2019ರಲ್ಲಿ ಎಂ.ಎಸ್.ಧೋನಿ ಫಾರ್ಮ್‌ಗೆ ಮರಳಿದ್ದಾರೆ. ಇಷ್ಟೇ ಅಲ್ಲ 7 ವರ್ಷಗಳ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ ಧೋನಿ, ಕಿವೀಸ್ ನೆಲದಲ್ಲೂ ಅಬ್ಬರಿಸಿದರು. ಧೋನಿ ಫಾರ್ಮ್ ಕಂಡುಕೊಂಡಿದ್ದು ಹೇಗೆ ಅನ್ನೋದು ಬಹಿರಂಗವಾಗಿದೆ.
ರಾಂಚಿ(ಫೆ.13): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ 2019ನೇ ವರ್ಷವನ್ನ ಭರ್ಜರಿಯಾಗಿ ಆರಂಭಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಹ್ಯಾಟ್ರಿಕ್ ಅರ್ಧಶತಕ ಸಿಡಿಸೋ ಮೂಲಕ ಧೋನಿ ಫಾರ್ಮ್‌ಗೆ ಮರಳಿದರು. 2018ರಲ್ಲಿ ಧೋನಿ ಕಳಪೆ ಫಾರ್ಮ್‌ನಲ್ಲಿದ್ದರು. ಹೀಗಾಗಿ 2019ರ ವಿಶ್ವಕಪ್ ಟೂರ್ನಿ ಆಯ್ಕೆ, ಸೆಲೆಕ್ಷನ್ ಕಮಿಟಿಗೆ ತಲೆನೋವಾಗಿ ಪರಿಣಮಿಸಿತ್ತು. ಇದೀಗ ಧೋನಿ ಫಾರ್ಮ್‌ಗೆ ಮರಳಿರೋದು ತಂಡದ ಚಿಂತೆ ದೂರವಾಗಿದೆ.
ಇದನ್ನೂ ಓದಿ: ಆಸೀಸ್ ವಿರುದ್ಧ ತಮಾಷೆ: ವೀರೂಗೆ ಹೇಡನ್ ಎಚ್ಚರಿಕೆ!
ಆಸ್ಟ್ರೇಲಿಯಾ ಪ್ರವಾಸದಲ್ಲಿ ಧೋನಿ ಹ್ಯಾಟ್ರಿಕ್ ಅರ್ಧಶತಕ ಸಿಡಿಸೋ ಮೂಲಕ 7 ವರ್ಷಗಳ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಈ ವರ್ಷ ಆಡಿದ 6 ಏಕದಿನ ಪಂದ್ಯಗಳಿಂದ ಧೋನಿ 242 ರನ್ ಸಿಡಿಸಿದ್ದಾರೆ. ಇನ್ನು 3 ಟಿ20 ಪಂದ್ಯಗಳಿಂದ 61 ರನ್ ಸಿಡಿಸಿದ್ದಾರೆ. 2019ರಲ್ಲಿ ಧೋನಿ ಫಾರ್ಮ್‌ಗೆ ಮರಳಲು ಮುಖ್ಯ ಕಾರಣ ಧೋನಿ ಬ್ಯಾಟ್ ಬದಲಾವಣೆ.
ಇದನ್ನೂ ಓದಿ: 2021ರ ಏಕದಿನ ವಿಶ್ವಕಪ್: ಭಾರತಕ್ಕಿಲ್ಲ ನೇರ ಪ್ರವೇಶ?
2018ರ ಏಷ್ಯಾಕಪ್ ಟೂರ್ನಿ ವೇಳೆ ಧೋನಿ ಬ್ಯಾಟ್‌ನಲ್ಲಿ ಕೊಂಚ ಬದಲಾವಣೆ ಮಾಡಿದ್ದರು. 2019ರ ಆರಂಭದಲ್ಲಿ ಧೋನಿ ತಮ್ಮ ಬ್ಯಾಟ್ ಕೆಳಭಾಗದ ತೂಕ ಹೆಚ್ಚಿಸಿದ್ದಾರೆ. ಸದ್ಯ ಧೋನಿ ಬ್ಯಾಟ್ ತೂಕ 1150 ಗ್ರಾಂ. ಇಷ್ಟೇ ಅಲ್ಲ ಪಿಚ್, ವಿಕೆಟ್, ಕಂಡೀಷನ್‌ಗೆ ಅನುಗುಣವಾಗಿ ಧೋನಿ ಬ್ಯಾಟ್ ಬದಲಾಯಿಸಿದ್ದಾರೆ. ಸ್ಲೋ ಬಾಲ್ ಹಾಗೂ ಸ್ಲೋ ಪಿಚ್‌ಗಳಿಗೆ ಧೋನಿ ಹೆಚ್ಚು ತೂಕದ ಬ್ಯಾಟ್ ಬಳಸುತ್ತಾರೆ. ಇನ್ನು ಫಾಸ್ಟ್ ವಿಕೆಟ್ ಇದ್ದಲ್ಲಿ ಲೈಟರ್ ಬ್ಲೇಡ್ ಬ್ಯಾಟ್ ಬಳಸುತ್ತಾರೆ.