IPL 2023: ಉದ್ಘಾಟನಾ ಪಂದ್ಯದಲ್ಲಿ ಧೋನಿ vs ಹಾರ್ದಿಕ್‌ ಫೈಟ್‌

By Kannadaprabha NewsFirst Published Mar 31, 2023, 8:53 AM IST
Highlights

16ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ
ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್‌ಗೆ ಚೆನ್ನೈ ಸೂಪರ್ ಕಿಂಗ್ಸ್‌ ಸವಾಲು
ಗುರು-ಶಿಷ್ಯರ ಕಾದಾಟಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಸಜ್ಜು

ಅಹಮದಾಬಾದ್‌: 16ನೇ ಆವೃತ್ತಿಯ ಐಪಿಎಲ್‌ನ ಮೊದಲ ಪಂದ್ಯ ತಾಳ್ಮೆಯ ಪ್ರತಿರೂಪ ಎಂದೇ ಹೆಸರುವಾಸಿಯಾಗಿರುವ ಎಂ.ಎಸ್‌.ಧೋನಿ ಹಾಗೂ ಆಕ್ರಮಣಕಾರಿ ಆಟ, ನಡೆಗಳ ಮೂಲಕವೇ ಹೆಸರು ಮಾಡಿರುವ ಹಾರ್ದಿಕ್‌ ಪಾಂಡ್ಯ ನಡುವಿನ ಪೈಪೋಟಿಗೆ ವೇದಿಕೆಯಾಗಲಿದೆ. 4 ಬಾರಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್‌್ಸ ಹಾಗೂ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ನಡುವಿನ ಸೆಣಸಾಟದೊಂದಿಗೆ ಈ ಬಾರಿಯ ಐಪಿಎಲ್‌ಗೆ ಚಾಲನೆ ದೊರೆಯಲಿದೆ.

ಧೋನಿಯನ್ನು ತನ್ನ ‘ಗುರು’ ಎಂದು ಪರಿಗಣಿಸಿರುವ ಹಾರ್ದಿಕ್‌ ಹೊಸ ನಿಯಮಗಳನ್ನು ಎಷ್ಟುಸಮರ್ಪಕವಾಗಿ ಬಳಸಿಕೊಂಡು ಚೆನ್ನೈ ತಂಡದ ವಿರುದ್ಧ ರಣತಂತ್ರ ಹೆಣೆಯುತ್ತಾರೆ ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ.

ಪಾದಾರ್ಪಣಾ ಆವೃತ್ತಿಯಲ್ಲೇ ಗುಜರಾತ್‌ ಟೈಟಾನ್ಸ್‌ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಹಾರ್ದಿಕ್‌, ಭಾರತ ಟಿ20 ತಂಡದ ನಾಯಕತ್ವಕ್ಕೆ ಪ್ರಬಲ ಅಭ್ಯರ್ಥಿ ಎನಿಸಿದ್ದಾರೆ. ಈ ಸಲವೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿ ಬಿಸಿಸಿಐ ಆಯ್ಕೆಗಾರರ ಗಮನ ಸೆಳೆಯಲು ಎದುರು ನೋಡುತ್ತಿದ್ದಾರೆ.

ಶುಭ್‌ಮನ್‌ ಗಿಲ್‌ ತಮ್ಮ ವೃತ್ತಿಬದುಕಿನ ಶ್ರೇಷ್ಠ ಫಾಮ್‌ರ್‍ನಲ್ಲಿದ್ದು, ರಶೀದ್‌ ಖಾನ್‌ರ ಸ್ಥಿರತೆ ಒಂಚೂರು ಕಡಿಮೆಯಾಗಿಲ್ಲ. ಈ ಇಬ್ಬರು ತಂಡದ ಟ್ರಂಪ್‌ಕಾರ್ಡ್‌ಗಳೆನಿಸಿದ್ದಾರೆ. ವೇಗದ ಬೌಲಿಂಗ್‌ ವಿಭಾಗದಲ್ಲಿ ಗುಜರಾತ್‌ ಸ್ವಲ್ಪ ದುರ್ಬಲವಾಗಿರುವಂತೆ ಕಾಣುತ್ತಿದೆ. ಡೇವಿಡ್‌ ಮಿಲ್ಲರ್‌ ಇನ್ನೂ ತಂಡ ಕೂಡಿಕೊಂಡಿಲ್ಲ. ಹೀಗಾಗಿ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

