ಲಾರ್ಡ್ಸ್‌ನಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ ತಂಡಕ್ಕಿಲ್ಲ ಅದೃಷ್ಠ

By Web DeskFirst Published Aug 10, 2018, 7:22 PM IST
Highlights

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ತಂಡಕ್ಕೆ ಗೆಲುವಿನ ಅದೃಷ್ಠ ತೀರಾ ಕಡಿಮೆ. ಇದೀಗ ಇಂಗ್ಲೆಂಡ್ ಕೂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಲಾರ್ಡ್ಸ್‌ನಲ್ಲಿ ಟಾಸ್ ಅದೃಷ್ಠ ಹೇಗಿದೆ? ಇಲ್ಲಿದೆ.

ಲಾರ್ಡ್ಸ್(ಆ.10): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯ ಆರಂಭಗೊಂಡ ಕೆಲ ಹೊತ್ತಲ್ಲೇ ಮತ್ತೆ ಮಳೆಗೆ ಆಹುತಿಯಾಗಿದೆ. ಮೊದಲ ದಿನ ಮಳೆಯಿಂದಾಗಿ ಸಂಪೂರ್ಣ ರದ್ದಾಗಿತ್ತು. ಹೀಗಾಗಿ ದ್ವಿತೀಯ ದಿನ ಟಾಸ್ ಗೆದ್ದು ಫೀಲ್ಡಿಂಗ್ ಇಳಿದ ಇಂಗ್ಲೆಂಡ್ ಆರಂಭದಲ್ಲೇ 2 ವಿಕೆಟ್ ಕಬಳಿಸಿದೆ. ಆದರೆ ಅಷ್ಟರಲ್ಲೇ ಸುರಿದ ಮಳೆ ಪಂದ್ಯವನ್ನ ಸ್ಥಗಿತಗೊಳಿಸಿದೆ.

ಲಾರ್ಡ್ಸ್ ಟೆಸ್ಟ್‌ ಪಂದ್ಯದಲ್ಲಿ ಭಾರತ 2 ವಿಕೆಟ್ ಕಳೆದುಕೊಂಡಿದೆ ಎಂದು ಆತಂಕ ಪಡೋ ಅಗತ್ಯವಿಲ್ಲ. ಲಾರ್ಡ್ಸ್ ಪಂದ್ಯದ ಅಂಕಿ ಅಂಶ ಭಾರತದ ಪರವಾಗಿದೆ. ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ತಂಡಕ್ಕೆ ಅದೃಷ್ಠ ಕೈಹಿಡಿದಿಲ್ಲ.

ಲಾರ್ಡ್ಸ್‌ನಲ್ಲಿ ನಡೆದ ಕಳೆದ 10 ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ತಂಡ 7 ಬಾರಿ ಸೋಲು ಕಂಡಿದೆ. 2 ಬಾರಿ ಡ್ರಾ ಹಾಗೂ ಕೇವಲ 1 ಬಾರಿ ಗೆಲುವು ಕಂಡಿದೆ. ಈ ಮೂಲಕ ಟಾಸ್ ಗೆದ್ದ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರೆ ಹಿನ್ನಡೆಯಾಗೋ ಸಾಧ್ಯತೆ ಇದೆ ಅನ್ನೋದನ್ನ ಅಂಕಿ ಅಂಶ ಬಹಿಂರಗ ಪಡಿಸಿದೆ.

2011ರಲ್ಲಿ ಭಾರತ ಲಾರ್ಡ್ಸ್ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಪಂದ್ಯ ಸೋತಿತ್ತು. ಇನ್ನು 2014ರಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ರೆ, ಟಾಸ್ ಗೆದ್ದ ಇಂಗ್ಲೆಂಡ್ ಸೋಲು ಅನುಭವಿಸಿತ್ತು.

ಇದೀಗ ಇಂಗ್ಲೆಂಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆಮಾಡಿಕೊಂಡಿದೆ. ಹೀಗಾಗಿ ಈ ಪಂದ್ಯದಲ್ಲೂ ಅಂಕಿ ಅಂಶ ನಿಜವಾಗುತ್ತಾ? ಇಲ್ಲಾ ಪಂದ್ಯ ಮಳೆಗೆ ಆಹುತಿಯಾಗುತ್ತಾ?  ಈ ಹಲವು ಪ್ರಶ್ನೆಗಳು ಇದೀಗ ಉತ್ತರಕ್ಕಾಗಿ ಕಾಯುತ್ತಿದೆ.

click me!