ಮೊದಲ ದಿನದಾಟದಲ್ಲಿ ಹೈಡ್ರಾಮ: ಒಂದೇ ಬಾಲ್ನಲ್ಲಿ 2 ವಿಕೆಟ್..!

Published : Feb 24, 2017, 04:32 AM ISTUpdated : Apr 11, 2018, 12:48 PM IST
ಮೊದಲ ದಿನದಾಟದಲ್ಲಿ ಹೈಡ್ರಾಮ: ಒಂದೇ ಬಾಲ್ನಲ್ಲಿ 2 ವಿಕೆಟ್..!

ಸಾರಾಂಶ

ಆಸ್ಟ್ರೇಲಿಯಾ ತಂಡ ದಿಢೀರ್ ಕುಸಿಯಲು ಒಂದು ಘಟನೆ ಕಾರಣವಾಯಿತು. ಆ ಸನ್ನಿವೇಶದಲ್ಲಿ ಒಬ್ಬ ಆಟಗಾರನನ್ನು ನೋಡಿ ಎಲ್ಲರೂ ನಗುತ್ತಿದ್ದರು. ಮೈದಾನದಲ್ಲಿ ಆಸೀಸ್ ಆಟಗಾರನೊಬ್ಬ ಮುಜುಗರ ಪಟ್ಟಿದ್ದೇಕೆ. ಆತ ಮಾಡಿದ ತಪ್ಪಾದರೂ ಏನು. ಇದರಿಂದ ಭಾರತಕ್ಕಾದ ಲಾಭವಾದರೂ ಏನು? ಇಲ್ಲಿದೆ ವಿವರ

ಆಸ್ಟ್ರೇಲಿಯಾ ತಂಡ ದಿಢೀರ್ ಕುಸಿಯಲು ಒಂದು ಘಟನೆ ಕಾರಣವಾಯಿತು. ಆ ಸನ್ನಿವೇಶದಲ್ಲಿ ಒಬ್ಬ ಆಟಗಾರನನ್ನು ನೋಡಿ ಎಲ್ಲರೂ ನಗುತ್ತಿದ್ದರು. ಮೈದಾನದಲ್ಲಿ ಆಸೀಸ್ ಆಟಗಾರನೊಬ್ಬ ಮುಜುಗರ ಪಟ್ಟಿದ್ದೇಕೆ. ಆತ ಮಾಡಿದ ತಪ್ಪಾದರೂ ಏನು. ಇದರಿಂದ ಭಾರತಕ್ಕಾದ ಲಾಭವಾದರೂ ಏನು? ಇಲ್ಲಿದೆ ವಿವರ

ಭಾರತ-ಆಸ್ಟ್ರೇಲಿಯಾ ಮೊದಲ ಟೆಸ್ಟ್​​ನ ಮೊದಲ ದಿನದ ಹೈಲೇಟ್ಸ್ ಅಂದ್ರೆ ಒಂದೇ ಬಾಲ್​'ನಲ್ಲಿ ಎರಡು ವಿಕೆಟ್​​ ಉರುಳಿದ್ದು. ನಿನ್ನೆ ಮೊದಲ ಸೆಷನ್​​ನಲ್ಲಿ ಭಾರತೀಯ ಬೌಲರ್ಸ್ ವಿಕೆಟ್​​ ಪಡೆಯಲು ಪರದಾಡುತ್ತಿದ್ದರು. ಆದ್ರೆ 28ನೇ ಓವರ್​​ನಲ್ಲಿ ಉಮೇಶ್​​ ಯಾದವ್​​, ಡೇವಿಡ್ ವಾರ್ನರ್​​​ರನ್ನ ಔಟ್​​ ಮಾಡೋ  ಮೂಲ್ಕ ಪೆವಿಲಿಯನ್​​ ದಾರಿ ತೋರಿಸಿದ್ರು. ನಂತರ ಬ್ರೇಕ್​​ ಕೂಡ ಬಂತು. ಆದರೆ ಬ್ರೇಕ್​​ ಮುಗಿಯುತ್ತಿದಂತೆ ಅಲ್ಲಿ ಹೈಡ್ರಾಮವೇ ನಡೆದುಹೋಗಿತ್ತು. ಕ್ರಿಕೆಟ್​​ ಅಭಿಮಾನಿಗಳಿಗೆ ಶಾಕ್​​​​ ಆಗಿತ್ತು. ಕಾರಣ ವಾರ್ನರ್​​ ಜೊತೆ ಮತ್ತೊಬ್ಬ ಆರಂಭಿಕ ಮ್ಯಾಟ್ ರೆನ್​​ಶಾ ಕೂಡ ಪೆವಿಲಿಯನ್​​​​​ಗೆ ಹೋಗಿಬಿಟ್ಟಿದ್ದರು. 

