ಧೋನಿ ಟೀಂ ಇಂಡಿಯಾದ ಯಶಸ್ವಿ ಕ್ಯಾಪ್ಟನ್ ಅನ್ನೋದು ಯಾಕೆ..?

First Published Jul 7, 2018, 4:01 PM IST
Highlights

ಮಹೇಂದ್ರ ಸಿಂಗ್ ಧೋನಿ ಭಾರತ ತಂಡ ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ ಕೂಲ್ ಕ್ಯಾಪ್ಟನ್ ಹಾಗೆಯೇ ಸ್ಮಾರ್ಟ್ ವಿಕೆಟ್ ಕೀಪರ್. ಧೋನಿಗಿಂದು 37ನೇ ಹುಟ್ಟುಹಬ್ಬದ ಸಂಭ್ರಮ.

ಬೆಂಗಳೂರು[ಜು.07]: ಮಹೇಂದ್ರ ಸಿಂಗ್ ಧೋನಿ ಭಾರತ ತಂಡ ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ ಕೂಲ್ ಕ್ಯಾಪ್ಟನ್ ಹಾಗೆಯೇ ಸ್ಮಾರ್ಟ್ ವಿಕೆಟ್ ಕೀಪರ್. ಧೋನಿಗಿಂದು 37ನೇ ಹುಟ್ಟುಹಬ್ಬದ ಸಂಭ್ರಮ.

ಸೌರವ್ ಗಂಗೂಲಿ ಬಳಿಕ ಟೀಂ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ ಕೀರ್ತಿ ಧೋನಿಗೆ ಸಲ್ಲುತ್ತದೆ. ಟಿ20, ಏಕದಿನ ವಿಶ್ವಕಪ್ ಹಾಗೆಯೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟ ಏಕೈಕ ನಾಯಕ ಎಂಬ ಹಿರಿಮೆ ಧೋನಿ ಹೆಸರಿನಲ್ಲಿದೆ. ಧೋನಿ ಓರ್ವ ಯಶಸ್ವಿ ಕ್ಯಾಪ್ಟನ್ ಯಾಕೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ..

* ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

* ಧೋನಿ ಕ್ಯಾಪ್ಟನ್ಸಿಯಲ್ಲಿ 2009ರಲ್ಲಿ ಟೀಂ ಇಂಡಿಯಾ ಮೊಟ್ಟಮೊದಲ ಬಾರಿಗೆ ಐಸಿಸಿ ಟೆಸ್ಟ್ ರ‍್ಯಾಂಕಿಂಗ್’ನಲ್ಲಿ ಭಾರತ ನಂ.1 ಸ್ಥಾನಕ್ಕೇರಿ ಇತಿಹಾಸ ಬರೆದಿತ್ತು.

* 2011ರ ಏಕದಿನ ವಿಶ್ವಕಪ್’ನಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ತವರಿನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಿಸಿಕೊಟ್ಟ ಮೊದಲ ನಾಯಕನೆಂಬ ಹಿರಿಮೆಗೂ ಧೋನಿ ಪಾತ್ರರಾದರು.

* ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿಹೆಚ್ಚು ಸ್ಟಂಪಿಂಗ್ಸ್[161] ಮಾಡಿದ ವಿಕೆಟ್ ಕೀಪರ್ ಎಂಬ ದಾಖಲೆ ಧೋನಿ ಹೆಸರಿನಲ್ಲಿದೆ.

* ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಎರಡು ಬಾರಿ ಗೆದ್ದ ಏಕೈಕ ಆಟಗಾರನೆಂದರೆ ಅದು ಎಂ.ಎಸ್ ಧೋನಿ.

* 2007ರಲ್ಲಿ ಖೇಲ್ ರತ್ನ, 2009ರಲ್ಲಿ ಪದ್ಮಶ್ರೀ ಹಾಗೂ 2018ರಲ್ಲಿ ಪದ್ಮಭೂಷಣ ಪ್ರಶಸ್ತಿಗಳು ಧೋನಿಯನ್ನು ಅರಸಿ ಬಂದಿವೆ. 

click me!