗರ ಸ್ವಾತಂತ್ರ್ಯ ದಿನಾಚರಣೆ ಹೇಗಿತ್ತು?

ನ.16ರಿಂದ 25ರ ವರೆಗೂ ಇಫೋನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾರತ, ಆಸ್ಪ್ರೇಲಿಯಾ, ಜರ್ಮನಿ, ಇಂಗ್ಲೆಂಡ್‌ ಸೇರಿದಂತೆ ಒಟ್ಟು 6 ತಂಡಗಳು ತಮ್ಮ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿವೆ. 1983ರಿಂದ ಈ ಟೂರ್ನಿ ನಡೆಯುತ್ತಿದ್ದು ಆಸ್ಪ್ರೇಲಿಯಾ 10 ಬಾರಿ, ಭಾರತ 5 ಬಾರಿ ಚಾಂಪಿಯನ್‌ ಆಗಿದೆ.

ಬ್ಯಾಡ್ಮಿಂಟನ್‌: ಮಲ್ನಾಡ್‌ ತಂಡಕ್ಕೆ ಮೊದಲ ಗೆಲುವು

ಬೆಂಗಳೂರು: ಚೊಚ್ಚಲ ಆವೃತ್ತಿಯ ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್‌ ಲೀಗ್‌(ಜಿಬಿಪಿಎಲ್‌)ನಲ್ಲಿ ಮಲ್ನಾಡ್‌ ಫಾಲ್ಕನ್ಸ್‌ ಮೊದಲ ಗೆಲುವು ದಾಖಲಿಸಿದೆ. ಸೋಮವಾರ ನಡೆದ ಬೆಂಗಳೂರು ಲಯನ್ಸ್‌ ವಿರುದ್ಧದ ಪಂದ್ಯದಲ್ಲಿ 6-1 ಅಂತರದಲ್ಲಿ ಗೆಲುವು ದಾಖಲಿಸಿದೆ. ದಿನದ ಮೊದಲ ಪಂದ್ಯದಲ್ಲಿ ಮೈಸೂರು ಪ್ಯಾಂಥ​ರ್‍ಸ್ ತಂಡ ಕೆಜಿಎಫ್‌ ವೂಲ್‌್ಫ$್ಸ ವಿರುದ್ಧ 5-4ರ ರೋಚಕ ಗೆಲುವು ದಾಖಲಿಸಿತು.

click me!