ಕ್ರಿಕೆಟ್ ಲೋಕದಲ್ಲಿನ ತೂಕದ ಬ್ಯಾಟ್ !ಭಾರವಾದ ಬ್ಯಾಟ್ ಎತ್ತಿದವರು ಯಾರೆಲ್ಲ ?

By Internet DeskFirst Published Sep 26, 2016, 9:23 AM IST
Highlights

ಕ್ರಿಕೆಟ್​​ ಲೋಕದಲ್ಲಿ ಕೆಲವೇ ಕೆಲ ದಾಂಡಿಗರು ಮಾತ್ರವೇ ಭಾರವಾದ ಬ್ಯಾಟ್​​​ಗಳನ್ನು ಬಳಸಿದ್ದಾರೆ. ಆ ಬ್ಯಾಟ್​​ಗಳ ತೂಕ ಎಷ್ಟಿತ್ತು. ಯಾರೆಲ್ಲಾ ತೂಕದ ಬ್ಯಾಟ್​​​ ಬಳಸಿದ್ದಾರೆ. ಅದರಿಂದ ಅವರಿಗಾದ ಪ್ರಯೋಜನ ಏನು ಅನ್ನೋ ಸಾಕಷ್ಟು ಡಿಟೈಲ್ಸ್​​ ಇಲ್ಲಿದೆ.

ಕ್ರಿಕೆಟ್​​ ಲೋಕದಲ್ಲಿನ ತೂಕದ ಬ್ಯಾಟ್​​ ! 
ಸಾಮಾನ್ಯವಾಗಿ ಬ್ಯಾಟ್ಸ್​​ಮನ್​​ ಆಯ್ಕೆ ಹಗುರುವಾದ ಬ್ಯಾಟ್​​​. ಆದ್ರೆ, ಕ್ರಿಕೆಟ್​​​ ಲೋಕದಲ್ಲಿನ ಕೆಲವೇ ಕೆಲ ಆಟಗಾರರು ಮಾತ್ರವೇ ಇದಕ್ಕೆ ಅಪವಾದವೆಂಬಂತೆ ಇದ್ದಾರೆ. ಭಾರವಾದ ಬ್ಯಾಟ್​​ ಬಳಸಿಕೊಂಡು ದೊಡ್ಡ ಸ್ಕೋರ್​​ ಮಾಡಿದ್ದಾರೆ. ಅದರಿಂದಲೇ ವಿಶ್ವ ಕ್ರಿಕೆಟ್​​​ನ ಗಮನವನ್ನು ಸೆಳೆದಿದ್ದಾರೆ. ಯಾರೆಲ್ಲ ಇಂತಹ ಸಾಧನೆ ಮಾಡಿದ್ದಾರೆ. ಅವರು ಬಳಸಿದ ಬ್ಯಾಟ್​​ ತೂಕ ಎಷ್ಟು ಅನ್ನೋದು ಮುಂದಿದೆ ನೋಡಿ. 

