ಇಂಡೋ-ಆಫ್ಘಾನ್ ಟೆಸ್ಟ್: ಕೇವಲ 50 ರುಪಾಯಿಗೆ ಸಿಗುತ್ತೆ ಟಿಕೆಟ್..!

Published : Jun 05, 2018, 08:38 PM IST
ಇಂಡೋ-ಆಫ್ಘಾನ್ ಟೆಸ್ಟ್: ಕೇವಲ 50 ರುಪಾಯಿಗೆ ಸಿಗುತ್ತೆ ಟಿಕೆಟ್..!

ಸಾರಾಂಶ

ಕರ್ನಾಟಕ ರಣಜಿ ತಂಡದ ಫೇಸ್’ಬುಕ್ ಹಾಗೂ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಇಂದಿನಿಂದಲೇ ಟಿಕೆಟ್ ಖರೀದಿಸಬಹುದಾಗಿದೆ. G-2, G-1 ಸ್ಟ್ಯಾಂಡ್’ಗಳ ಆಸನಕ್ಕೆ 50 ರುಪಾಯಿಗಳಾಗಿದ್ದರೆ, P2 ಸ್ಟ್ಯಾಂಡ್'ನ ಆಸನಗಳಿಗೆ ಗರಿಷ್ಠ 2 ಸಾವಿರ ರುಪಾಯಿ ನಿಗದಿಪಡಿಸಲಾಗಿದೆ.

ಬೆಂಗಳೂರು[ಜೂ.05]: ಇದೇ ತಿಂಗಳ 14ರಿಂದ ನಗರದ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಆರಂಭವಾಗಲಿರುವ ಭಾರತ-ಆಫ್ಘಾನಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಏಕೈಕ ಐತಿಹಾಸಿಕ ಟೆಸ್ಟ್ ಪಂದ್ಯದ ವೀಕ್ಷಿಸಲು ಆನ್’ಲೈನ್’ನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ವಿವಿಧ ವಿಭಾಗದ ಆಸನಗಳಿಗೆ 50 ರುಪಾಯಿಯಿಂದ 2000 ರುಪಾಯಿಗಳ ಟಿಕೆಟ್ ಲಭ್ಯವಿವೆ.

ಟಿಕೆಟ್’ಗಾಗಿ ಇಲ್ಲಿ ಕ್ಲಿಕ್ಕಿಸಿ:

ಈ ಕುರಿತಂತೆ ಕರ್ನಾಟಕ ರಣಜಿ ತಂಡದ ಫೇಸ್’ಬುಕ್ ಹಾಗೂ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಇಂದಿನಿಂದಲೇ ಟಿಕೆಟ್ ಖರೀದಿಸಬಹುದಾಗಿದೆ. G-2, G-1 ಸ್ಟ್ಯಾಂಡ್’ಗಳ ಆಸನಕ್ಕೆ 50 ರುಪಾಯಿಗಳಾಗಿದ್ದರೆ, P2 ಸ್ಟ್ಯಾಂಡ್'ನ ಆಸನಗಳಿಗೆ ಗರಿಷ್ಠ 2 ಸಾವಿರ ರುಪಾಯಿ ನಿಗದಿಪಡಿಸಲಾಗಿದೆ. ಇದಷ್ಟೇ ಅಲ್ಲದೇ M4 ಸ್ಟ್ಯಾಂಡ್’ಗೆ 100, D ಕಾರ್ಪೋರೇಟ್ ಸ್ಟ್ಯಾಂಡ್’ಗೆ 300, E ಎಕ್ಸಿಕ್ಯೂಟಿವ್ ಸ್ಟ್ಯಾಂಡ್’ಗೆ 400, ಹಾಗೆಯೇ ಪೆವಿಲಿಯನ್ ಟೆರಸ್’ಗೆ 1000 ರುಪಾಯಿ ನಿಗದಿ ಪಡಿಸಲಾಗಿದೆ.

ಕಳೆದ ವರ್ಷವಷ್ಟೇ ಐಸಿಸಿಯಿಂದ ಟೆಸ್ಟ್ ಮಾನ್ಯತೆ ಪಡೆದಿರುವ ಆಫ್ಘಾನಿಸ್ತಾನ ಚೊಚ್ಚಲ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸಲಿದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?
ಅಂತಾರಾಷ್ಟ್ರೀಯ ಟಿ20ಯಲ್ಲಿ ಆಲ್ರೌಂಡರ್ ಆಗಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ!