'ನಾನು ಸಾಯಬಹುದು ಡಾಕ್ಟರ್ ಎಚ್ಚರಿಕೆ ನೀಡಿದ್ದರು, ಆದರೂ ಬಾಕ್ಸಿಂಗ್‌ ರಿಂಗ್‌ನಲ್ಲಿ ಹೋರಾಡಿದೆ': ಸ್ವೀಟಿ

By Naveen Kodase  |  First Published Mar 31, 2023, 12:00 PM IST

ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ 4 ಚಿನ್ನ
ಚಾಂಪಿಯನ್‌ ಸ್ವೀಟಿ ಬೋರಾ ಹಿಂದಿದೆ ಒಂದು ಸ್ಪೂರ್ತಿಯ ಕಥೆ
ಸಾವಿಗೆ ಸವಾಲೊಡ್ಡಿ ಚಾಂಪಿಯನ್ ಪಟ್ಟ ಅಲಂಕರಿಸಿದ ಸ್ವೀಟಿ


ನವದೆಹಲಿ(ಮಾ.31): ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಿಖಾತ್ ಜರೀನ್‌, ಲವ್ಲೀನಾ ಬೊರ್ಗೊಹೈನ್‌, ನೀತೂ ಗಂಗೂಸ್‌ ಹಾಗೂ ಸ್ವೀಟಿ ಬೋರಾ ಚಿನ್ನದ ಪದಕ ಗೆಲ್ಲುವ ಮೂಲಕ ಇಡೀ ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ. ಆದರೆ ವಿಶ್ವ ಚಾಂಪಿಯನ್‌ ಪಟ್ಟಕ್ಕೇರುವ ಮುನ್ನ ಈ ಎಲ್ಲಾ ಮಹಿಳಾ ಬಾಕ್ಸರ್‌ಗಳು ಹಲವು ಸವಾಲುಗಳನ್ನು ಮೆಟ್ಟಿನಿಂತಿದ್ದಾರೆ. ಈ ಪೈಕಿ ಸ್ವೀಟಿ ಬೋರಾ ಅವರ ಹೋರಾಟ ಕಥೆ ಹಲವರಿಗೆ ಸ್ಪೂರ್ತಿಯಾಗಬಲ್ಲದು. 

ವೈದ್ಯರು ನನಗೆ ಮೊದಲೇ ಎಚ್ಚರಿಕೆ ನೀಡಿದ್ದರು. "ನಿನ್ನ ಕರುಳು ಡ್ಯಾಮೇಜ್‌ ಆಗಿದೆ. ನೀನು ಪಂಚ್‌ಗಳನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ನೀನು ವಾರ್ಮ್‌ ಅಪ್‌ ಮಾಡಿದರೆ, ಕರುಳು ಹೊರಬರಬಹುದು ಹಾಗೂ ನೀನು ಸಾಯಲುಬಹುದು ಎಂದು ಎಚ್ಚರಿಕೆ ನೀಡಿದ್ದರು. ಆದರೆ ನನ್ನ ನಿರ್ಧಾರ ಅಚಲವಾಗಿತ್ತು. ಒಂದು ದಿನ ನನಗೆ ಹಾಕಿದ್ದ ಡ್ರಿಪ್ ಕಿತ್ತೊಗೆದು ಆಸ್ಪತ್ರೆಯಿಂದ ಓಡಿ ಹೋಗಿದ್ದೆ. ನಾನು ನೇರವಾಗಿ ರೈಲ್ವೇ ಸ್ಟೇಷನ್‌ಗೆ ಓಡಿ ಬಂದಿದ್ದೆ, ಅಲ್ಲಿಂದ ಪ್ರಯಾಸಪಟ್ಟು ರೈಲು ಏರಿದೆ. ಆದ್ರೆ ರೈಲಿನೊಳಗೆ ಹೋಗುತ್ತಿದ್ದಂತೆಯೇ ಪ್ರಜ್ಞೆ ತಪ್ಪಿ ಬಿದ್ದೆ ಎಂದು ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

Tap to resize

Latest Videos

ಇನ್ನು ಇದಾಗಿ ಒಂದು ಗಂಟೆಯ ಬಳಿಕ ನನಗೆ ಪ್ರಜ್ಞೆ ಬಂತು. ನನ್ನ ಪೋಷಕರು ಕರೆ ಮಾಡಿ ವಾಪಾಸ್ ಬರುವಂತೆ ಹೇಳಿದರು. ನಾನು ಅವರ ಮಾತನ್ನು ಒಪ್ಪಲಿಲ್ಲ. ಒಂದು ವೇಳೆ ನೀವು ನನ್ನನ್ನು ಒತ್ತಾಯಪೂರ್ವಕವಾಗಿ ಮನೆಗೆ ಕರೆದೊಯ್ಯಲು ಬಂದರೆ, ನಾನು ಇಲ್ಲಿಂದಲೇ ರೈಲಿನಿಂದ ಹೊರಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸಿದ್ದೆ ಎಂದು ಸ್ವೀಟಿ ಹೇಳಿದ್ದಾರೆ.

