ರಾಫೆಲ್ ನಡಾಲ್‌ಗೆ ಅಪ್ಪಟ ಚಿನ್ನದ ರ್‍ಯಾಕೆಟ್‌ ಉಡುಗೊರೆ ಕೊಟ್ಟ ಸೌದಿ ಟೆನಿಸ್‌ ಫೆಡರೇಶನ್‌: ಬೆಲೆ ಎಷ್ಟು?

By Kannadaprabha News  |  First Published Oct 28, 2024, 9:24 AM IST

ಟೆನಿಸ್ ದಂತಕಥೆ ಸ್ಪೇನ್‌ನ ರಾಫೆಲ್ ನಡಾಲ್‌ಗೆ ಸೌದಿ ಟೆನಿಸ್ ಸಂಸ್ಥೆ ಅಪ್ಪಟ ಬಂಗಾರದ ರಾಕೆಟ್ ಉಡುಗೊರೆಯಾಗಿ ನೀಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ರಿಯಾದ್: ಇತ್ತೀಚೆಗಷ್ಟೇ ಟೆನಿಸ್‌ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದ ಸ್ಪೇನ್‌ನ ದಿಗ್ಗಜ ಆಟಗಾರ ರಾಫೆಲ್‌ ನಡಾಲ್‌ಗೆ ಸೌದಿ ಟೆನಿಸ್‌ ಫೆಡರೇಶನ್‌ ಬರೋಬ್ಬರಿ ₹2.27 ಕೋಟಿ ಮೌಲ್ಯದ ಚಿನ್ನದ ರ್‍ಯಾಕೆಟ್‌ ಉಡುಗೊರೆಯಾಗಿ ನೀಡಿದೆ. ಇತ್ತೀಚೆಗಷ್ಟೇ ನಡಾಲ್‌ ಸೌದಿಯ ‘ಸಿಕ್ಸ್‌ ಕಿಂಗ್ಸ್ ಸ್ಲಾಮ್‌’ ಪ್ರದರ್ಶನ ಟೆನಿಸ್‌ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.

ಟೂರ್ನಿಯಲ್ಲಿ ಅವರು 4ನೇ ಸ್ಥಾನ ಪಡೆದರೂ, ಆಯೋಜಕರು ಸುಮಾರು 3 ಕೆ.ಜಿ. ತೂಕದ ಚಿನ್ನದ ರ್‍ಯಾಕೆಟ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ ಟೂರ್ನಿಯ ಬಹುಮಾನದ ಮೊತ್ತ ರೂಪದಲ್ಲಿ ನಡಾಲ್‌ ಬರೋಬ್ಬರಿ ₹12.61 ಕೋಟಿ ನಗದು ಬಹುಮಾನ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Rafael Nadal responds after receiving 'controversial' gift worth over £200khttps://t.co/1B1xRgnkS7

— talkSPORT (@talkSPORT)

Tap to resize

Latest Videos

undefined

ಟೆನಿಸ್‌ನ ಪ್ರತಿಷ್ಠಿತ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು 22 ಬಾರಿ ಗೆದ್ದಿರುವ ನಡಾಲ್‌, ಮುಂದಿ ತಿಂಗಲು ಕೊನೆ ಬಾರಿ ಡೇವಿಸ್‌ ಕಪ್‌ ಫೈನಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ 2 ದಶಕಗಳ ಟೆನಿಸ್‌ ವೃತ್ತಿ ಬದುಕಿಗೆ ತೆರೆ ಎಳೆಯಲಿದ್ದಾರೆ.

ರಣಜಿ ಟ್ರೋಫಿ: ಕರ್ನಾಟಕದ 3ನೇ ಪಂದ್ಯಕ್ಕೂ ಮಳೆ ಕಾಟ!

ನಡಾಲ್‌ ಪ್ರಮುಖ ಮೈಲುಗಲ್ಲುಗಳು

- ಗರಿಷ್ಠ ಗ್ರ್ಯಾನ್‌ಸ್ಲಾಂ ಟ್ರೋಫಿ ಗೆದ್ದ ಸಾಧಕರ ಪಟ್ಟಿಯಲ್ಲಿ ನಡಾಲ್‌(22 ಬಾರಿ) 2ನೇ ಸ್ಥಾನ.

- ಅತಿ ಹೆಚ್ಚು ಬಾರಿ ಫ್ರೆಂಚ್‌ ಓಪನ್‌ ಗೆದ್ದ ಸಾಧನೆ. 14 ಬಾರಿ ಚಾಂಪಿಯನ್‌.

- ಆವೆ ಅಂಕಣದಲ್ಲಿ ಸತತವಾಗಿ ಹೆಚ್ಚು ಪಂದ್ಯ(81) ಗೆದ್ದ ದಾಖಲೆ.

- ಸತತವಾಗಿ ಅತಿ ಹೆಚ್ಚು ವರ್ಷ(10) ಕನಿಷ್ಠ ಒಂದಾದರೂ ಗ್ರ್ಯಾನ್‌ಸ್ಲಾಂ ಗೆದ್ದ ಸಾಧನೆ. 2005ರಿಂದ 2014.

ಕಬಡ್ಡಿ: ಜೈಪುರ vs ತಮಿಳ್‌ ತಲೈವಾಸ್‌ 30-30ರಲ್ಲಿ ಟೈ

ಹೈದರಾಬಾದ್‌: 11ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಭಾನುವಾರ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಹಾಗೂ ತಮಿಳ್‌ ತಲೈವಾಸ್ ನಡುವಿನ ಪಂದ್ಯ 30-30 ಅಂಕಗಳಿಂದ ಟೈ ಆಗಿದೆ. ಮೊದಲಾರ್ಧದಲ್ಲಿ ಜೈಪುರ 21-16ರಲ್ಲಿ ಮುನ್ನಡೆ ಸಾಧಿಸಿದ್ದರೂ, ಬಳಿಕ ತಲೈವಾಸ್‌ ಪುಟಿದೆದ್ದು ಪಂದ್ಯ ಸಮಬಲಗೊಳಿಸಲು ಯಶಸ್ವಿಯಾಯಿತು. ತಲೈವಾಸ್‌ ರೈಡರ್‌ ಸಚಿನ್‌ 11 ಅಂಕ ಕಲೆಹಾಕಿದರು. ಜೈಪುರ ಪರ ಅರ್ಜುನ್ ದೇಶ್‌ವಾಲ್‌ 7, ವಿಕಾಸ್‌ 6 ಅಂಕ ಗಳಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಯುಪಿ ಯೋಧಾದ್‌ 35-29 ಅಂಕಗಳ ಅಂತರದಲ್ಲಿ ಜಯಭೇರಿ ಬಾರಿಸಿತು. ಯೋಧಾಸ್‌ನ ಭವಾನಿ ರಜ್‌ಪೂರ್‌ 09, ಭರತ್‌ 13 ಅಂಕ ಗಳಿಸಿದರು. ಗುಜರಾತ್‌ನ ಹಿಮಾನ್ಶು 09 ಅಂಕ ಕಲೆಹಾಕಿದರು.

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ರೀಟೈನ್ ಆಟಗಾರರ ಲಿಸ್ಟ್ ಔಟ್?

ಇಂದಿನ ಪಂದ್ಯಗಳು

ಹರ್ಯಾಣ-ಡೆಲ್ಲಿ, ರಾತ್ರಿ 8ಕ್ಕೆ

ಟೈಟಾನ್ಸ್‌-ಪಾಟ್ನಾ, ರಾತ್ರಿ 9ಕ್ಕೆ
 

click me!