IPL ಟಿ20ಗೆ ಈಗ ಸ್ವೀಟ್‌ 16..! ಟೂರ್ನಿ ಅದ್ಧೂರಿ ಆರಂಭಕ್ಕೆ ವೇದಿಕೆ ಸಜ್ಜು

ಇನ್ನು ಬೆನ್‌ ಸ್ಟೋಕ್ಸ್‌ ಸೇರ್ಪಡೆಯಿಂದ ಚೆನ್ನೈಗೆ ಆನೆಬಲ ಬಂದಂತಾಗಿದ್ದು, ತಂಡ ಇಂಪ್ಯಾಕ್ಟ್ ಆಟಗಾರನಾಗಿ ಯಾರನ್ನು ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದೆ. ಋುತುರಾಜ್‌, ಧೋನಿ, ಜಡೇಜಾ, ರಾಯುಡು ಅವರ ಬ್ಯಾಟಿಂಗ್‌ ಲಯದ ಮೇಲೆ ಚೆನ್ನೈನ ಫಲಿತಾಂಶಗಳು ನಿರ್ಧಾರವಾಗಬಹುದು. 6-7 ತಿಂಗಳಿಂದ ಕ್ರಿಕೆಟ್‌ನಿಂದ ದೂರವಿರುವ ದೀಪಕ್‌ ಚಹರ್‌ಗೆ ಕಮ್‌ಬ್ಯಾಕ್‌ ಮಾಡಲು ಇದು ಉತ್ತಮ ಸಮಯ ಎನಿಸಿದೆ.

ಒಟ್ಟು ಮುಖಾಮುಖಿ: 02

ಚೆನ್ನೈ: 00

ಗುಜರಾತ್‌: 02

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ಡೆವೊನ್‌ ಕಾನ್‌ವೇ, ಋುತುರಾಜ್‌ ಗಾಯಕ್ವಾಡ್‌, ಅಂಬಟಿ ರಾಯುಡು, ಮೋಯಿನ್ ಅಲಿ, ಬೆನ್‌ ಸ್ಟೋಕ್ಸ್‌, ಶಿವಂ ದುಬೆ, ಎಂ ಎಸ್ ಧೋನಿ(ನಾಯಕ) ರವೀಂದ್ರ ಜಡೇಜಾ, ದೀಪಕ್‌ ಚಹರ್‌, ಡ್ವೇನ್‌ ಪ್ರಿಟೋರಿಯಸ್‌, ಸಿಮರ್‌ಜೀತ್‌.

ಗುಜರಾತ್‌ ಟೈಟಾನ್ಸ್‌: ಶುಭ್‌ಮನ್‌ ಗಿಲ್‌, ವೃದ್ದಿಮಾನ್ ಸಾಹ, ಕೇನ್ ವಿಲಿಯಮ್ಸನ್‌, ಹಾರ್ದಿಕ್‌ ಪಾಂಡ್ಯ(ನಾಯಕ), ಮ್ಯಾಥ್ಯೂ ವೇಡ್‌, ರಾಹುಲ್ ತೆವಾಟಿಯಾ, ರಶೀದ್‌ ಖಾನ್, ಸಾಯಿ ಕಿಶೋರ್‌, ಯಶ್‌ ದಯಾಳ್‌, ಅಲ್ಜಾರಿ ಜೋಸೆಫ್‌, ಮೊಹಮ್ಮದ್‌ ಶಮಿ.

ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ಹಾಗೂ ಜಿಯೋ ಸಿನಿಮಾ

ಪಿಚ್‌ ರಿಪೋರ್ಚ್‌

ಮೋದಿ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿ ಎನಿಸಿದ್ದು, ಇಲ್ಲಿ ಮೊದಲ ಇನ್ನಿಂಗ್‌್ಸನ ಸರಾಸರಿ ಮೊತ್ತ 170 ರನ್‌ ಇದೆ. ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳಿಗೆ ನೆರವು ಸಿಗಲಿದೆ. ಮೊದಲು ಫೀಲ್ಡ್‌ ಮಾಡಿದ ತಂಡವೇ ಹೆಚ್ಚಾಗಿ ಗೆದ್ದಿರುವುದು ಗಮನಾರ್ಹ ಅಂಶ.

click me!