ಇಲ್ಲಿನ ಕೆಎಸ್‌ಎಲ್’ಟಿಎ ಟೆನಿಸ್ ಕೋರ್ಟ್‌ನಲ್ಲಿ ನಡೆದ ಪಂದ್ಯದ ಆರಂಭದಿಂದಲೂ ಪ್ರಜ್ನೇಶ್ ಆಕ್ರಮಣಕಾರಿ ಆಟವಾಡಿದರು. ಸಾಕೇತ್ ರನ್ನರ್ ಅಪ್’ಗೆ ತೃಪ್ತಿಪಟ್ಟರು.
ಬೆಂಗಳೂರು[ನ.18]: ಇಲ್ಲಿ ಶನಿವಾರ ಮುಕ್ತಾಯವಾದ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ 4ನೇ ಶ್ರೇಯಾಂಕಿತ ಭಾರತದ ಪ್ರಜ್ನೇಶ್ ಗುಣೇಶ್ವರನ್ ಚಾಂಪಿಯನ್ ಆಗಿ ಹೊರಹೊಮ್ಮಿದರು, ಸಿಂಗಲ್ಸ್ ಫೈನಲ್‌ನಲ್ಲಿ ಪ್ರಜ್ನೇಶ್, ಭಾರತದವರೇ ಆದ ಸಾಕೇತ್ ಮೈನೇನಿ ವಿರುದ್ಧ 6-2, 6-2 ಸೆಟ್’ಗಳಲ್ಲಿ ಗೆಲುವು ಸಾಧಿಸಿದರು.
ಇದರೊಂದಿಗೆ ಪ್ರಜ್ನೇಶ್ ಎಟಿಪಿ ರ‍್ಯಾಂಕಿಂಗ್‌ನಲ್ಲಿ 110ನೇ ಸ್ಥಾನಕ್ಕೇರಿದರು. ಸಾಕೇತ್ ರನ್ನರ್ ಅಪ್’ಗೆ ತೃಪ್ತಿಪಟ್ಟರು. ಇಲ್ಲಿನ ಕೆಎಸ್‌ಎಲ್’ಟಿಎ ಟೆನಿಸ್ ಕೋರ್ಟ್‌ನಲ್ಲಿ ನಡೆದ ಪಂದ್ಯದ ಆರಂಭದಿಂದಲೂ ಪ್ರಜ್ನೇಶ್ ಆಕ್ರಮಣಕಾರಿ ಆಟವಾಡಿದರು.
ಆರಂಭದಲ್ಲಿ ಮುನ್ನಡೆ ಸಾಧಿಸಿದ ಪ್ರಜ್ನೇಶ್, ಸಾಕೇತ್ ಅವರ ಸರ್ವ್’ಗಳನ್ನು ಬ್ರೇಕ್ ಮಾಡಿ ಅಂಕಹೆಚ್ಚಿಸಿಕೊಂಡರು. 2 ಸೆಟ್‌ಗಳ ಆಟದಲ್ಲೂ 4 ಪಾಯಿಂಟ್ ಅಂತರದಿಂದ ಪ್ರಜ್ನೇಶ್ ಪಂದ್ಯ ಗೆದ್ದರು.