ಬೆಂಗಳೂರಲ್ಲಿ ಇಂದಿನಿಂದ ದಿಗ್ಗಜ ವಾಲಿಬಾಲ್‌ ಆಟಗಾರರ ಶೋ!

By Kannadaprabha News  |  First Published Dec 6, 2023, 10:19 AM IST

ಒಲಿಂಪಿಕ್‌ ಪದಕ ವಿಜೇತರಾದ ಬ್ರೆಜಿಲ್‌ನ ವಾಲೇಸ್‌ ಡಿ ಸೋಜಾ, ರಷ್ಯಾದ ದಿಮಿಟ್ರಿ ಮುಸೆರ್‌ಸ್ಕೈ, ಫ್ರಾನ್ಸ್‌ನ ಎರ್ವಿನ್‌ ಎನ್‌ಗಾಪೆಥ್‌, ಹಾಲಿ ವಿಶ್ವ ಚಾಂಪಿಯನ್‌ (2022) ಇಟಲಿ ತಂಡದ ತಾರಾ ಆಟಗಾರ ಸಿಮೊನ್‌ ಜಿಯಾನೆಲಿ, ವಾಲಿಬಾಲ್‌ ಇತಿಹಾಸದಲ್ಲೇ ಅತಿವೇಗದ ಸರ್ವ್‌ (ಗಂಟೆಗೆ 138 ಕಿ.ಮೀ.) ವಿಶ್ವ ದಾಖಲೆ ಹೊಂದಿರುವ ಪೋಲೆಂಡ್‌ನ ವಿಲ್ಫ್ರೆಡೋ ಲಿಯೊನ್‌ ಟೂರ್ನಿಯಲ್ಲಿ ಆಡಲಿದ್ದಾರೆ.


ಬೆಂಗಳೂರು(ಡಿ.06): ಭಾರತದಲ್ಲಿ ವಾಲಿಬಾಲ್‌ ಕ್ರೀಡೆ ದೊಡ್ಡ ಮಟ್ಟದಲ್ಲಿ ಬೆಳೆದಿಲ್ಲವಾದರೂ, ಜನಪ್ರಿಯತೆಗೆ ಕೊರತೆ ಇಲ್ಲ. ಕರ್ನಾಟಕದ ವಾಲಿಬಾಲ್‌ ಅಭಿಮಾನಿಗಳಿಗೆ ಅಪರೂಪದ ಅವಕಾಶವೊಂದು ಒದಗಿ ಬಂದಿದ್ದು, ವಿಶ್ವ ಶ್ರೇಷ್ಠ ಆಟಗಾರರ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ವಿಶ್ವ ಕ್ಲಬ್‌ ವಾಲಿಬಾಲ್‌ ಚಾಂಪಿಯನ್‌ಶಿಪ್‌ಗೆ ಬುಧವಾರ ಬೆಂಗಳೂರಲ್ಲಿ ಚಾಲನೆ ದೊರೆಯಲಿದ್ದು, ಡಿ.10ರ ವರೆಗೂ ನಗರದ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.

ಟೂರ್ನಿಯಲ್ಲಿ ಆಡುವ ತಂಡಗಳಿವು

Latest Videos

undefined

* ಹಾಲಿ ಚಾಂಪಿಯನ್‌ ಇಟಲಿಯ ಸರ್‌ ಸೇಫ್ಟಿ ಸುಸಾ ಪೆರುಗಿಯಾ

* 4 ಬಾರಿ ಚಾಂಪಿಯನ್‌ ಬ್ರೆಜಿಲ್‌ನ ಸಡಾ ಕ್ರುಜೈರೊ ವೊಲೆ,

* ಬ್ರೆಜಿಲ್‌ನ ಇಟ್ಟಂಬೆ ಮಿನಾಸ್‌,

* ಜಪಾನ್‌ನ ಸುಂಟೋರಿ ಸನ್‌ಬರ್ಡ್ಸ್‌,

* ಟರ್ಕಿಯ ಹಾಲ್ಕ್‌ಬ್ಯಾಂಕ್‌ ಸ್ಪೋರ್‌ ಕುಲುಬೆ

* ಭಾರತದ ಅಹಮದಬಾದ್‌ ಡಿಫೆಂಡರ್ಸ್‌

ಡಿಸೆಂಬರ್ 06ರಿಂದ ಬೆಂಗ್ಳೂರಲ್ಲಿ ಕ್ಲಬ್‌ ವಾಲಿಬಾಲ್‌ ವಿಶ್ವಕಪ್‌

ದಿಗ್ಗಜರು, ದಾಖಲೆ ವೀರರು ಕಣಕ್ಕೆ!

ಒಲಿಂಪಿಕ್‌ ಪದಕ ವಿಜೇತರಾದ ಬ್ರೆಜಿಲ್‌ನ ವಾಲೇಸ್‌ ಡಿ ಸೋಜಾ, ರಷ್ಯಾದ ದಿಮಿಟ್ರಿ ಮುಸೆರ್‌ಸ್ಕೈ, ಫ್ರಾನ್ಸ್‌ನ ಎರ್ವಿನ್‌ ಎನ್‌ಗಾಪೆಥ್‌, ಹಾಲಿ ವಿಶ್ವ ಚಾಂಪಿಯನ್‌ (2022) ಇಟಲಿ ತಂಡದ ತಾರಾ ಆಟಗಾರ ಸಿಮೊನ್‌ ಜಿಯಾನೆಲಿ, ವಾಲಿಬಾಲ್‌ ಇತಿಹಾಸದಲ್ಲೇ ಅತಿವೇಗದ ಸರ್ವ್‌ (ಗಂಟೆಗೆ 138 ಕಿ.ಮೀ.) ವಿಶ್ವ ದಾಖಲೆ ಹೊಂದಿರುವ ಪೋಲೆಂಡ್‌ನ ವಿಲ್ಫ್ರೆಡೋ ಲಿಯೊನ್‌ ಟೂರ್ನಿಯಲ್ಲಿ ಆಡಲಿದ್ದಾರೆ.

