
ಸೈಂಟ್ ಪೀಟರ್ಸ್‌ಬರ್ಗ್(ಜೂನ್.9): ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಪಂದ್ಯದಲ್ಲಿ ಸೋಲು-ಗೆಲುವು ಲೆಕ್ಕಾಚಾರ ಹಾಕಲು ಇದೀಗ ಅಚಿಲೆಸ್ ಬೆಕ್ಕು ರೆಡಿಯಾಗಿದೆ. 2010ರಲ್ಲಿ ಪೌಲ್ ಅಕ್ಟೋಪಸ್ ಫಿಫಾ ಪಂದ್ಯದ ಭವಿಷ್ಯ ಹೇಳೋ ಮೂಲಕ ಭಾರಿ ಜನಪ್ರೀಯವಾಗಿತ್ತು. ಆದರೆ ಈ ಬಾರಿ ಅಚಿಲೆ ಬೆಕ್ಕು ಸೋಲು-ಗೆಲುವಿನ ಭವಿಷ್ಯ ನುಡಯಲಿದೆ.
ಈ ಬಾರಿಯ ವಿಶೇಷತೆ ಅಂದರೆ ಅಚಿಲೆಸ್ ಬೆಕ್ಕಿಗೆ ಕಿವಿ ಕೇಳಿಸಲ್ಲ. ಪಂದ್ಯಕ್ಕೂ ಮೊದಲು ತಂಡಗಳ ಧ್ವಜವಿರೋ ಪಾತ್ರೆಗಳನ್ನ ಇಡಲಾಗುತ್ತೆ. ಬೆಕ್ಕು ಯಾವುದನ್ನ ಮೊದಲು ಮುಟ್ಟುತ್ತೋ ಆ ತಂಡ ಗೆಲ್ಲಲಿದೆ ಎಂದು ಬೆಕ್ಕಿಗೆ ತರಬೇತಿ ನೀಡಿರುವ ಹರ್ಮಿಟೇಜ್ ಮ್ಯೂಸಿಯಂನ ಅನಾ ಕಸಾಕ್ತಿನ ಹೇಳಿದ್ದಾರೆ.
2010ರ ಫಿಫಾ ಪಂದ್ಯದ ವೇಳೆ ಪೌಲ್ ಅಕ್ಟೋಪಸ್ ಭವಿಷ್ಯ ಬಹುತೇಕ ನಿಜವಾಗಿತ್ತು. ಹೀಗಾಗಿ ಪೌಲ್ ಭವಿಷ್ಯ ವಿಶ್ವದಲ್ಲೇ ಮನೆಮಾತಾಗಿತ್ತು. ಈ ಬಾರಿ ಅಚಿಲೆಸ್ ಭವಿಷ್ಯ ನಿಜವಾಗುತ್ತಾ ಅನ್ನೋ ಕುತೂಹಲ ಈಗ ಫಿಫಾ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.