
ನವದೆಹಲಿ(ಅ.22): ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್‌ಜಜೀರಾ ಟೀವಿ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗಗೊಳಿಸಿದೆ. ‘ಕ್ರಿಕೆಟ್ ಮ್ಯಾಚ್ ಫಿಕ್ಸರ್ಸ್ ದಿ ಮುನಾವರ್ ಫೈಲ್ಸ್’ ಎಂಬ ಹೆಸರಿನ ರಹಸ್ಯಕಾರ್ಯಾಚರಣೆ ವಿಡಿಯೋವನ್ನು ವಾಹಿನಿಯು ಭಾನುವಾರ ಬಿತ್ತರಿಸಿದೆ.
ಈ ವಿಡಿಯೋದಲ್ಲಿ ಸ್ಪಾಟ್ ಫಿಕ್ಸರ್ ಅನಿಲ್ ಮುನಾವರ್ ಎಂಬಾತ, 2011-12ರ ಅವಧಿಯ 6 ಟೆಸ್ಟ್, 6 ಏಕದಿನ ಮತ್ತು 3 ವಿಶ್ವಕಪ್ ಟಿ20 ಪಂದ್ಯಗಳಲ್ಲಿ ಒಟ್ಟು 25 ಸ್ಪಾಟ್ ಫಿಕ್ಸಿಂಗ್ ಪ್ರಕರಣ ಗಳಿಗೆ ಕಾರಣವಾಗಿದ್ದಾನೆ ಎಂದಿದೆ.
ಸ್ಪಾಟ್ ಫಿಕ್ಸಿಂಗ್‌ನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ ಆಟಗಾರರು ಪ್ರಮುಖವಾಗಿ ಪಾಲ್ಗೊಂಡಿದ್ದಾರೆ ಎಂದು ಹೇಳಲಾಗಿದೆ. ಇದೆ ವೇಳೆ ಐಸಿಸಿ, ಈ ವಿಡಿಯೋಗಳನ್ನು ನೀಡಬೇಕು ಎಂದು ಅಲ್‌ಜಜೀರಾಗೆ ಕೇಳಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.