ಟೀಂ ಇಂಡಿಯಾಗೆ ಮಯಾಂಕ್ ಇಲ್ಲ: ಬಯಲಾಯ್ತು ಆಯ್ಕೆ ಹಿಂದಿನ ಸೀಕ್ರೇಟ್ಸ್..!

By Suvarna Web DeskFirst Published Mar 5, 2018, 3:07 PM IST
Highlights

ಪ್ರಸಕ್ತ ಸಾಲಿನಲ್ಲಿ 27 ವರ್ಷದ ಅಗರ್'ವಾಲ್ 2141 ರನ್ ಸಿಡಿಸಿ ಗಮನಸೆಳೆದಿದ್ದಾರೆ.

ನವದೆಹಲಿ(ಮಾ.05): ಶ್ರೀಲಂಕಾದಲ್ಲಿ ಮಂಗಳವಾರದಿಂದ ಆರಂಭಗೊಳ್ಳಲಿರುವ ತ್ರಿಕೋನ ಟಿ20 ಸರಣಿಗೆ, ಭಾರತ ತಂಡವನ್ನು ವಿಜಯ್ ಹಜಾರೆ ಕ್ವಾರ್ಟರ್ ಫೈನಲ್‌'ಗೂ ಮೊದಲೇ ಆಯ್ಕೆ ಮಾಡಲಾಗಿತ್ತು ಎನ್ನುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೇ ಮಯಾಂಕ್ ಆಯ್ಕೆಯಾಗದೇ ಇರುವುದಕ್ಕೂ ಕಾರಣ ಬಯಲಾಗಿದೆ.

ಬಿಸಿಸಿಐನ ಉನ್ನತ ಮೂಲಗಳ ಪ್ರಕಾರ, ಫೆ.20ರಂದೇ ಕಾರ್ಯದರ್ಶಿ ಅಮಿತಾಭ್ ಚೌಧರಿ ತಂಡದ ಆಯ್ಕೆ ನಡೆಸಲು ಸೂಚಿಸಿದ್ದರು. ಆದರೆ ದ.ಆಫ್ರಿಕಾ ಪ್ರವಾಸ ಮುಕ್ತಾಯಗೊಂಡ ಬಳಿಕವಷ್ಟೇ ತಂಡವನ್ನು ಪ್ರಕಟಗೊಳಿಸುವಂತೆ ಸೂಚಿಸಲಾಗಿತ್ತು.ವಿಜಯ್ ಹಜಾರೆ ಕ್ವಾರ್ಟರ್ ಫೈನಲ್ ನಡೆದಿದ್ದು ಫೆ.21ಕ್ಕೆ. ಆ ಪಂದ್ಯದಲ್ಲಿ 140 ರನ್ ಸಿಡಿಸಿದ್ದ ಮಯಾಂಕ್, ಸೆಮೀಸ್‌'ನಲ್ಲಿ 81, ಫೈನಲ್‌'ನಲ್ಲಿ 90 ರನ್ ಗಳಿಸಿದ್ದರು.

ಮಯಾಂಕ್‌'ರನ್ನು ಆಯ್ಕೆ ಮಾಡದ್ದನ್ನು ಸಮರ್ಥಿಸಿಕೊಂಡಿದ್ದ ಬಿಸಿಸಿಐ ಪ್ರಧಾನ ಆಯ್ಕೆಗಾರ ಎಂ.ಎಸ್.ಕೆ.ಪ್ರಸಾದ್, ‘ಯಾವುದೇ ಆಟಗಾರ ತನ್ನ ಸ್ಥಾನದ ಬಗ್ಗೆ ಗೊಂದಲಕ್ಕೀಡಾಗಬಾರದು. ಪ್ರತಿ ಆಟಗಾರನ ಬಳಿ ನಮ್ಮ ಸಮಿತಿ ಮಾತನಾಡುತ್ತದೆ. ಆಯ್ಕೆಯಾಗದ ಆಟಗಾರರೊಂದಿಗೂ ನಾವು ಮಾತನಾಡುತ್ತೇವೆ. ಫೈನಲ್‌'ಗೂ ಮೊದಲು ಮಯಾಂಕ್ ಜತೆ ಮಾತುಕತೆ ನಡೆಸಿದ್ದು, ಸ್ಥಿರ ಪ್ರದರ್ಶನದೊಂದಿಗೆ ಆತ ಆಯ್ಕೆಯಾಗಬಲ್ಲ ಆಟಗಾರನ ಪಟ್ಟಿಯಲ್ಲಿದ್ದಾನೆ ಎಂದು ತಿಳಿಸಿದ್ದೇವೆ’ ಎಂದು ಹೇಳಿದ್ದರು.

ಪ್ರಸಕ್ತ ಸಾಲಿನಲ್ಲಿ 27 ವರ್ಷದ ಅಗರ್'ವಾಲ್ 2141 ರನ್ ಸಿಡಿಸಿ ಗಮನಸೆಳೆದಿದ್ದಾರೆ.

click me!