Latest Videos

ಲಾನ್ಸ್​​ ಕ್ಲೂಸಿನರ್​​​ ಬ್ಯಾಟ್​​​ ತೂಕ 1.53 ಕೆ.ಜಿ. 
ಸೌತ್​​ ಆಫ್ರಿಕಾದ ಆಲ್​​ರೌಂಡರ್​​ ಲಾನ್ಸ್​​​ ಕ್ಲೂಸಿನರ್​​ ಹೆಚ್ಚು ಭಾರದ ಬ್ಯಾಟ್​​ ಬಳಸಿದವರಲ್ಲಿ ಮೊದಲಿಗರು.​​ 1.55 ಕಿಲೋ ಗ್ರಾಮ್​​​ನ ಎಸ್​​ ಎಸ್​​ ಜೂಲು ಅನ್ನೋ ಹೆಸರಿನ ಬ್ಯಾಟ್​​ ಬಳಸಿದ್ದರು. ಉಳಿದ ಬ್ಯಾಟ್​​​ಗಳಿಗಿಂತ ಭಿನ್ನವಾಗಿದ್ದ ಈ ಬ್ಯಾಟ್​​ ಹಿಡಿಕೆ ಭಾರೀ ಚಿಕ್ಕದಾಗಿತ್ತು. 3 ಇಂಚು ಅಗಲವಾಗಿದ್ದ ಈ ಬ್ಯಾಟ್​​ನಲ್ಲಿ ಕ್ಲೂಸಿನರ್​​ ಸಾಕಷ್ಟು ಬೌಂಡರಿ ಹಾಗೂ ಸಿಕ್ಸರ್​​ಗಳನ್ನು ಸಿಡಿಸಿದ್ದರು. ಈ ಬ್ಯಾಟ್​​ ಬಳಸಲಿಕ್ಕೂ ಮುನ್ನ ಕ್ಲೂಸಿನರ್​​ ಅಷ್ಟೇನೂ ಮಿಂಚಿರಲಿಲ್ಲ ಅನ್ನೋದು ಕೂಡ ಗಮನಾರ್ಹವಾದ ವಿಷ್ಯ. 

ಸಚಿನ್​​ ಬ್ಯಾಟ್​​ ತೂಕ 1.47 ಕೆ.ಜಿ. 
ಈ ವರೆಗೂ ಸಚಿನ್​​ ತೆಂಡುಲ್ಕರ್​​​ ಅತೀ ಹೆಚ್ಚು ಭಾರವಾದ ಬ್ಯಾಟ್​​ ಬಳಸಿದ ಆಟಗಾರ ಅಂತಾನೇ ನಂಬಲಾಗಿದೆ. ಆದ್ರೆ, ಸಚಿನ್​​ ಬಳಸಿದ ಬ್ಯಾಟ್​​ ತೂಕ 1. 47 ಕಿಲೋ ಗ್ರಾಂನದ್ದಾಗಿದೆ. ಉದ್ದ ಹಾಗೂ ಅಗಲದಲ್ಲಿ ಯಾವುದೇ ಬದಲಾವಣೆ ಇರಲಿಲ್ಲವಾದ್ರೂ ದಪ್ಪನೆಯದ್ದಾಗಿತ್ತು. ಇನ್ನು ಸಚಿನ್​​ 1996ರ ವರೆಗೂ ತಮ್ಮ ಬ್ಯಾಟ್​​ಗೆ ಯಾವುದೇ ಪ್ರಯೋಜಕತ್ವವನ್ನು ಪಡೆದಿರಲಿಲ್ಲ. ಆ ನಂತ್ರದಲ್ಲಿ ಎಮ್​​ಆರ್​​ಎಫ್​​​ ಕಂಪನಿ ಅವ್ರಿಗಾಗಿ ಇಂತಹದೊಂದು ಬ್ಯಾಟ್​​ ಪ್ರಯೋಜಕತ್ವ ನೀಡಿತ್ತು. ವಿಶೇಷ ಅಂದ್ರೆ, ಈ ಬ್ಯಾಟ್​​​ 2010ರಲ್ಲಿ 47 ಲಕ್ಷಕ್ಕೆ ಹರಾಜಾಗಿತ್ತು. 

