ಡೆನ್ಮಾರ್ಕ್ ಓಪನ್: ಸೈನಾ ನೆಹ್ವಾಲ್‌ಗೆ ರನ್ನರ್ ಅಪ್ ಪ್ರಶಸ್ತಿ!

Published : Oct 22, 2018, 10:09 AM IST
ಡೆನ್ಮಾರ್ಕ್ ಓಪನ್: ಸೈನಾ ನೆಹ್ವಾಲ್‌ಗೆ ರನ್ನರ್ ಅಪ್ ಪ್ರಶಸ್ತಿ!

ಸಾರಾಂಶ

ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅತ್ಯುತ್ತಮ ಹೋರಾಟ ನೀಡಿದ ಭಾರತದ ತಾರೆ ಸೈನಾ ನೆಹ್ವಾಲ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಸೈನಾ ಪ್ರದರ್ಶನ ಹೇಗಿತ್ತು? ಇಲ್ಲಿದೆ.  

ಒಡೆನ್ಸ್ (ಅ.22): ಇಲ್ಲಿ ಭಾನುವಾರ ಮುಕ್ತಾಯವಾದ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್ ನಲ್ಲಿ ಭಾರತದ ಸೈನಾ ನೆಹ್ವಾಲ್ ಸೋಲುಂಡು ನಿರಾಸೆ ಅನುಭವಿಸಿದ್ದಾರೆ. ವಿಶ್ವ ನಂ.1 ಶಟ್ಲರ್ ಚೈನೀಸ್ ತೈಪೆಯ ತೈ ತ್ಸು ಯಿಂಗ್ ವಿರುದ್ಧ, ಸೈನಾ ಪರಾಭವ ಹೊಂದಿದರು. ಈ ಮೂಲಕ ಸೈನಾ ರನ್ನರ್ ಅಪ್‌ಗೆ ತೃಪ್ತಿ ಪಟ್ಟರು.

ಒಲಿಂಪಿಕ್ ಕಂಚು ವಿಜೇತೆ ಸೈನಾ, ತೈ ತ್ಸು ಯಿಂಗ್ ವಿರುದ್ಧ 13-21, 21-13, 6-21 ಗೇಮ್‌ಗಳಲ್ಲಿ ಸೋಲು ಕಂಡರು. ಪ್ರಬಲ ಪೈಪೋಟಿ ಎದುರಾದ ಪಂದ್ಯದಲ್ಲಿ 52 ನಿಮಿಷಗಳ ಆಟದಲ್ಲಿ ತೈ ತ್ಸು ಯಿಂಗ್‌ಗೆ ಸೈನಾ ಶರಣಾದರು. ಈ ಜಯದೊಂದಿಗೆ ಸೈನಾ ಅವರೊಂದಿಗಿನ ಮುಖಾಮುಖಿಯನ್ನು ತೈ ತ್ಸು ಯಿಂಗ್ 13-5ಕ್ಕೆ ಏರಿಸಿಕೊಂಡರು. 

ಈ ವರ್ಷದಲ್ಲಿ ತೈ ತ್ಸು ಯಿಂಗ್ ಎದುರು ಸೈನಾಗೆ ಇದು 5ನೇ ನೇರ ಸೋಲಾಗಿದೆ. 2016ರ ಬಳಿಕ ಚೈನೀಸ್ ತೈಪೆ ಆಟಗಾರ್ತಿ ಡೆನ್ಮಾರ್ಕ್ ಓಪನ್ ಪ್ರಶಸ್ತಿಗೆದ್ದರು. ಮೊದಲ ಗೇಮ್‌ನ ಆರಂಭದಲ್ಲಿ ತೈ ತ್ಸುಯಿಂಗ್ 6-1 ರಿಂದ ಮುನ್ನಡೆ ಸಾಧಿಸಿದರು. 

ಬಳಿಕ ಇದೇ ಅಂತರ ಕಾಯ್ದು ಕೊಂಡ ಚೈನೀಸ್ ಶಟ್ಲರ್ ಸೈನಾರನ್ನು ಹಿಂದಿಕ್ಕಿದರು. 2ನೇ ಗೇಮ್‌ನಲ್ಲಿ ಸೈನಾ, ತೈ ತ್ಸು ಯಿಂಗ್‌ನ ಎಲ್ಲ ತಂತ್ರಗಳನ್ನು ಮೀರಿ ಮುನ್ನಡೆ ಪಡೆದರು. ನಿರ್ಣಾಯಕ 3ನೇ ಗೇಮ್‌ನಲ್ಲಿ ತೈ ತ್ಸು ನಿರಂತರ ಅಂಕಗಳಿಸಿ ಸೈನಾರನ್ನು ಹಿಮ್ಮೆಟ್ಟಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ಕೆಕೆಆರ್​ ತಂಡದಿಂದ ಶಾರುಖ್​- ಜೂಹಿ ಗಳಿಸೋದೆಷ್ಟು? ಈ ಜೋಡಿಗೆ ಐಪಿಎಲ್​ ಚಿನ್ನದ ಮೊಟ್ಟೆ ಆಗಿದ್ಹೇಗೆ?
ವೆಂಕಟೇಶ್ ಅಯ್ಯರ್‌ಗೆ ನಂ.3 ಸ್ಲಾಟ್ ಫಿಕ್ಸ್; ಮುಂಬರುವ ಐಪಿಎಲ್‌ಗೆ ಆರ್‌ಸಿಬಿ ಬಲಿಷ್ಠ ಆಡುವ ಹನ್ನೊಂದರ ಬಳಗ ಹೀಗಿರಲಿದೆ!