
ನವದೆಹಲಿ(ಜೂನ್.1): ಸ್ಪೇನ್ ವಿರುದ್ದದ 5 ಪಂದ್ಯಗಳ ಹಾಕಿ ಸರಣಿಗಾಗಿ ಭಾರತೀಯ ಮಹಿಳಾ ತಂಡವನ್ನ ಪ್ರಕಟಿಸಲಾಗಿದೆ. ಜೂನ್ 12ರಿಂದ ಸ್ಪೇನ್‌ನಲ್ಲಿ ನಡೆಯಲಿರುವ ಹಾಕಿ ಟೂರ್ನಿಗಾಗಿ 20 ಆಟಗಾರರನ್ನೊಳಗೊಂಡ ಮಹಿಳಾ ಹಾಕಿ ತಂಡ ಮುಂದಿನ ವಾರ ಸ್ಪೇನ್‌ಗೆ ಪ್ರಯಾಣ ಬೆಳೆಸಲಿದೆ .
ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಿಂದ ವಿಶ್ರಾಂತಿ ಪಡೆದಿದ್ದ ನಾಯಕಿ ರಾಣಿ ರಾಮ್‌ಪಾಲ್ ತಂಡಕ್ಕೆ ವಾಪಾಸ್ಸಾಗಿದ್ದಾರೆ. ಜುಲೈನಿಂದ ಲಂಡನ್‌ನಲ್ಲಿ ಆರಂಭವಾಗಲಿರುವ ವಿಶ್ವಕಪ್ ಹಾಕಿ ಟೂರ್ನಿಗೆ ಪೂರ್ವಭಾವಿಯಾಗಿ ಈ ಸರಣಿ ಆಯೋಜಿಸಲಾಗಿದೆ. ರಾಣಿ ರಾಮ್‌ಪಾಲ್ ತಂಡವನ್ನ ಮುನ್ನಡೆಸಿದರೆ, ಗೋಲುಕೀಪರ್ ಸವಿತ ಉಪನಾಯಕಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಅನುಭವಿ ಡಿಫೆಂಡರ್ ಸುಶೀಲಾ ಚಾನು ಪುಖ್ರಾಂಬಮ್ ತಂಡಕ್ಕೆ ವಾಪಾಸ್ಸಾಗಿದ್ದಾರೆ.
ಮಹಿಳಾ ಹಾಕಿ ತಂಡ:
ಗೋಲುಕೀಪರ್ : ಸವಿತಾ(ಉಪನಾಯಕಿ)
ಡಿಫೆಂಡರ್ಸ್ : ಸುನೀತಾ ಲಕ್ರಾ, ದೀಪ್ ಗ್ರೇಸ್ ಎಕ್ಕಾ, ಸುಮನಾ ದೇವಿ ತೌಡಮ್, ದೀಪಿಕಾ, ಗುರ್ಜಿತ್ ಕೌರ್, ಸುಶೀಲಾ ಚಾನು ಪುಖ್ರಾಂಬಮ್
ಮಿಡ್‌ಫೀಲ್ಡರ್ಸ್ : ನಮಿತ ಟೊಪ್ಪೋ, ಲಿಲಿಮಾ ಮಿನ್ಜ್, ಮೋನಿಕಾ, ನೇಹಾ ಗೋಯಲ್, ನವಜೋತ್ ಕೌರ್, ನಿಕ್ಕಿ ಪ್ರಧಾನ್
ಫಾರ್ವಡ್ಸ್ : ರಾಣಿ ರಾಮ್‌ಪಾಲ್(ನಾಯಕಿ), ವಂದನಾ ಕಠಾರಿಯಾ, ನವನೀತ್ ಕೌರ್, ಲಾಲ್‌ರೆಮ್ಸಿಯಾಮಿ, ಉದಿತಾ, ಅನೂಪ್ ಬಾರ್ಲ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.