ಗೋಡೆ ಕೊರೆದು ಚಿನ್ನದಂಗಡಿಗೆ ಕನ್ನ: 3 ಕೆಜಿಗೂ ಅಧಿಕ ಲೂಟಿ

Published : Jul 09, 2017, 11:10 PM ISTUpdated : Apr 11, 2018, 12:59 PM IST
ಗೋಡೆ ಕೊರೆದು ಚಿನ್ನದಂಗಡಿಗೆ ಕನ್ನ: 3 ಕೆಜಿಗೂ ಅಧಿಕ ಲೂಟಿ

ಸಾರಾಂಶ

ಚಿನ್ನದಂಗಡಿ ಎದುರು​  ಜನವೋ ಜನ.  ಎಲ್ಲರ ಮೊಗದಲ್ಲೂ  ಆತಂಕ..  ಪರಿಶೀಲನೆಯಲ್ಲಿ  ನಿರತರಾಗಿರುವ ಪೊಲೀಸರು.. ಹೌದು  ಈ ಎಲ್ಲಾ ದೃಶ್ಯಗಳನ್ನು ನೋಡ್ತಿದ್ರೆ ಇಲ್ಲಿ  ಕಳ್ಳತನವಾಗಿದೆ ಅನ್ನೋದು ಗೊತ್ತಾಗುತ್ತೆ. ಅಂದಹಾಗೆ ಈ ಘಟನೆ ನಡೆದಿರೋದು ಸದಾ ಜನಜಂಗುಳಿಯಿಂದ ಕೂಡಿರುವ ಬೆಂಗಳೂರಿನ  ಕಾಟನ್​ ಪೇಟೆಯಲ್ಲಿ.

ಬೆಂಗಳೂರು(ಜು.09): ಇದೊಂದು ನಟೋರಿಯಸ್​ ಕೃತ್ಯ . ಈ ಕೃತ್ಯ ಅದ್ಹೇಗೆ ಮಾಡೋಕೆ ಸಾದ್ಯ ಅನ್ನೋ ವಿಚಾರವನ್ನ ಪೊಲೀಸರೇ ಮೂಗಿನ ಮೇಲೆ ಬೆರಳಿಟ್ಟು ಕೂತಿದ್ದಾರೆ. ಪಕ್ಕಾ ಪ್ರೊಫೆಷನಲ್​ಗಳೂ ಕೂಡ ಈ ಪರಿ ವರ್ಕ್​ ಮಾಡಿರೋಕೆ ಸಾದ್ಯವಿಲ್ಲ ಅನ್ನೋ ಗೊಂದಲ ಸೃಷ್ಟಿಯಾಗಿದ್ದು ಈ ಕೇಸ್​ನಿಂದ.

ಚಿನ್ನದಂಗಡಿ ಎದುರು​  ಜನವೋ ಜನ.  ಎಲ್ಲರ ಮೊಗದಲ್ಲೂ  ಆತಂಕ..  ಪರಿಶೀಲನೆಯಲ್ಲಿ  ನಿರತರಾಗಿರುವ ಪೊಲೀಸರು.. ಹೌದು  ಈ ಎಲ್ಲಾ ದೃಶ್ಯಗಳನ್ನು ನೋಡ್ತಿದ್ರೆ ಇಲ್ಲಿ  ಕಳ್ಳತನವಾಗಿದೆ ಅನ್ನೋದು ಗೊತ್ತಾಗುತ್ತೆ. ಅಂದಹಾಗೆ ಈ ಘಟನೆ ನಡೆದಿರೋದು ಸದಾ ಜನಜಂಗುಳಿಯಿಂದ ಕೂಡಿರುವ ಬೆಂಗಳೂರಿನ  ಕಾಟನ್​ ಪೇಟೆಯಲ್ಲಿ.

