
ಪುಣೆ(ಜ.15): ಇಷ್ಟು ದಿನಗಳ ಕಾಲ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಇಂದಿನಿಂದ ಶುರುವಾಗಲಿದೆ. ಧೋನಿ ನಾಯಕತ್ವ ತ್ಯಜಿಸಿದ ಮೇಲೆ ಪ್ರಪ್ರಥಮ ಭಾರಿಗೆ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಚುಕ್ಕಾಣಿ ಹಿಡಿಯಲಿದ್ದಾರೆ. ಅವರ ಮೊದಲ ಅಗ್ನಿಪರಿಕ್ಷೆಗೆ ಪುಣೆ ಕ್ರಿಡಾಂಗಣ ವೇದಿಕೆಯಾಗಲಿದೆ.
2017ರ ಮೊದಲ ಸರಣಿಗೆ ಟೀಂ ಇಂಡಿಯಾ ಸರ್ವಸನ್ನಧವಾಗಿದೆ. ಇಂದಿನಿಂದ ನಡೆಯಲ್ಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಕೊಹ್ಲಿಯ ನಅಯಕತ್ವದ ಮೊದಲ ಸರಣಿಗೆ ಪುಣೆ ಮೈದಾನ ವೇದಿಕೆಯಾಗಲಿದೆ.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವ ಟೀಂ ಇಂಡಿಯಾ ಏಕದಿನ ಸರಣಿಯನ್ನೂ ವಶಪಡಿಸಿಕೊಳ್ಳೋ ವಿಶ್ವಾಸದಲದಲಿದೆ. ಇದಕ್ಕಾಗಿ ಟೀಂ ಇಂಡಿಯಅ ಆಟಗಾರರು ಕಠಿಣ ಅಭ್ಯಾಸ ನಡೆಸಿದ್ದಾರೆ. ಟೀಂ ಇಂಡಿಯಾ ನಾಯಕತ್ವವನ್ನ ಕೊಹ್ಲಿ ಪಡೆದ ನಂತರ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿಯಾಗಿದೆ. ಗಾಯಾಳುಗಳಾಗಿ ಧೀರ್ಘಕಾಲ ತಂಡದಿಂದ ಹೋರಗುಳಿದಿದ್ದ ಶೀಖರ್ ಧವನ್, ಹಾರ್ದಿಕ್ ಪಾಂಡ್ಯಾ ಮತ್ತೆ ಟೀಂ ಇಂಡಿಯಾಗೆ ಎಂಟ್ರಿ ಪಡೆದಿದ್ದಾರೆ. ಇನ್ನೂ ಫಾರ್ಮ್ ಕಳೆದುಕೊಂಡು ತಂಡದಿಂದ ಹೊರಬಿದ್ದಿದ್ದ ಯುವಿ ಮೂರು ವರ್ಷಗಳ ನಂತರ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ.
ಇನ್ನೂ ಟೆಸ್ಟ್ ಸರಣಿ ಸೋಲಿನಿಂದ ಕಂಗೆಟ್ಟಿರುವ ಇಂಗ್ಲೆಂಡ್, ಏಕದಿನ ಸರಣಿ ಗೆದ್ದು ಸೇಡು ತೀರಿಸಿಕೊಳ್ಳೋ ವಿಶ್ವಾಸದಲ್ಲಿದೆ. ಇದಕ್ಕಾಗಿ ಮಾರ್ಗನ್ ಆಲ್ರೌಂಡರ್ಗಳ ದಂಡನ್ನೆ ಭಾರತಕ್ಕೆ ಕರೆತಂದಿದ್ದಾರೆ. ಜೇಕ್ ಬಾಲ್ ಹೋರತುಪಡಿಸಿದ್ರೆ ಇನ್ನುಳಿದ ಎಲ್ಲಾ ಆಟಗಾರರು ಬ್ಯಾಟ್ನಲ್ಲಿ ಕಮಾಲ್ ಮಾಡುವವರೆ.
ಒಟ್ಟಿನಲ್ಲಿ ಇಂದಿನ ಪಂದ್ಯಕ್ಕೆ ಎರಡೂ ತಂಡಗಳು ಸರ್ವಸನ್ನಧವಾಗಿವೆ. ಆದ್ರೆ ಪುಣೆಯ ಹಿಸ್ಟರಿ ಮಾತ್ರ ಭಾರತದ ವಿರುದ್ಧವಾಗಿದೆ. ಆಡಿರುವ ಒಂದು ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿದೆ. ಆದ್ರೆ ಸಂಕ್ರಾಂತಿಯ ಹಬ್ಬದ ಖುಷಿಯಲ್ಲಿರುವ ಕ್ರಿಕೆಟ್ ಅಭಿಮಾನಿಗಳಿಗೆ ಕೊಹ್ಲಿ ಬಾಯ್ಸ್ ಹೋಳಿಗೆ ಊಟ ಉಣಬಣಿಸುತ್ತಾರಾ ಕಾದು ನೋಡಬೇಕು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.