ವಾರ್ನರ್​​ ಹಿಂದೆಯೇ ರೆನ್​ಶಾ ಪೆವಿಲಿಯನ್​ಗೆ ಹೋಗಿದ್ದೇಕೆ..?: ರೆನ್​​ಶಾ ನಡೆಗೆ ಗೆಳತಿ ಕಂಗಾಲು..!

ಮೊದಲ ಟೆಸ್ಟ್​ ಏನಾಗಬಹುದು ಅಂತ ಅಭಿಮಾನಿಗಳು ತಲೆ ಕೆಡಸಿಕೊಳ್ತಿರುವಾಗಲೇ ಅಲ್ಲಿ ಅಚಾತುರ್ಯವೊಂದು ನಡೆದು ಹೋಗಿತ್ತು. ವಾರ್ನರ್​​​ ಪೆವಿಲಿಯನ್​'ಗೆ ಹೋಗುತಿದಂತೆ ಅವರ ಹಿಂದೆ ರೆನ್​ಶಾ ಯಾಕೆ ಹೋದ್ರು ಅಂತ ಎಲ್ರು ದಂಗಾದ್ರು. ಅಷ್ಟೇ ಅಲ್ಲ ಗ್ಯಾಲರಿಯಲ್ಲಿ ಕೂತಿದ್ದ ರೆನ್​ಶಾ ಗೆಳತಿ ಕೂಡ ಏನಾಯ್ತು ಅಂತ ಕಂಗಾಲಾಗಿದ್ರು.

ಬಾತ್​​​ರೂಮ್​ಗೆ ಓಡಿ ಹೋದ ರೆನ್​ಶಾ

ಎಲ್ಲರು ಏನಾಯ್ತು ಅಂತ ತಲೆಕೆಡಸಿಕೊಳ್ತಿರುವಾಗ್ಲೆ ರೆನ್​ಶಾ ಬಗ್ಗೆ ಬಂದ ಒಂದು ಸುದ್ದಿ ಎಲ್ಲರನ್ನ ನಗುವಿನ ಕಡಲಲ್ಲಿ ತೇಲುವಂತೆ ಮಾಡ್ತು. ವಾರ್ನರ್​​ ಔಟಾಗುತ್ತಿದಂತೆ ರೆನ್​​ಶಾ ಅಲ್ಲಿವರೆಗೆ ತಡೆದು ಇಟ್ಟುಕೊಂಡಿದ್ದ ಅವರ ಅವಸರ ಕಟ್ಟೆ ಹೊಡೆದಿತ್ತು. ಅವರಿಗೆ ಬಾತ್​ರೂಮ್​​ಗೆ ಹೋಗಲೇಬೇಕಾದ ಅನಿವಾರ್ಯತೆ ಬಂದುಬಿಟ್ಟಿತ್ತು.

ಫೇಸ್​​​ಬುಕ್​​ ಟ್ವಿಟ್ಟರ್​​ನಲ್ಲೂ ರೆನ್​ಶಾ ಹವಾ..!

