
2015ರ ವಿಶ್ವಕಪ್ ವೇಳೆ ಬಂದ ಈ ಪ್ರೋಮೋವನ್ನು ಭಾರತೀಯ ಕ್ರಿಕೆಟ್ ಪ್ರೇಮಿಗಳು ಇಂದಿಗೂ ಮರೆತೇ ಇಲ್ಲ. ಆಸ್ಟ್ರೇಲಿಯಾದಲ್ಲಿ ನಡೆದಿದ್ದ 2015ರ ವಿಶ್ವಕಪ್'ನ ಪ್ರಸಾರದ ಹಕ್ಕು ಪಡೆದಿದ್ದ ಸ್ಟಾರ್ ಕಂಪನಿ, ಆ ಟೂರ್ನಿಯಲ್ಲಿ ನಡೆಯಬೇಕಿದ್ದ ಇಂಡಿಯಾ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಹೆಚ್ಚು ಅಭಿಮಾನಿಗಳನ್ನ ಸೆಳೆಯಲು. ಕ್ರಿಕೆಟ್ ಪ್ರೇಮಿಗಳಲ್ಲಿ ಕಿಚ್ಚು ಹಚ್ಚಲು ಅಂದು ಈ ರೀತಿಯ ಪ್ರೋಮೋಗಳನ್ನ ಬಿಟ್ಟು ಸಕ್ಸಸ್ ಆಗಿತ್ತು. ಇಂತಹ ಪ್ರೋಮೋಗಳು ದೇಶದ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳದಿತ್ತು. ಟಿಆರ್ಪಿ ಕೂಡ ಹೆಚ್ಚಿತ್ತು.
ಭಾರತ-ಪಾಕಿಸ್ತಾನ ಪಂದ್ಯಗಳು ಎಷ್ಟು ರೋಚಕತೆ ಇರುತ್ತೋ ಅಷ್ಟೇ ರೋಚಕತೆ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾದಗಲೂ ಇರುತ್ತೆ. ಈ ಅವಕಾಶವನ್ನ ಮಿಸ್ ಮಾಡಿಕೊಳ್ಳಲು ಬಯಸದ ಸ್ಟಾರ್ ನೆಟ್ವರ್ಕ್ ತಮ್ಮ ವೀಕ್ಷಕರಿಗೆ ಹೊಸ ಪ್ರೋಮೊವನ್ನ ರೆಡಿ ಮಾಡಿದೆ. ಈ ಪ್ರೋಮೋ ಮೂಲಕ ಮತ್ತೆ ಭಾರತದ ಪ್ರೇಕ್ಷಕರನ್ನ ರೊಚ್ಚಿಗೆಬ್ಬಿಸಿದೆ.
ಆಸ್ಟ್ರೇಲಿಯಾ ವಿರುದ್ಧ ಸರಣಿ ಆರಂಭವಾಗಲು ಇನ್ನೂ ಒಂದು ತಿಂಗಳು ಬಾಕಿ ಇದೆ. ಆದರೆರೆ ಈಗಾಗಲೇ ಈ ವಿಭಿನ್ನ ಪ್ರೋಮೋವನ್ನ ಬಿಟ್ಟು ಭಾರತದ ಕ್ರಿಕೆಟ್ ಪ್ರೇಮಿಗಳನ್ನ ಇನ್ನಿಲ್ಲದಂತೆ ಸೆಳಿತ್ತಿದೆ. ಅಷ್ಟೇ ಅಲ್ಲ ಭಾರತ ಮತ್ತು ಆಸ್ಟ್ರೇಲಿಯಾ ಸರಣಿ ಭಾರತದ ಅಭಿಮಾನಿಗಳಲ್ಲಿ ಎಷ್ಟು ಕ್ರೇಜ್ ಹುಟ್ಟಿಸಿದೆ ಎಂದು ತೋರಿಸಿಕೊಟ್ಟಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.