ಗಂಭೀರ್ ನಂತರ ಅಫ್ರಿದಿಯ ಕಾಶ್ಮೀರ ಹೇಳಿಕೆಗೆ ವಿರಾಟ್, ಕಪಿಲ್, ರೈನಾ ಖಡಕ್ ಉತ್ತರ

By Suvarna Web DeskFirst Published Apr 4, 2018, 8:11 PM IST
Highlights

ಕಪಿಲ್ ದೇವ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ' ಯಾರೀತ, ಆತನಿಗೆ ಏಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಈ ತರದ ವ್ಯಕ್ತಿಗಳ ಬಗ್ಗೆ ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ'ಎಂದು ಅಫ್ರಿದಿ ಮಾತನ್ನು ತಳ್ಳಿ ಹಾಕಿದ್ದಾರೆ.

ನವದೆಹಲಿ(ಏ.04): ಪಾಕ್ ಕ್ರಿಕೆಟಿಗ ಶಾಹೀದ್ ಅಫ್ರಿದಿ ಕಾಶ್ಮೀರ ವಿವಾದ ಹೇಳಿಕೆಗೆ ಗೌತಮ್ ಗಂಭೀರ್ ನಂತರ ಈಗ ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ಪ್ರತ್ಯುತ್ತರ ನೀಡಿದ್ದಾರೆ.

ಭಾರತೀಯನಾಗಿ ನೀವು ದೇಶಕ್ಕೆ ಅತ್ಯುತ್ತಮ ಕೊಡುಗೆಯನ್ನೇ ನೀಡಬೇಕು. ನನ್ನ ಉದ್ದೇಶ ಯಾವಾಗಲು ನಮ್ಮ ದೇಶಕ್ಕೆ ಉತ್ತಮವಾದನ್ನು ನೀಡುವುದಾಗಿದೆ.ದೇಶದ ಹಿತಾಸಕ್ತಿಯ ಬಗ್ಗೆ ವಿರೋಧ ವ್ಯಕ್ತಪಡಿಸಿದರೆ ಖಂಡಿತವಾಗಿಯು ವಿರೋಧ ವ್ಯಕ್ತಪಡಿಸುತ್ತೇನೆ'. ನೀವು ನಿಮ್ಮ ದೇಶದ ಬಗ್ಗೆ ಮಾತ್ರ ಮಾತನಾಡಿ ಬೇರೆ ಅನಗತ್ಯವಾಗಿ ಬೇರೆಯವರ ಬಗ್ಗೆ ಪ್ರತಿಕ್ರಿಯೆ ನೀಡಬೇಡಿ' ಎಂದು ವಿರಾಟ್ ಕೊಹ್ಲಿ ಅಫ್ರಿದಿ ಹೇಳಿಕೆಗೆ ಕೋಟ್ ಮಾಡಿ ವಿರೋಧ ವ್ಯಕ್ತಪಡಿಸಿದ್ದಾರೆ.

ಕಪಿಲ್ ದೇವ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ ' ಯಾರೀತ, ಆತನಿಗೆ ಏಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಈ ತರದ ವ್ಯಕ್ತಿಗಳ ಬಗ್ಗೆ ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ'ಎಂದು ಅಫ್ರಿದಿ ಮಾತನ್ನು ತಳ್ಳಿ ಹಾಕಿದ್ದಾರೆ.

'ಕಾಶ್ಮೀರ ಭಾರತದ ಅವಿಭಾಜ್ಯ ಅಂಗ  

ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಶಾಶ್ವತವಾಗಿ ಅಲ್ಲಿಯೇ ಉಳಿದುಕೊಳ್ಳುತ್ತದೆ. ಅದು ನಮ್ಮ ಧಾರ್ಮಿಕ ಭೂಮಿ. ನಮ್ಮ ಊರ್ವಜರು ಜನಿಸಿದ ನಾಡು. ಅಫ್ರಿದಿಯವರು ಪಾಕಿಸ್ತಾನ ಸೇನೆಯನ್ನು ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ ನಕಲಿ ಯುದ್ಧವನ್ನು ಆಗ್ರಹಿಸಬೇಕು. ನಮಗೆ ಶಾಂತಿ ಬೇಕು. ರಕ್ತಪಾತ ಹಿಂಸೆಯಲ್ಲ ಎಂದು' ಟ್ವಿಟ್ ಮಾಡಿದ್ದಾರೆ.

ನಿನ್ನೆ ಗಂಭೀರ್ ಟ್ವೀಟ್ ಮಾಡಿ, ಅಫ್ರಿದಿಯವರು ನಮ್ಮ ಕಾಶ್ಮೀರದ ಬಗ್ಗೆ ವಿಶ್ವಸಂಸ್ಥೆಯಲ್ಲಿ ಯುಎನ್ ಪ್ರಸ್ತಾಪಿಸಿದ್ದಾರೆ. ಇಲ್ಲಿ ಹೇಳಲು ಏನಿದೆ. ಅಫ್ರಿದಿಯವರ ಪ್ರಕಾರ ಯುನ್ ಎಂದರೆ ಅಂಡರ್ ನೈಂಟೀನ್. ಯಾವಾಗಲು ನೋಬಾಲ್'ನಲ್ಲಿಯೇ ವಿಕೇಟ್ ಪಡೆದು ಸಂಭ್ರಮಿಸುತ್ತಾರೆ' ಇದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ'ಎಂದು ಟ್ವೀಟ್ ಮಾಡಿದ್ದರು.

click me!