ಕ್ರಿಸ್​​ ಗೇಲ್​​​ ಬ್ಯಾಟ್​​ ತೂಕ 1.36 ಕೆ.ಜಿ. 
ವಿಂಡೀಸ್​​ ದೈತ್ಯ ಆಟಗಾರ ಕ್ರಿಸ್​​ ಗೇಲ್​​​ ಬ್ಯಾಟಿಂಗ್​ ಅಬ್ಬರ ನೋಡ್ತಿದ್ದಾಗೆಯೇ ಅವರ ಬ್ಯಾಟ್​​ ತೂಕ ಎಷ್ಟಿರಬಹುದು ಅನ್ನೋ ಪ್ರಶ್ನೆ ಎಲ್ಲರಿಗೂ ಎದುರಾಗಿರುತ್ತೆ. ಆದರೆ, ಗೇಲ್​​ ಈವರೆಗೂ ಬಳಸಿರೋ ಭಾರೀ ತೂಕದ ಬ್ಯಾಟ್​​ ಅಂದರೆ, 1.36 ಕಿಲೋ ಗ್ರಾಂನದ್ದು. ದಪ್ಪ ಕೆಳಭಾಗದ ಬ್ಯಾಟ್​​ಗೆ ಗೇಲ್​ ಸ್ವತಃ ಡಿಸೈನ್​​ ಮಾಡಿಸಿದರು. 2012ರ ನಂತರ ಸ್ಪರ್ಟಾನ್​​ ಪ್ರಯೋಜಕತ್ವದಲ್ಲಿ ಈ ಬ್ಯಾಟ್​​ ಬಳಸಿದರು.

ವೀರೂ ಬ್ಯಾಟ್​​ ತೂಕ 1.35 ಕೆ.ಜಿ. 
ನಜಾಫ್​ಘಡದ ನವಾಬ ಅಂತಾನೇ ಕರೆಸಿಕೊಳ್ಳೊ ವಿರೇಂದ್ರ ಸೆಹ್ವಾಗ್​​ ಕೂಡ ಹೇವಿ ವೇಟ್​​ ಬ್ಯಾಟ್​​ ಬಳಿಸಿದ್ದರು. ಇದರಿಂದಾಗಿಯೇ ಅವರು ಎದುರಿಸುವ ಮೊದಲ ಬಾಲ್​​ನಿಂದಲೇ ಚಾರ್ಜ್​​ ಶುರುಮಾಡ್ತಿದ್ದರು. ಟೆಸ್ಟ್​​ನಲ್ಲಿ 300ರನ್​​ ಏಕದಿನದಲ್ಲಿ 200 ರನ್​​ ಹಾಗೂ ಟಿ20ಯ 100ರನ್​​ಗಳು ಅವರ ಆಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. 

ಡೇವಿಡ್​​ ವಾರ್ನರ್​​ ಬ್ಯಾಟ್​​ ತೂಕ 1.25 ಕೆ.ಜಿ. 
ಗೇಲ್​​ನಂತೆಯೇ ಡೇವಿಡ್​ ವಾರ್ನರ್​​ ಕೂಡ ಕೆಳ ಭಾಗದಲ್ಲಿ ದಪ್ಪಗಿರುವಂತಹ ಬ್ಯಾಟ್​​ ಅನ್ನು ಬಳಸಿದ್ದಾರೆ. 1.25 ಕಿಲೋ ಗ್ರಾಂ ತೂಕದ ಈ ಬ್ಯಾಟ್​​ ವಾರ್ನರ್​​ ಅಬ್ಬರಿಸೋಕೆ ಸಾಕಷ್ಟು ಸಲ ನೆರವು ನೀಡಿದೆ. ಇನ್ನು ಆರಂಭಿಕನಾಗಿ ಕ್ಲಿಕ್​​ ಆಗೋದಿಕ್ಕೆ ಕೂಡ ಇದು ಸಹಕಾರಿಯಾಗಿದೆ ಅನ್ನೋದನ್ನ ವಾರ್ನರ್​​ ಸಹ ತುಂಬಾ ಸಲ ಹೇಳ್ಕೊಂಡಿದ್ದಾರೆ. 

ಈ ಐವರು ಆಟಗಾರರು ಉಳಿದೆಲ್ಲರಗಿಂತಲೂ ಭಿನ್ನವಾಗಿ ನಿಂತ್ಕೊಂಡು ಭಾರೀ ತೂಕದ ಬ್ಯಾಟ್​​ಗಳನ್ನು ಬಳಸಿದ್ದಾರೆ. ಅಷ್ಟೆ ಅಲ್ಲ ಅದ್ರಲ್ಲಿ ಸಕ್ಸಸ್​​ ಕೂಡ ಆಗಿದ್ದಾರೆ. 

click me!