ನಾಳೆಯಿಂದ ಬೆಂಗ್ಳೂರಲ್ಲಿ ಪರಿಕ್ರಮ ಫುಟ್ಬಾಲ್‌ ಲೀಗ್‌

ಬೆಂಗಳೂರು: ಸಮಾಜದ ಎಲ್ಲಾ ವರ್ಗದ ಮಕ್ಕಳಿಗೂ ಫುಟ್ಬಾಲ್‌ನಲ್ಲಿ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪರಿಕ್ರಮ ಹ್ಯೂಮಾನಿಟಿ ಫೌಂಡೇಶನ್‌ ಆಯೋಜಿಸುತ್ತಿರುವ ಫುಟ್ಬಾಲ್‌ ಟೂರ್ನಿಯ 10ನೇ ಆವೃತ್ತಿ ನಗರದಲ್ಲಿ ಡಿ.7ರಿಂದ 9ರ ವರೆಗೆ ನಡೆಯಲಿದೆ.

ಸಮಾನತೆ ಹಾಗೂ ಶಾಂತಿಗಾಗಿ ಫುಟ್ಬಾಲ್‌ ಎಂಬ ಧ್ಯೇಯ ವಾಕ್ಯದೊಂದಿಗೆ ಅಂಡರ್‌-16 ವಿಭಾಗದ ಶಾಲಾ ಮಕ್ಕಳಿಗಾಗಿ ಟೂರ್ನಿ ನಡೆಯಲಿದ್ದು, ಕರ್ನಾಟಕ, ರಾಜಸ್ಥಾನ, ಮಣಿಪುರ ಸೇರಿದಂತೆ ದೇಶದ ವಿವಿಧೆ ರಾಜ್ಯಗಳ 16 ತಂಡಗಳು ಪಾಲ್ಗೊಳ್ಳಲಿವೆ. ನಗರದ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ(ಕೆಎಸ್‌ಎಫ್ಎ) ಕ್ರೀಡಾಂಗಣ ಟೂರ್ನಿಗೆ ಆತಿಥ್ಯ ವಹಿಸಲಿದೆ.

2027ರ ಏಕದಿನ ವಿಶ್ವಕಪ್ ಟೂರ್ನಿ ವೇಳೆಗೆ ಟೀಂ ಇಂಡಿಯಾದ ಈ ಆಟಗಾರರಿಗೆ ಎಷ್ಟು ವಯಸ್ಸಾಗಿರಲಿದೆ?

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಟೂರ್ನಿಯ ಬಗ್ಗೆ ಪರಿಕ್ರಮ ಹ್ಯೂಮಾನಿಟಿ ಫೌಂಡೇಶನ್‌ ಪದಾಧಿಕಾರಿಗಳು ಮಾಹಿತಿ ಪ್ರಕಟಿಸಿದರು. ಸಂಸ್ಥೆಯ ಸಂಸ್ಥಾಪಕಿ ಶ್ರೀಮತಿ ಶುಕ್ಲಾ ಬೋಸ್‌, ಕೆಎಸ್‌ಎಫ್ಎ ಕಾರ್ಯದರ್ಶಿ ಎಂ.ಕುಮಾರ್‌, ಉಪ ಕಾರ್ಯದರ್ಶಿ ಅಸ್ಲಂ ಖಾನ್ ಉಪಸ್ಥಿತರಿದ್ದರು.

ಕಿರಿಯರ ವಿಶ್ವ ಬಾಕ್ಸಿಂಗ್‌: 17 ಪದಕ ಗೆದ್ದ ಭಾರತ

ಯೆರೆವನ್‌(ಅರ್ಮಾನಿಯಾ): ಕಿರಿಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ 17 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಭಾರತೀಯರು ಕೂಟದಲ್ಲಿ 3 ಚಿನ್ನ ಸಂಪಾದಿಸಿದರು. ಬಾಲಕಿಯರ 48 ಕೆ.ಜಿ. ವಿಭಾಗದಲ್ಲಿ ಪಾಯಲ್‌, 52 ಕೆ.ಜಿ. ವಿಭಾಗದಲ್ಲಿ ನಿಶಾ ಹಾಗೂ 70 ಕೆ.ಜಿಯಲ್ಲಿ ಆಕಾಂಕ್ಷಾ ಬಂಗಾರದ ಸಾಧನೆ ಮಾಡಿದರು. 

ಬಾಲಕಿಯರ ವಿಭಾಗದಲ್ಲಿ ಅಮಿಶಾ(54 ಕೆ.ಜಿ.), ವಿನಿ(57), ಶೃತಿ(63), ಮೇಘಾ(80), ಪ್ರಾಚಿ(80+), ಬಾಲಕರ ವಿಭಾಗದಲ್ಲಿ ಜತಿನ್‌(54), ಸಾಹಿಲ್‌(75), ಹಾರ್ದಿಕ್‌(80), ಹೇಮಂತ್‌(80+) ಬೆಳ್ಳಿ ಗೆದ್ದರು. ಬಾಲಕಿಯರ ವಿಭಾಗದಲ್ಲಿ ನೇಹಾ(46), ಪರಿ(50, ನಿಧಿ(66), ಕೃತಿಕಾ(75), ಬಾಲಕರ ವಿಭಾಗದಲ್ಲಿ ಸಿಕಂದರ್‌(48) ಕಂಚಿನ ಪದಕ ತಮ್ಮದಾಗಿಸಿಕೊಂಡರು.

click me!