ರೆನ್​ಶಾಗೆ ಇನ್ನಿಂಗ್ಸ್​​ ಮಧ್ಯೆಯೇ ನೇಚರ್ಸ್​​​ ಕಾಲ್​​​​ ರಿಸೀವ್​​ ಮಾಡಬೇಕೆನಿಸಿಬಿಟ್ಟಿತ್ತು. ಹೀಗಾಗಿ ಅವರು ಅಂಪೈರ್​​​'ನ ಅಪ್ಪಣೆ ಪಡೆದು ಪೆವಿಲಿಯನ್​ಗೆ ಓಡಿ ಹೋದ್ರು. ಆದ್ರೆ ಈ ಘಟನೆಯಿಂದ ರೆನ್​ಶಾ, ಕಾಲು ಎಳೆಯುವವರಿಗೆ ಆಹಾರವಾದ್ರು. ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯನ್ನ ಆಧರಿಸಿ ರೆನ್​ಶಾರನ್ನ ಟೀಕಿಸಲು ಶುರುಮಾಡಿದ್ರು. ಅವರ ನೇಚರ್ಸ್​​​ ಕಾಲ್​​ಗಳಿಗೆ ಓಲಿಸಿ ಹಲವು ವಿಡಿಯೋಗಳನ್ನ ಅಪ್​ಲೋಡ್​​ ಮಾಡಿದ್ರು.

ಇಲಿಗೆ ಪ್ರಾಣ ಸಂಕಟವಾದ್ರೆ ಬೆಕ್ಕಿಗೆ ಚೆಲ್ಲಾಟ ಅನ್ನುವಂತಾಯ್ತು ರೆನ್​ಶಾ ಕಥೆ. ರೆನ್​ಶಾ ತನ್ನ ಭಾಧೆಯನ್ನ ಹೇಳುಕೊಳ್ಳೋದಕ್ಕಾಗದೆ ನೋವು ಅನುಭವಿಸಿದ್ರೆ ಕ್ರಿಕೆಟ್​ ಅಭಿಮಾನಿಗಳು ಅವರನ್ನ ಸಾಮಾಜಿಕ ಜಾಲತಾಣಗಳಲ್ಲಿ ಕಿಚಾಯಿಸಿದ್ರು.

ರೆನ್​ಶಾ ಹೋಗಿದ್ದೇ ಭಾರತಕ್ಕೆ ಟರ್ನಿಂಗ್ ಪಾಯಿಂಟ್: ಅಲ್ಲಿಂದ ಕುಸಿದು ಬಿದ್ದರು ಕಾಂಗರೂಗಳು

ರೆನ್​'ಶಾ ಬಾತ್​​​​​​​​​ ರೂಮ್ ಸ್ಟೋರಿ ಆಸ್ಟ್ರೇಲಿಯಾ ತಂಡ ಫಸ್ಟ್ ಇನ್ನಿಂಗ್ಸ್​ನಲ್ಲಿ ಕಮ್ಮಿ ಮೊತ್ತಕ್ಕೆ ಕುಸಿಯಲು ಕಾರಣವಾಯ್ತು. ಹೌದು, 82 ರನ್​ಗೆ ಒಂದು ವಿಕೆಟ್ ಕಳೆದುಕೊಳ್ಳದೆ ಉತ್ತಮ ಸ್ಥಿತಿಯಲ್ಲಿದ್ದ ಆಸೀಸ್​, ಅದೇ ಮೊತ್ತಕ್ಕೆ ಇಬ್ಬರು ಆಟಗಾರರು ಪೆವಿಲಿಯನ್ ಸೇರಿದ್ರು. ಆಗ ಇಬ್ಬರು ಹೊಸದಾಗಿ ಕ್ರೀಸಿಗೆ ಬಂದರು. ಅವರನ್ನು ಕ್ರೀಸಿಗೆ ಕಚ್ಚಿ ನಿಲ್ಲಲು ಭಾರತೀಯರು ಬಿಡಲಿಲ್ಲ. ರೆನ್​ಶಾ ಮತ್ತೆ ಮೈದಾನಕ್ಕಿಳಿದು ಹಾಫ್ ಸೆಂಚುರಿ ಹೊಡೆದು ಔಟಾದ್ರು. ಆದ್ರೂ ಬಾತ್​ರೂಮ್ ಸ್ಟೋರಿಯಿಂದ ಆಸೀಸ್​ ಕುಸಿಯಲು ಕಾರಣವಾಯಿತು ಅನ್ನೋ ಆರೋಪ ರೆನ್​ಶಾ ಹೊತ್ತಿಕೊಂಡಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ
ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಹಾರ್ದಿಕ್ ದಾಖಲೆ, ಸೌತ್ ಆಫ್ರಿಕಾಗೆ 232 ರನ್ ಟಾರ್ಗೆಟ್