ಕಾಟನ್​ಪೇಟೆಯ ಪ್ಲಾಟಿನಮ್​ ಲಾಡ್ಜ್​ನಲ್ಲಿ  ಜೂನ್​ 19 ರಿಂದ  ರೂಮ್ ನಂಬರ್​ 102ರಲ್ಲಿ  ಕಳ್ಳರು ತಂಗಿದ್ದರು.  ಲಾಡ್ಜ್​ ಬುಕ್​ನಲ್ಲಿ ಹಿಸೇನ್​ ಎಂಬ ಹೆಸರಿನಲ್ಲಿ  ಸ್ಟೇ ಆಗಿದ್ದ ಚೋರರು, ಕೊಟ್ಟಿರೋ ಅಡ್ರೆಸ್​ ಕೂಡ ಫೇಕ್​ ಎಂದು ತಿಳಿದು ಬಂದಿದೆ. ಇನ್ನು ಮೊದಲ ಮಹಡಿಯಲ್ಲಿರುವ  102 ರೂಂಗೆ ಸರಿಯಾಗಿ ಕೆಳ ಭಾಗದಲ್ಲಿರೋದೆ ಕಾಂಚನಾ ಜ್ಯೂವೆಲ್ಲರ್ಸ್​.  ಕಳ್ಳರಿದ್ದ  ಕೊಠಡಿಯಿಂದ ಜ್ಯೂವೆಲ್ಲರಿ ಶಾಪ್​ನ ಗೋಡೆಗೆ ಮೂರಡಿ ಸೆಂಟ್ರಿಂಗ್​ ಇದ್ದು , ಅಷ್ಟೂ ದಪ್ಪದ ಗೋಡೆಯನ್ನ ಕೊರೆದು ಒಳ ನುಗ್ಗಿದ್ದಾರೆ.

ಇನ್ನು ರೂಂನ ಪಕ್ಕದಲ್ಲಿ ರಿಸೆಪ್ಷನ್​ ಇದ್ದರೂ ಸಣ್ಣ  ಶಬ್ಧವಾಗಲೀ ಬಂದಿಲ್ಲ.  ಗೋಡೆ ಕೊರೆಯುವಾಗ ಡ್ರಿಲ್ಲಿಂಗ್​ ಮಷಿನ್ ಸೌಂಡ್​ ಬಾರದಿರಲಿ ಎಂದು ಟಿವಿ ಆನ್​ ಮಾಡಿ ಕೃತ್ಯ ಎಸಗಿರಬಹುದು ಎಂಬ ಶಂಕೆ  ವ್ಯಕ್ತವಾಗಿದೆ. ಇನ್ನು  ಕಳ್ಳರು ಒಳಗೆ ನುಗ್ಗಿ ಕದ್ದಿದ್ದು ಬರೋಬ್ಬರಿ ಮೂರು ಕೇಜಿ ಚಿನ್ನ. ನಿನ್ನೆ ರಜೆ ಹಾಕಿದ್ದ ಚಿನ್ನದಂಗಡಿ ಮಾಲೀಕ ಇಂದು ಬೆಳಗೆ ಬಂದು ನೋಡಿದಾಗ ಕೃತ್ಯ ಬಯಲಿಗೆ ಬಂದಿತ್ತು.

ಕೆ ಆರ್​ ಪುರಂ ಮತ್ತು ಬೊಮ್ಮನಹಳ್ಳಿ ಪ್ರಕರಣಕ್ಕೂ ಈ ಕೃತ್ಯಕ್ಕೂ ಸಾಮ್ಯತೆ ಇರುವುದರಿಂದ ಪೊಲೀಸರು ಈ ಮೂರು ಪ್ರಕರಣದಲ್ಲಿ ಒಂದೇ ತಂಡದ  ಕೈವಾಡವಿರಬಹುದು  ಎಂದು ಶಂಕಿಸಿದ್ದಾರೆ. ಸದ್ಯ ಆರೋಪಿಗಳಿಗಾಗಿ ವಿಶೇಷ ತಂಡ ರಚಿಸಿರುವ ಕಾಟನ್​ ಪೊಲೀಸರು ಖದೀಮರಿಗಾಗಿ ಬಲೆ ಬೀಸಿದ್ದಾರೆ.    

--

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್ 19 ಏಷ್ಯಾಕಪ್ ಫೈನಲ್: ಪಾಕ್ ಎದುರು ಮುಗ್ಗರಿಸಿದ ಭಾರತ; ವೈಭವ್ ಸೂರ್ಯವಂಶಿ ಕನಸು ನುಚ್ಚುನೂರು!
2026ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ಬದಲಾವಣೆ!