ಬಿಜೆಪಿ ಜನಸುರಕ್ಷಾ ಯಾತ್ರೆಯಲ್ಲಿ ಕಾಂಗ್ರೆಸ್ ಸಚಿವ..! ಮುಂದೆ ಆಗಿದ್ದೇನು..?

By Suvarna Web DeskFirst Published Mar 4, 2018, 5:38 PM IST
Highlights

ಪಾದ ಯಾತ್ರೆಗೆ ಪುತ್ತೂರಿನ ಬೈಪಾಸ್ ವೃತ್ತದ ಬಳಿ ಬಿಜೆಪಿ ಕಾರ್ಯಕರ್ತರು ಸಮಾವೇಶಗೊಂಡಿದ್ದರು. ಬೇರೊಂದು ರಸ್ತೆಯಲ್ಲಿ ತೆರಳುತ್ತಿದ್ದ ರಮಾನಾಥ್ ರೈ, ತಮ್ಮ ಬೆಂಗಾವಲು ವಾಹನ ಬಿಟ್ಟು ಬಿಜೆಪಿ ಕಾರ್ಯಕರ್ತರು ನೆರೆದಿದ್ದ ಸ್ಥಳಕ್ಕೆ ರಮಾನಾಥ್ ರೈ ಭೇಟಿ ನೀಡಿದ್ದಾರೆ.

ಪುತ್ತೂರು(ಮಾ.04): ಬಿಜೆಪಿ ನಡೆಸುತ್ತಿದ್ದ ಜನಸುರಕ್ಷಾ ಯಾತ್ರೆಗೆ ಅರಣ್ಯ ಸಚಿವ ರಮನಾಥ್ ರೈ ಅನಿರೀಕ್ಷಿತವಾಗಿ ಭೇಟಿ ನೀಡಿ ಇರಿಸು-ಮುರಿಸಿನ ಸನ್ನಿವೇಶ ಎದುರಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಪಾದ ಯಾತ್ರೆಗೆ ಪುತ್ತೂರಿನ ಬೈಪಾಸ್ ವೃತ್ತದ ಬಳಿ ಬಿಜೆಪಿ ಕಾರ್ಯಕರ್ತರು ಸಮಾವೇಶಗೊಂಡಿದ್ದರು. ಬೇರೊಂದು ರಸ್ತೆಯಲ್ಲಿ ತೆರಳುತ್ತಿದ್ದ ರಮಾನಾಥ್ ರೈ, ತಮ್ಮ ಬೆಂಗಾವಲು ವಾಹನ ಬಿಟ್ಟು ಬಿಜೆಪಿ ಕಾರ್ಯಕರ್ತರು ನೆರೆದಿದ್ದ ಸ್ಥಳಕ್ಕೆ ರಮಾನಾಥ್ ರೈ ಭೇಟಿ ನೀಡಿದ್ದಾರೆ.

ಸಚಿವರ ಕಾರು ಕಂಡ ಕೂಡಲೇ ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ ಎಂದು ಘೋಷಣೆ ಕೂಗುವ ಮೂಲಕ ರೈ ಅವರಿಗೆ ಕಸಿವಿಸಿ ಉಂಟಾಗುವಂತೆ ಮಾಡಿದ್ದಾರೆ. ಬಳಿಕ ಸಚಿವರ ಕಾರನ್ನು ಹಿಂಬಾಲಿಸಿಕೊಂಡು ಬಂದ ಪೊಲೀಸ್ ಬೆಂಗಾವಲು ಪಡೆ ರಸ್ತೆಯಿಂದ ಜನರನ್ನು ಚೆದುರಿಸಿ ಮುಂದೆ ಸಾಗಲು ಅವಕಾಶ ಮಾಡಿಕೊಟ್ಟರು. ರಮಾನಾಥ್ ರೈ ಆ ಸ್ಥಳ ಬಿಟ್ಟು ಹೋಗುವವರೆಗೂ ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ ಎಂದು ಘೋಷಣೆ ಕೂಗುತ್ತಲೇ ಇದ್ದರು.

click me!