Spain Masters: ಕ್ವಾರ್ಟರ್‌ಗೆ ಸಿಂಧು, ಶ್ರೀಕಾಂತ್‌ ಲಗ್ಗೆ

ಇದಾದ ಬಳಿಕ ನಡೆದ ರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಶಕ್ತಿ ಮೀರಿ ಹೋರಾಟ ಮಾಡಿ, ಕೋಚ್ ಸಹಾಯಪಡೆದು, ಬಾಕ್ಸಿಂಗ್ ರಿಂಗ್‌ನಿಂದ ಹೊರಬಂದೆ. ಆ ಸಂದರ್ಭದಲ್ಲಿ 5-6 ದಿನ ನಾನು ಯಾವುದೇ ಘನ ಆಹಾರವನ್ನು ಸೇವಿಸಿರಲಿಲ್ಲ, ಬದಲಾಗಿ ಕೇವಲ ನೀರು ಮತ್ತು ಟೀ ಅನ್ನು ಮಾತ್ರ ಸೇವಿಸುತ್ತಿದ್ದೆ. ನಾನು ಬೆಳ್ಳಿ ಪದಕವನ್ನು ಜಯಿಸಿದ ಬಳಿಕ ನೋವೆಲ್ಲಾ ಮರೆತು ಹೋಯಿತು ಎಂದು ಸ್ವೀಟಿ ಹೇಳಿದ್ದಾರೆ.

ಸತತ 2 ಚಿನ್ನ ಗೆದ್ದ: ನಿಖಾತ್‌ ದಾಖ​ಲೆ

ಹಲವು ವರ್ಷ​ಗಳ ಬಳಿಕ ಭಾರ​ತೀಯ ಮಹಿಳಾ ಬಾಕ್ಸ​ರ್‌​ಗಳು ವಿಶ್ವ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ಅಸಾಧಾ​ರಣ ಪ್ರದ​ರ್ಶನ ತೋರಿದ್ದು, 4 ಚಿನ್ನದ ಪದ​ಕ​ಗ​ಳನ್ನು ಮುಡಿ​ಗೇ​ರಿ​ಸಿ​ಕೊಂಡಿ​ದ್ದಾರೆ. ನೀತು ಗಂಗಾಸ್‌, ಸ್ವೀಟಿ ಬೋರಾ ನಿಖಾತ್‌ ಜರೀನ್‌ ಹಾಗೂ ಲವ್ಲೀನಾ ಬೋರ್ಗೋ​ಹೈನ್‌ ವಿಶ್ವ ಚಾಂಪಿ​ಯನ್‌ ಆಗಿ ಹೊರ​ಹೊ​ಮ್ಮಿ​ದ್ದಾರೆ.

ಮಹಿಳಾ ವಿಶ್ವಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ಸತತ 2 ಚಿನ್ನ ಗೆದ್ದ 2ನೇ ಬಾಕ್ಸರ್‌ ಎಂಬ ಖ್ಯಾತಿಗೆ ನಿಖಾತ್‌ ಪಾತ್ರ​ರಾ​ಗಿ​ದ್ದಾರೆ. ಈ ಮೊದಲು ಮೇರಿ​ ಕೋ​ಮ್‌ 2002, 2005, 2006, 2010, 2018ರಲ್ಲಿ ಚಿನ್ನ ಪಡೆ​ದಿ​ದ್ದ​ರು.

2006ರ ದಾಖಲೆ ಸಮ

ಭಾರತ ಈ ಬಾರಿ 4 ಚಿನ್ನದ ಪದಕ ಗೆದ್ದಿದ್ದು, 2006ರ ದಾಖ​ಲೆ​ಯನ್ನು ಸರಿ​ಗ​ಟ್ಟಿತು. 2006ರಲ್ಲಿ ಮೇರಿ ಕೋಮ್‌, ಸರಿತಾ ದೇವಿ, ಜೆನ್ನಿ​, ಲೇಖಾ ಕೆ.ಸಿ. ಚಾಂಪಿ​ಯನ್‌ ಆಗಿ​ದ್ದರು.
 

click me!